*ಕೊರೋನ ವೈರಸ್ ಲಾಕ್ ಡೌನ್ ನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಬಡವರು ಕೂಲಿ ಕಾರ್ಮಿಕರ ಜೀವನ ಅಧೋಗತಿಗೆ ಇಳಿದಿದ್ದು ಅನ್ನಕ್ಕಾಗಿ ಹಾಹಾಕಾರ ಹೆಚ್ಚಾಗಿದ್ದು ಇಂತಹ ಸಂದರ್ಭದಲ್ಲಿ ನಮ್ಮ ಮಹಾನಗರ ಪಾಲಿಕೆಯಿಂದ ನಗರದ ಎಲ್ಲ ವಾರ್ಡಿನ ಬಡ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ಒದಗಿಸಬೇಕೆಂದು ಪಾಲಿಕೆ ಆಯುಕ್ತರಿಗೆ ಮಹಾನಗರ ಪಾಲಿಕೆ ಸದಸ್ಯೆ ರೇಖಾರಂಗನಾಥ್ ಮನವಿ ಮಾಡಿದ್ದಾರೆ.
*ಪಾಲಿಕೆ ಆಯುಕ್ತರಿಗೆ ಮನವಿ ನೀಡಿ ಮಾತನಾಡಿದ ಅವರು ನಗರದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು ಇವರು ಇವರ ಕುಟುಂಬ ದಿನಿನಿತ್ಯದ ಕೂಲಿಗೆ ಆಧಾರವಾಗಿದ್ದು. ಆದರೆ ಲಾಕ್ ಡೌನ್ ನಿಂದ ಕಳೆದ 19 ದಿನಗಳಿಂದ ಯಾವುದೇ ಕೆಲಸ ವಿಲ್ಲದೇ ಮನೆಯಲ್ಲಿ ಇರುವುದರಿಂದ ಇವರುಗಳಿಗೆ ದಿನನಿತ್ಯದ ಆಹಾರ ಹಾಗೂ ಆಹಾರದ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಪರದಾಡುವಂತಹ ಸ್ಥಿತಿಯಾಗಿ ಹಸಿವಿನಿಂದ ತತ್ತರಿಸಿ ಹೋಗಿದ್ದಾರೆ . ಹಾಗೆಯೇ ನಗರದ ಇಪ್ಪತ್ತು ನೇ ವಾರ್ಡ್ ಹೊಸಮನೆ ಬಡಾವಣೆಯ ನನ್ನ ವಾರ್ಡ್ನಲ್ಲೂ ಸುಮಾರು ಎರಡು ಸಾವಿರ ಬಡ ಕುಟುಂಬಗಳಿದ್ದು. ಇಂತಹ ಸಂದರ್ಭದಲ್ಲಿ ನನ್ನ ವಾರ್ಡಿಗೆ ಕಾಮಗಾರಿ ಯೋಜನೆಗೆಂದು ಮೀಸಲಿಟ್ಟಿರುವ ಹಣವನ್ನು ಇಂತಹ ಮಹತ್ಕಾರ್ಯಕ್ಕೆ ವಿನಿಯೋಗಿಸಿ ವಾರ್ಡಿನ ಬಡ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸುವ ಮೂಲಕ ಕರೋನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಬಡವರಿಗೆ ಆತ್ಮಸ್ಥೈರ್ಯ ತುಂಬಬೇಕೆಂದು ಅವರು ತಿಳಿಸಿದರು*