ಗುರುವಾರ ರಾತ್ರಿ ಸುಮಾರು 10.20ರ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಉಂಟಾದ ಬಾರಿ ಕಂಪನದ ಹಿನ್ನಲೆಯಲ್ಲಿ ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ತೆರಳಿ ಭದ್ರಾ ಜಲಾಶಯವನ್ನು ವೀಕ್ಷಣೆ ಮಾಡಿ ಜಲಾಶಯದ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಭದ್ರಾ ಕಾಡ ಪ್ರಾಧಿಕಾರವು ಸುಮಾರು 12ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದು, ಸುಮಾರು 5ಲಕ್ಷ ಹೆಕ್ಟೇರ್ ಭೂ ಪ್ರದೇಶಕ್ಕೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿರುತ್ತದೆ. ಲಕ್ಷಾಂತರ ರೈತರಿಗೆ ಭದ್ರಾ ಜಲಾಶಯವು ಜೀವನಾಡಿಯಾಗಿದ್ದು ಅಚ್ಚುಕಟ್ಟು ಭಾಗದ ರೈತರು ಇದನ್ನೇ ನಂಬಿ ಬದುಕುತ್ತಿದ್ದಾರೆ.ಭೂ ಕಂಪನದಿಂದ ಯಾವುದೇ ರೀತಿಯಲ್ಲಿ ಜಲಾಶಯಕ್ಕೆ ತೊಂದರೆಯಾಗುವುದಿಲ್ಲ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.

error: Content is protected !!