ಶಿವಮೊಗ್ಗ, ಜೂನ್‌ 26, : ಭಾರತ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು, ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ರೈತರು ಜೂ.30 ರೊಳಗಾಗಿ ಯೋಜನೆಯ
ಮಾರ್ಗಸೂಚಿಯಂತೆ e-KYC ಮಾಡಿಸುವುದು.
ಪ್ರತಿ ಅರ್ಹ ರೈತ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಒಂದು ವರ್ಷಕ್ಕೆ ರೂ.6000/- ಗಳನ್ನು,
ಪ್ರತಿ 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ ಹಾಗೂ ರಾಜ್ಯ ಸರ್ಕಾರದಿಂದ ರೂ.4000/- ಗಳನ್ನು 2
ಕಂತುಗಳಲ್ಲಿ ಒಟ್ಟು ರೂ.10000/- ಗಳನ್ನು ನೀಡಲಾಗುತ್ತಿದೆ.
ಈ ಯೋಜನೆಯಡಿಯಿರುವ ಫಲಾನುಭವಿಗಳಿಗೆ ಮುಂದಿನ ಕಂತು ತಮ್ಮ ಬ್ಯಾಂಕ್‌ ಖಾತೆಗೆ
ಜಮೆಯಾಗಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ರೈತರು ತಮ್ಮ
ಆಧಾರ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ನಲ್ಲಿ ನೊಂದಾಯಿಸಿರುವ ಮೊಬೈಲ್‌ನೊಂದಿಗೆ
ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ ಒನ್‌ ಕೆಂದ್ರಗಳಿಗೆ ಭೇಟಿ ನೀಡಿ ಇ-ಕೆವೈಸಿ
ಮಾಡಿಸುವುದು. ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿರುವ PMKISAN e-KYC through Face Recognition App ಮೂಲಕ ಸಹ ಜೂ.30 ರೊಳಗಾಗಿ e-KYC ಮಾಡಿಸುವಂತೆ ರೈತರಿಗೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!