ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ ಶಿವಮೊಗ್ಗ ಆವರಣದ, ಬೇಕರಿ ಘಟಕದಲ್ಲಿ ಬೇಕರಿ ಉತ್ಪನ್ನಗಳ ತಯಾರಿಕೆಯ ಬಗ್ಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ದಿನಾಂಕ: 23-05-2022 ರಿಂದ 25-05-2022 ರವರೆಗೆ ಆಯೋಜಿಸಲಾಗುತ್ತಿದೆ. ತರಬೇತಿಯಲ್ಲಿ ಭಾಗವಹಿಸಲಿಚ್ಛಿಸುವವರು, ತರಬೇತಿ ಶುಲ್ಕ ಪ್ರತಿ ದಿನ ರೂ. 100/- ರಂತೆ 3 ದಿನಗಳಿಗೆ ಒಟ್ಟು ರೂ. 300/- ಗಳನ್ನು ಪಾವತಿಸಿ, ದಿನಾಂಕ 22-05-2022ರೊಳಗೆ ದೂರವಾಣಿ ಮೂಲಕ ಅಥವಾ ಖುದ್ದಾಗಿ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ಹೆಸರು ನೊಂದಾಯಿಸ ಬಹುದಾಗಿದೆ.

ಸೂಚನೆ :

  1. ಮೊದಲು ನೊಂದಾಯಿಸಿದ 12 ಜನರಿಗೆ ಮಾತ್ರ ಅವಕಾಶವಿರುತ್ತದೆ.
  2. ತರಬೇತಿಗೆ ಬರುವಾಗ ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್‍ನ್ನು ತರಬೇಕು.
  3. ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಅವಕಾಶ.
  4. ವಯಸ್ಸು 18 ರಿಂದ 35 ವರ್ಷದೊಳಗೆ ಇರಬೇಕು.

ಸಂಪರ್ಕಿಸುವ ವಿಳಾಸ :

ಡಾ. ಶಿವಲೀಲಾ ಪಾಟೀಲ.
ಎಸ್.ಆರ್.ಎಫ್.
ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ – 577 204.
ಮೊಬೈಲ್ : 7411680410

error: Content is protected !!