ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸದೆ, ದೇಶದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ ಮಾಡಿದ ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ “ಬಿಜೆಪಿಗರೇ ಸರಕಾರ ಬಿಟ್ಟು ತೊಲಗಿ” ಎಂಬ ಘೋಷಣೆಯೊಂದಿಗೆ – ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ಕೇಂದ್ರದ ಜನ ವಿರೋಧಿ ಭ್ರಷ್ಟ ಬಿಜೆಪಿ ಸರ್ಕಾರ ದಿನನಿತ್ಯ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಾ , ದೇಶದ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಿ ಶ್ರೀಸಾಮಾನ್ಯನ ಮೇಲೆ ದಿನನಿತ್ಯ ಬರೆಯಾಕುತ್ತಾ ಯುವಕರಿಗೆ ಉದ್ಯೋಗ ನೀಡುವ ಬದಲು ಕೋಮುವಾದ ಎಂಬ ನಷೆಯನ್ನು ಎಂದು “ಬಿಜೆಪಿಗರೇ ಸರ್ಕಾರ ಬಿಟ್ಟು ತೊಲಗಿ” ಎಂಬ ಘೋಷಣೆಯೊಂದಿಗೆ ಇಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು

ಅಡಿಗೆ ಅನಿಲದ ಬೆಲೆ ಈಗಾಗಲೇ ಸಾವಿರ ರೂ ಗಡಿಯನ್ನು ದಾಟಿದ್ದು ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕ ಪರಿಸ್ಥಿತಿಯನ್ನು 164 ನೇ ಸ್ಥಾನಕ್ಕೆ ತಂದು ನಿಲ್ಲಿಸಿರುವುದು ಕೇಂದ್ರ ಬಿಜೆಪಿ ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಶ್ರೀಸಾಮಾನ್ಯ ಸಂಕಷ್ಟಪಡುವ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೇ ಹೇಳಿದಂತಾಗಿದೆ ಹಲವು ಬಾರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ನೀಡಿದರು ಸಹ ಯಾವುದೇ ಆರ್ಥಿಕ ವ್ಯವಸ್ಥೆಯನ್ನು ಹತೋಟಿಗೆ ತರವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿ 40% ಕಮಿಷನ್ ಲೂಟಿ ಹೊಡೆಯುತ್ತಾ ಸರ್ಕಾರಿ ಸೌಮ್ಯದ ಸಂಸ್ಥೆಗಳನೆಲ್ಲ ಖಾಸಗಿಕರಣ ಮಾಡುತ್ತಾ , ರೈತ, ಶ್ರೀಸಾಮಾನ್ಯನಿಗೆ ಜನವಿರೋಧಿ ಆಡಳಿತ ನಡೆಯುತ್ತಿರುವ ಭ್ರಷ್ಟ ಕೇಂದ್ರ ಬಿಜೆಪಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಸುಳ್ಳು ಹೇಳಿ ಈಗಾಗಲೇ ಕಳೆದ ಎಂಟು ವರ್ಷದಲ್ಲಿ 16 ಕೋಟಿ ಉದ್ಯೋಗ ಎಲ್ಲಿ ಎಂಬುದು ಯುವಕರ ಯಕ್ಷಪ್ರಶ್ನೆಯಾಗಿದೆ, ಯುವಕರಿಗೆ ಉದ್ಯೋಗ ಕೊಡುವ ಬದಲು “ಕೋಮುವಾದವೆಂಬ ನಶೆಯನ್ನು ತುಂಬುತ್ತಿರುವುದು ತೀವ್ರ ಖಂಡನೆ, ಈ ಕೂಡಲೇ ರಾಷ್ಟ್ರಪತಿಗಳು ಈ ಜನ ವಿರೋಧಿ ದಿವಾಳಿತನದ ಸರ್ಕಾರವನ್ನು ವಜಾ ಮಾಡಬೇಕೆಂದು ಯುವ ಕಾಂಗ್ರೆಸ್ ಆಗ್ರಹಿಸುತ್ತದೆ

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ , ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್ ,, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್ , ಮಹಿಳಾ ಮುಖಂಡರಾದ ಜಿ. ಪಲ್ಲವಿ ಕವಿತಾ ಸ್ತೆಲ್ಲ ಮಾರ್ಟಿನ್ , ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಎಮ್ ರಾಹುಲ್ , ಇರ್ಫಾನ್, ಪುಷ್ಪಕ್ ಕುಮಾರ, ಎಂ ರಾಕೇಶ್ , ರಾಜೀವ್ ರಾಯ್ಕರ್ , ಕೆ ಎಲ್ ಪವನ್ , ಜಮೀಲ್, ಮೋಹನ್ ಸೋಮಿನಕೊಪ್ಪ, ನದಿಮ್ ಮದರಿಪಾಳ್ಯ,ಮಸ್ತಾನ್ , ಮಹಮದ್ ಫೈರೋಜ್ ಶಾರು , ಚೇತನ್ , ಏನಶ್, ನಾಗರಾಜ್ , ಯುವರಾಜ್ , ಸಿದ್ದಿಕ್, ಅಬ್ದುಲ್ , ನದೀಮ್ ಸವಯಿಪಾಳ್ಯ ಫರ್ದಿನ್ ,ಯುವ ಕಾರ್ಯಕರ್ತರು ಭಾಗವಹಿಸಿದ್ದರು

error: Content is protected !!