
ಭದ್ರಾ ಜಲಾಶಯದ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ಕಾರಣ ಭದ್ರಾ ಜಲಾಶಯಕ್ಕೆ ಹೆಚ್ಚು ನೀರು ಬರುತ್ತಿದೆ ಆದಕಾರಣ ಇಂದು ಜಲಾಶಯದಿಂದ ನಾಲ್ಕು ಗೇಟ್ ಗಳ ಮೂಲಕ 3000 ಕ್ಯೂಸೆಕ್ಸ್ ನೀರನ್ನು ಇಂದು ನದಿಗೆ ಬಿಡಲಾಯಿತು
ಈ ಸಮಯದಲ್ಲಿ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಬಾಗಿನ ಸಮರ್ಪಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪವಿತ್ರ ರಾಮಯ್ಯ ಭದ್ರಾ ಜಲಾಶಯದಿಂದ ನಾಲ್ಕು ಗೇಟ್ ಗಳ ಮೂಲಕ 3000 ಕ್ಯೂಸೆಕ್ಸ್ ಜಲಾಶಯದಿಂದ ನೀರನ್ನು ಹೊರ ಬಿಡಲಾಗುತ್ತಿದೆ ಒಳ ಹರಿವು 40,000 ಕ್ಯೂಸೆಕ್ಸ್ ಇದ್ದು ಹಂತ ಹಂತವಾಗಿ ನದಿಗೆ ನೀರನ್ನು ಬಿಡಲಾಗುತ್ತದೆ ಕಳೆದ ವರ್ಷ ಜಲಾಶಯದ ಮಟ್ಟ 154 ಅಡಿ ಇದ್ದು ಈ ವರ್ಷ 184 ಅಡಿ ನೀರು ಬಂದಿರುತ್ತೆ ಕಾಡ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಬೇಗ ನೀರು ಜಲಾಶಯಕ್ಕೆ ನೀರು ಬಂದಿರುವುದು ಮೊದಲು, ಸಂತಸ ತಂದಿದೆ ಎಂದು ತಿಳಿಸಿದರು.