ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಬಿಜಿಎಸ್-9 ಹೆಸರು ತಳಿಯ ಕ್ಷೇತ್ರೋತ್ಸವ ನಡೆಯಿತು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ಮಾತನಾಡಿ ಬೀಜದಿಂದ ಬೀಜದವರೆಗಿನ ಕೃಷಿ ತಂತ್ರಜ್ಞಾನಗಳನ್ನು ರೈತರು ವೈಜ್ಞಾನಿಕವಾಗಿ ಅನುಸರಿಸುವುದರಿಂದ ಅಲ್ಪ-ಸ್ವಲ್ಪ ಮಳೆಗೂ ಬೆಳೆಯ ತಳಿಯು ಉತ್ತಮ ಇಳುವರಿ ನೀಡಿದ್ದು, ಬೀಜಶೇಖರಣೆಗೆ ಶಿಫಾರಸ್ಸಿನ ಕೊಯ್ಲು ಮತ್ತು ಶೇಖರಣಾ ತಂತ್ರಜ್ಞಾನ ಅಳವಡಿಸುವಂತೆ ರೈತರಿಗೆ ಸಲಹೆ ನೀಡಿದರು. ಪಲ್ಸ್ ಮ್ಯಾಜಿಕ್ ಸಿಂಪರಣೆಯಿಂದ ಹೂ, ಕಾಯಿ ಎಲೆಗಳ ರಚನೆ ಉತ್ತಮಗೊಂಡಿದೆ. ಸಸ್ಯರೋಗ ತಜ್ಞರಾದ ಜಹೀರ ಅಹಮದ್ ಮಾತನಾಡಿ ಎಲೆಚುಕ್ಕೆ, ಬೂದಿ ರೋಗದಿಂದ ಪ್ರಸ್ತುತ ಈ ತಳಿಯು ಪಾರಾಗಲು ರೈತರು ಜೂನ್ ಆರಂಭದಲ್ಲಿ ಸಕಾಲಕ್ಕೆ ಬಿತ್ತನೆಯೇ ಕಾರಣವಾಗಿದೆ. ಹಳದಿ ಅಂಟು ಮೋಹಕ ಬಲೆ ಎಕೆರೆಗೆ 8-10 ಅಳವಡಿಸುವುದರಿಂದ ನಂಜಾಣು ತರುವ ಕೀಟಗಳ ನಿಯಂತ್ರಣವಾಗುತ್ತದೆ ಎಂದರು. ಸೈದಪ್ಪ ನಾಟೀಕರ್ ಸ್ವಾಗತಿಸಿದರು. ನಿರಂಜನ ಧನ್ನಿ ವಂದಿಸಿದರು. ರೈತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.