ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಲಯದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ಅಂತಜಾ೯ಲ ಕಾಯ೯ಕ್ರಮವನ್ನು ಆಯೋಜಿಸಲಾಗಿತ್ತು. ಇದರ ಸದುಪಯೋಗವನ್ನು ರಾಜ್ಯದ ವಿವಿಧ ಭಾಗಗಳ ರೈತರು ಕಾಯಾ೯ಗಾರದಲ್ಲಿ ಬಾಗವಹಿಸಿ ಮಾಹಿತಿ ಪಡೆದುಕೊಂಡರು

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ  ವಿಜ್ಞಾನಗಳ ವಿಶ್ವವಿದ್ಯಾಲಯದ  ಕುಲಸಚಿವರಾದ ಪ್ರೊ. ಡಾ.ಕೆ.ಸಿ. ವೀರಣ್ಣವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ಸಂಯೋಜಿಸಲಾದ  ರೈತರ ಸರಣಿ ಅಂತರ್ಜಾಲ ಕಾರ್ಯಾಗಾರವನ್ನು ಉದ್ಘಾಟಿಸಿ ಭಾಗವಹಿಸಿ ಮಾತನಾಡಿ ಲಾಕ್ ಡೌನ್‌ ಸಂದರ್ಭದಲ್ಲಿ  ನಗರ ಪ್ರದೇಶದಿಂದ ಅನಿವಾರ್ಯವಾಗಿ ಹಿಂತಿರುಗಿದ ಯುವಕರು ಇಂದು ಕೃಷಿಯ ಜೊತೆಗೆ ಪಶುಪಾಲನೆ ಕಡೆಗೆ ಆಕರ್ಷಿತರಾಗಿದ್ದು, “ಕುರಿ ಮತ್ತು ಮೇಕೆ ಸಾಕಾಣಿಕೆ” ಯ ಕಡೆಗೆ ವಿಶೇಷ ಆಸಕ್ತಿಯನ್ನು  ತೋರಿಸುತ್ತಿದ್ದಾರೆ. ಮಾರುಕಟ್ಟೆಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡಲ್ಲಿ ಇದು ಹೆಚ್ಚು ಲಾಭದಾಯಕ ಎಂದು ಅಭಿಪ್ರಾಯಪಟ್ಟರು.


ವಿಶ್ವವಿದ್ಯಾನಿಲಯದ *ವಿಸ್ತರಣಾ ನಿರ್ದೇಶಕರಾದ ಪ್ರೊ.ಡಾ.ಎನ್.ಎ.ಪಾಟೀಲರು* ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು “ಅಂಕಿ ಅಂಶಗಳ ಪ್ರಕಾರ ಪಶು ಸಂಗೋಪನೆಯು ವೃದ್ದಿ ದರವು ಆಶಾದಾಯಕವಾಗಿದ್ದು, ಈಗ ಕೇವಲ ಉಪ ಕಸುಬಾಗಿ ಉಳಿಯದಿಲ್ಲ. ಬದಲಾಗಿ ಉದ್ದಿಮೆ ರೂಪ ಪಡೆದು ಕೊಳ್ಳುವ ಹೊಸ್ತಿಲಲ್ಲಿದೆ. ರೈತರು ಮತ್ತು ನಿರುದ್ಯೋಗಿ ಯುವಕ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಅಭಿಪ್ರಾಯ ಪಟ್ಟರು. 


ಅಂತರ್ಜಾಲ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪಶು ಮಹಾ ವಿದ್ಯಾಲಯ ಶಿವಮೊಗ್ಗದ *ಡೀನ್  ರವರಾದ ಪ್ರೊ.ಡಾ.ಪ್ರಕಾಶ್ ನಡೂರ್* ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪ್ರಾಣಿ ಜನ್ಯ ಆಹಾರಗಳಿಗೆ ಇರುವ ಬೇಡಿಕೆ ಹಾಗೂ  ಅವಶ್ಯಕತೆಗಳ ಸ್ಥೂಲ ಪರಿಚಯ ಮಾಡಿಕೊಟ್ಟರು. ಇಂತಹ ಕಾಯ೯ಕ್ರಮಗಳಲ್ಲಿ ರೈತರು ಭಾಗವಹಿಸಿ ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಾಗಾರದ ಸಂಯೋಜಕರು ಕುರಿ ಮತ್ತು ಮೇಕೆ ಸಾಕಾಣಿಕೆಯ ಸಂಪನ್ಮೂಲ ತಜ್ಞರಾದ ಡಾ.ಸತೀಶ್.ಜಿ.ಮ್ ರವರು  ಕುರಿ ಮತ್ತು ಮೇಕೆ ತಳಿಗಳು, ವಸತಿ, ಆಹಾರ ಕ್ರಮ, ಮಾರುಕಟ್ಟೆ, ರೋಗ ಹತೋಟಿ ಇತ್ಯಾದಿ ವಿಷಯಗಳ ಕುರಿತು ಸುಮಾರು 2.30 ಗಂಟೆಗಳಿಗೂ ಹೆಚ್ಚು ಕಾಲ ಮಾಹಿತಿ ನೀಡುವುದರ ಜೊತೆಗೆ ರೈತರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಕರ್ನಾಟಕದ ಎಲ್ಲಾ ಭಾಗಗಳಿಂದ ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದ 100 ಕ್ಕೂ ಹೆಚ್ಚಿನ  ರೈತರ ಅರ್ಥ ಪೂರ್ಣ ಚರ್ಚಾ ವೇದಿಕೆಯಾಗಿ ಈ  ಅಂತರ್ಜಾಲ ಕಾರ್ಯಾಗಾರ ಹೊರ ಹೊಮ್ಮಿತು. 
ಕಾರ್ಯಕ್ರಮವನ್ನು ಸಂಯೋಜಿಸಿದ ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗದ ಮುಖ್ಯಸ್ಥರು  ಡಾ.ಉಮೇಶ್.ಬಿ.ಯು ಹಾಗೂ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ವೆಂಕಟೇಶ್.ಎಮ್.ಎಮ್ ಮತ್ತು ಡಾ.ಭರತ್ ಭೂಷಣ್.ಎಮ್  ಮತ್ತು ಮಹಾವಿದ್ಯಾಲಯದ ಸಿಬ್ಬಂದಿಯವರು ರೈತರ ಪ್ರಶ್ನೆಗಳಿಗೆ ಉತ್ತರಿಸಲು ನೆರವಾದರು. 

error: Content is protected !!