ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ .

ಬೆಂಗಳೂರು, ಜುಲೈ ೧೩

ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುವ ಜನತೆಯ, ಭವಿಷ್ಯಕ್ಕೆ ಮಾರಕ ವಾಗುವ ಪಶ್ಚಿಮಘಟ್ಟ ಕುರಿತ, ಕೇಂದ್ರ ಪರಿಸರ ಸಚಿವಾಲಯದ, ಅಧಿಸೂಚನೆ ವಿರೋಧಿಸಿ, ಮಲೆನಾಡು ಪ್ರದೇಶ ವನ್ನು ಪ್ರತಿನಿಧಿಸುವ ಶಾಸಕರ ಸಭೆಯನ್ನು, ಇದೇ ದಿನಾಂಕ ಜುಲೈ ೧೮ ರಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಕರೆದಿದ್ದಾರೆ.

ಕಳೆದ ವಾರ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಕರ್ನಾಟಕ ರಾಜ್ಯವೂ ಒಳಗೊಂಡಂತೆ ಒಟ್ಟು ೫೬೮೨೬ ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು, ಎರಡು ತಿಂಗಳು ಗಡುವು ನೀಡಲಾಗಿದೆ.

” ಒಂದು ವೇಳೆ ಈ ಅಧಿಸೂಚನೆ ಅನುಷ್ಠಾನ ಗೊಂಡರೆ, ಮಲೆನಾಡು ನಿವಾಸಿಗಳ ಬದುಕು ಮಸುಕಾಗುತ್ತದೆ, ಅಭಿವೃದ್ದಿ ಕುಂಟುತ್ತದೆ ಹಾಗೂ ತೀವ್ರ ಆರ್ಥಿಕ ಹಾನಿಗೆ ತುತ್ತಾಗಬೇಕಾಗುತ್ತದೆ”.

ಕರ್ನಾಟಕ ಸರಕಾರ ಈ ಹಿಂದೆ Dr ಕಸ್ತೂರಿರಂಗನ್ ಸಮಿತಿ ವರದಿಯನ್ನು ತಿರಸ್ಕರಿಸಿದೆ ಹಾಗೂ ತನ್ನ ನಿಲುವಿನ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸಿದೆ, ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಈ ಭಾಗದ ಶಾಸಕರ ಆಗ್ರಹವಾಗಿದೆ, ಎಂದಿರುವ ಸಚಿವರು, ಸೋಮವಾರದ ಸಭೆಯಲ್ಲಿ, ಅಧಿಸೂಚನೆ ಯನ್ನು ವಿರೋಧಿಸಿ, ಗೊತ್ತುವಳಿಯನ್ನು ಮಂಡನೆ ಮಾಡಲಾಗುವುದು, ಎಂದೂ ತಿಳಿಸಿದ್ದಾರೆ.

error: Content is protected !!