ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣ, ಶಿವಮೊಗ್ಗ ಇಲ್ಲಿ 2 ದಿನಗಳ “ಜಾನುವಾರುಗಳ ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಇತ್ತೀಚಿನ ಆವಿಷ್ಕಾರಗಳು” ಎಂಬ ಶಿರ್ಷಿಕೆಯ ತಾಂತ್ರಿಕ ಕಾರ್ಯಾಗಾರವನ್ನು ಏರ್ಪಡಿಸಿದ್ದು, ಇದರಲ್ಲಿ ಜಾನುವಾರುಗಳಿಗೆ ಬರುವ ವಿವಿಧ ಕಾಯಿಲೆಗಳ ರೋಗ ಪತ್ತೆ ವಿಧಾನದ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳ ಸಮೇತ ತರಬೇತಿಯನ್ನು ವಿಷಯ ತಜ್ಞರಿಂದ ಒದಗಿಸಲಾಯಿತು. ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 25 ಪಶುವೈದ್ಯರು ಭಾಗವಹಿಸಿದ್ದು ಕ್ಷೇತ್ರ ಮಟ್ಟದ ಪಶುವೈದ್ಯರ ಜ್ಞಾನ ಹೆಚ್ಚಿಸುವುದರಲ್ಲಿ ಇದು ಸಹಕಾರಿಯಾಗಲಿದೆ ಎಂದು ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರಾಗಿರುವ ಡಾ: ಎನ್.ಬಿ.ಶ್ರೀಧರ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ: ಡಾ. ಕಲ್ಲಪ್ಪ, ಉಪನಿರ್ದೇಶಕರು(ಆಡಳಿತ), ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಚಿತ್ರದುರ್ಗ, ಕರ್ನಾಟಕ ಸರ್ಕಾರ ಇವರು ಭಾಗವಹಿಸಿ, ಕ್ಷೇತ್ರ ಮಟ್ಟದಲ್ಲಿರುವ ಪಶುವೈದ್ಯರು ರೈತರ ಒಳಿತಿಗಾಗಿ ಶ್ರಮಿಸಬೇಕೆಂದರು. ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಪ್ರಭಾರಿ ಡೀನ್‌ರವರಾದ ಡಾ: ಮಾಧವಪ್ರಸಾದ್ ಸಿ. ಬಿ ಇವರು ಮಾತನಾಡುತ್ತಾ ್ತ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕೆಂದು ಕರೆಯಿತ್ತರು.

ಡಾ: ನಿರಂಜನ ಕಾರ್ಯಕ್ರಮ ನಿರೂಪಿಸಿದರೆ, ಡಾ: ಸುನಿಲಚಂದ್ರ ವಂದನಾರ್ಪಣೆ ಮಾಡಿದರು. ಡಾ: ಕವಿತಾ ರಾಣಿ, ಡಾ: ಆನಂದ, ಡಾ: ಮಂಜುನಾಥ್, ಡಾ: ಮಂಜು, ಡಾ: ಮಾಲತೇಶ್, ಡಾ: ರವೀಂದ್ರ, ಡಾ:ಅರುಣ್, ಡಾ:ಅನಂತಕೃಷ್ಣ ಇವರು ವಿಷಯ ತಜ್ಞರು ಮತ್ತು ಸಂಪೂನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

error: Content is protected !!