ಶಿವಮೊಗ್ಗ, ಸೆಪ್ಟೆಂಬರ್ 30 ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಇವರ ವತಿಯಿಂದ ಅಕ್ಟೋಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ನವುಲೆಯ ಎಂ.ಎಸ್.ಸ್ವಾಮಿನಾಥನ್ ಹಾಲ್ನಲ್ಲಿ ‘ಪಿಜಿ ರೀಸರ್ಚ್ ಕಾನ್ಫರೆನ್ಸ್-2021’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನವದೆಹಲಿಯ ಐಸಿಎಆರ್ನ ಡೆಪ್ಯುಟಿ ಡೈರೆಕ್ಟರ್ ಜನರಲ್ ಡಾ.ಆರ್.ಸಿ.ಅಗರ್ವಾಲ್ ಕಾರ್ಯಕ್ರಮ ಉದ್ಘಾಟಿಸುವರು. ಕೆಎಸ್ಎನ್ಯುಎಹೆಚ್ಎಸ್ ಕುಲಪತಿಗಳಾದ ಡಾ.ಎಂ.ಕೆ.ನಾಯಕ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಡಿ.ಎಸ್.ಸುರೇಶ್, ನವದೆಹಲಿ ಐಸಿಎಆರ್ನ ಎಡಿಜಿ ಡಾ.ಎಸ್.ಭಾಸ್ಕರ್, ತೀರ್ಥಹಳ್ಳಿಯ ಶಿಕ್ಷಣ ತಜ್ಞ ಅರುಣ ಕುಮಾರ ವಿ.ಕೆ, ಬಂಟಗನಹಳ್ಳಿ ಎಸ್ಟೇಟ್ನ ಕೃಷಿ ಕೈಗಾರಿಕೋದ್ಯಮಿ ಬಿ.ಶಿವರಾಂ, ಪ್ರಗತಿಪರ ರೈತರಾದ ಸೊರಬದ ದೊಡ್ಡಗೌಡ ಸಿ ಪಾಟಿಲ್, ಚನ್ನಗಿರಿಯ ಕೆ.ನಾಗರಾಜ್, ಶಿವಮೊಗ್ಗದ ವೀರಭದ್ರಪ್ಪ ಪೂಜಾರಿ ಹಾಗೂ ಪೊನ್ನಂಪೇಟಯ ಸಿಒಎಪ್ ಡೀನ್(ಫಾರೆಸ್ಟ್ರಿ) ಡಾ.ಸಿ.ಜಿ.ಕುಶಾಲಪ್ಪ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
![](https://www.newsnext.co/wp-content/uploads/2019/08/final-1.png)