ಶಿವಮೊಗ್ಗ: ಫೆ: 01 : ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಜಾನಪದ ಕಲಾ ಕೇಂದ್ರ, ಕರ್ನಾಟಕ ರಾಜ್ಯ ಗ್ರಾಮ ಅರಣ್ಯ ಸಮಿತಿಗಳ ಒಕ್ಕೂಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಫೆ: 7ರಂದು ಜಾನಪದ ಯುವಜನೋತ್ಸವ ಸುಗ್ಗಿ ಸಂಭ್ರಮ ವೈವಿಧ್ಯಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಹೇಳಿದರು.
ಅವರು ಹೊಸಮನೆಯ ಪತಂಜಲಿ ಯೋಗ ಕಲಾ ಮಂದಿರದಲ್ಲಿ ಏರ್ಪಡಿಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಫೆ: 7ರಂದು ಮಧ್ಯಾಹ್ನ 3 ಗಂಟೆಗೆ ಕನಕ ಕ್ಲಿನಿಕ್ ಆರ್ಯುವೇದ ವೈದ್ಯೆ ಡಾ: ಅಶ್ವಿನಿ ಕಾರ್ಯಕ್ರಮವನ್ನು ಉದ್ಫಾಟಿಸಿ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಎಂ.ಈಶ್ವರಪ್ಪ ನವುಲೆ ವಹಿಸುವರು. ಉಪಾಧ್ಯಕ್ಷ ಡಾ: ಪಿ.ಬಾಲಪ್ಪ ಉಪಸ್ಥಿತರಿರುವರು ಎಂದು ಹೇಳಿದರು.
ಜಾನಪದ ಯುವಜನೋತ್ಸವ ಸುಗ್ಗಿ ಸಂಭ್ರಮ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಜಾನಪದ ಗೀತಾಗಾಯನ, ಕೋಲಾಟ, ಕಂಸಾಳೆ ನೃತ್ಯ ಸೇರಿದಂತೆ ಹಲವು ಕಲಾ ಪ್ರಕಾರದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜ್‍ಕುಮಾರ್, ಇಂಡೋಪಿಲ್ ಪೆಸ್‍ಟಿಸೈಡ್ಸ್ ಡಿ.ಜಿ.ಇ. ಹೆಚ್.ಎ.ಮಂಜುನಾಥ್, ಭಾಗ್ಯಲಕ್ಷ್ಮೀ, ಸುನೀಲ್, ವಿಮಲ, ನಿಂಗಯ್ಯ, ಬೀರೂರಿನ ಸ್ಯೋಕ್ಸೋಪೋನ್ ಕಲಾವಿದ ಎಸ್.ಅಜಿತ್, ಪುರೋಹಿತ ಮನುಕೌಂಡಿಲ್ಯ, ನಿವೃತ್ತ ಆರ್.ಎಫ್.ಓ.ಶೇಖರಪ್ಪ, ಕಡೂರು ಶಿಕ್ಷಕ ರೇವಣ್ಣ, ಹೆಡ್ ಕಾನ್ಸ್‍ಟೇಬಲ್ ಮಮತ, ಕನ್ನಡ ಸಾಹಿತ್ಯ ಪರಿಷತ್ ಬೀರೂರು ಹೊಬಳಿ ಘಟಕದ ಅಧ್ಯಕ್ಷ ಜಿ.ಈ.ಶಿವಲಿಂಗಪ್ಪ, ಸಾಲುಮದರ ತಿಮ್ಮಕ್ಕ ಸಮಾಸೇವಾ ಪ್ರಶಸ್ತಿ ಪುರಸ್ಕøತ ವಸಂತಮ್ಮ, ಸೋಮಶೇಖರ್, ಶಿಕ್ಷಕಿ ನಾಗರತ್ನ, ಮುಡುಬಾದ ಸುಮ, ಶೋಭ, ಭದ್ರಾವತಿಯ ಶಾಂತ, ಸಚ್ಚಿನ್, ಶಿಲ್ಪಾ, ಜಿ.ಯರದಕೆರೆಯ ಶಿಕ್ಷಕ ಓಂಕಾರಪ್ಪ, ಗೋವಿಂದಪ್ಪ, ಎಂ.ಎನ್.ವಾಣಿ, ಕಡೂರು ಸುಮ, ಮಚೇರಿಯ ಮಂಜುಳಾನಾಗರಾಜ್, ಪ್ರಗತಿಪರ ರೈತ ಎಸ್.ಶ್ರೀನಿವಾಸಲು, ದಿನಕರ್ ಎಂಟರ್‍ಪ್ರೈಸಸ್ ಮಾಲೀಕ ನರೇಂದ್ರ, ಹೆಚ್.ಟಿ.ಸಿಂಚನ, ಯಡವತ್ತಿ ಆಹಲ್ಯಾಶ್ರೀನಿವಾಸ್‍ಮೂರ್ತಿ, ತುಂಬ್ರಾಮನೆ ಚಂದ್ರಶೇಖರ್, ಹೊನ್ನಾಸ್‍ಗದ್ದೆಯ ಸವಿನ್‍ಕುಮಾರ್, ಮಾಲತಿ, ಲತಾ, ಸಂಗೀತ, ರಾಧ, ಕುಸುಮ, ಶಶಿಕಲಾ, ನೇತ್ರಾವತಿ, ಮುಮ್ತಾಜ್, ಕೆ.ಗುಣಕರ ಅಪ್ಪುಶೆಟ್ಟಿ, ಕಾರೇಹಳ್ಳಿಯ ಲಕ್ಷ್ಮೀದೇವಿ, ರೇಖಾಧನಪಾಲ, ಲಲಿತಾಶಶಿ, ಭಾಗವಹಿಸುವರು.
ಸಾರ್ವಜನಿಕರು ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪರಿಸರ ಸಿ.ರಮೇಶ್ ಕೋರಿದ್ದಾರೆ.

error: Content is protected !!