ಶಿವಮೊಗ್ಗ ಮೇ 09: ಬರಡಾದ ಭೂಮಿಗೆ ಗಂಗೆಯನ್ನು ಹರಿಸಿ, ಸಹಸ್ರಾರು ಕುಟುಂಬಗಳ ಹಸಿವು, ದಾರಿದ್ರ್ಯ ನಿವಾರಿಸಿದ ಭಗೀರಥ ಮಹರ್ಷಿಯವರ ಪ್ರಯತ್ನ, ಛಲ, ತಪಸ್ಸು, ಏಕಾಗ್ರತೆ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದೆ ಎಂದು ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಉಪನ್ಯಾಸಕ ಮೋಹನ್ ಚಂದ್ರಗುತ್ತಿ ಅವರು ಹೇಳಿದರು.
ಅವರು ಇಂದು ಜಿಲ್ಲಾಡಾಳಿತ , ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಉಪ್ಪಾರ ಸಮಾಜ ಇವರುಗಳ ಸಂಯುಕ್ತಾಶ್ರಯದಲ್ಲಿ ನಗದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡುತ್ತಿದ್ದರು.
ಪುರಾಣ-ಪುಣ್ಯ ಕತೆಗಳಲ್ಲಿ ಕಂಡುಬರುವ ಪಾತ್ರಗಳನ್ನು ವಾಸ್ತವದೊಂದಿಗೆ ತುಲನೆ ಮಾಡಿಕೊಳ್ಳದೆ ಆ ಪಾತ್ರ ಹೊಂದಿದ್ದ ಮಹತ್ವ ಮತ್ತು ಆ ವ್ಯಕ್ತಿತ್ವದಲ್ಲಿನ ಶಕ್ತಿಯನ್ನು ಆದರ್ಶವಾಗಿ ಉಳಿಸಿಕೊಂಡು ಅನುಸರಿಸಬೇಕೆಂದವರು ನುಡಿದರು.
ಸುಮಾರು ಒಂದು ಲಕ್ಷ ವರ್ಷಗಳ ಇತಿಹಾಸ, ಸಹಸ್ರಾರು ವರ್ಷಗಳ ರಾಪರಂಪರೆ ಹೊಂದಿರುವ ಉಪ್ಪಾರ ಜನಾಂಗದ ಪೂರ್ವಿಕರು ಸಿಂದೂ ಮತ್ತು ಬ್ರಹ್ಮಪುತ್ರ ನದಿಯ ತಟದಲ್ಲಿದ್ದರು. ಶಿವ ಆರಾಧ್ಯ ದೈವ. ಉಪ್ಪನ್ನು ತಯಾರಿಸುವ ಕಾರ್ಖಾನೆಗಳನ್ನು ಹೊಂದಿದ್ದ ಶ್ರೀಮಂತ ಉದ್ದಿಮೆದಾರರಾಗಿದ್ದರು. ಕಾಲಾನಂತರದಲ್ಲಿ ವೃತ್ತಿ ಬದಲಾಯಿಸಿಕೊಂಡಿದ್ದಾರೆ ಎಂದರು.
ಶ್ರಮಿಕ ಸಮುದಾಯದವರಾದ ಉಪ್ಪಾರರು ಅವಲಂಬಿತರಾಗದೆ ಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಳ್ಳಬೇಕೆಂದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಪರ ಜಿಲ್ಲಾಧಿಕಾರಿ ಡಾಕ್ಟರ್ ನಾಗೇಂದ್ರ ಎಫ್. ಹೊನ್ನಳ್ಳಿ ಅವರು ಮಾತನಾಡಿ, ಈ ಸಮುದಾಯದ ಹಿರಿಯರು ತಮ್ಮ ಮಕ್ಕಳಿಗೆ ಸಕಾಲಿಕ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೆಂದರು.
ದಾರ್ಶನಿಕರ, ಸಾಧು-ಸತ್ಫುರುಷರ ಜೀವನಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದ ಅವರು, ಇಂದಿನ ಯುವಕರು ತಮ್ಮ ಪೆÇೀಷಕರನ್ನು ನಿರ್ಲಕ್ಷಿಸದೆ, ವೃದ್ರಾಶ್ರಮಗಳಿಗೆ ಕಳುಹಿಸದೆ ಪ್ರೀತಿಯಿಂದ ಸಲುಹಬೇಕೆಂದು ಸಲಹೆ ನೀಡಿದರು
ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಸುನೀತಾ ಅಣ್ಣಪ್ಪ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಸದಸ್ಯ ನಾಗರಾಜ್ ಕಂಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಮುಂತಾದವರು ಉಪಸ್ಥಿತರಿದ್ದರು.