ಶಿವಮೊಗ್ಗ: ರೇಡಿಯೋ ಶಿವಮೊಗ್ಗ 90.8 ಎಫ್ ಎಂನಲ್ಲಿ ಗುರುವಾರದಂದು ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪ (ಚೆನ್ನಿ) ಅವರೊಂದಿಗೆ ನೇರಪ್ರಸಾರದ ಸಾರ್ವಜನಿಕ ಸಂವಾದ ಯಶಸ್ವಿಯಾಗಿ ಜರುಗಿತು. ಆರ್ ಜೆ ಅಶ್ವಿನಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಚನ್ನಬಸಪ್ಪನವರು ಮಾತನಾಡಿ, ಪರಿಸರ ತಮ್ಮ ಮೊದಲ ಆದ್ಯತೆಯಾಗಿದೆ. ಪರಿಸರ ಬಜೆಟ್ ಮಂಡನೆ ಆಗಿದ್ದು, ಶಿವಮೊಗ್ಗದಲ್ಲಿ ಮಾತ್ರ. ಈಗಲೂ ಪರಿಸರ ಸಂಬಂಧಿ ಚಟುವಟಿಕೆಗಳು ಹೆಚ್ಚು ನಡೆಸಲಾಗುತ್ತಿದೆ. ತುಂಗಾ ನದಿಗೆ ಮಲಿನ ನೀರು ಸೇರದಂತೆ ಕೂಡಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು ತುಂಗಾ ಯೋಜನೆಯಡಿ ವಿಶೇಷ ಆದ್ಯತೆ ನೀಡಲಾಗಿದೆ. ಹಸಿರು ಉಳಿವಿಗಾಗಿ 24 ಸಾವಿರ ಮಕ್ಕಳನ್ನು ಒಗ್ಗೂಡಿಸಿಕೊಂಡು ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಪರಿಸರ ಪಾರ್ಕ್ ಯೋಜನೆಗೂ ಕೂಡಾ ಚಿಂತನೆ ನಡೆದಿದೆ. ಗುಡ್ಡಗಳನ್ನು ಕಾಪಾಡಿಕೊಂಡರೆ ಜೀವವೈವಿಧ್ಯವನ್ನು ಉಳಿಸಿದಂತೆ ಎಂದರು.

ಆರೋಗ್ಯ ಶಿವಮೊಗ್ಗಕ್ಕಾಗಿ ಸರ್ವ ಯೋಜನೆಗಳ ಚಿಂತನೆ ಇದೆ. ಬೊಮ್ಮನಕಟ್ಟೆ ಆಸ್ಪತ್ರೆಯಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಸಾಮಾನ್ಯ ಮಹಿಳೆಯೋರ್ವರು ಬಡವರಿಗೆ ಸರ್ಕಾರಿ ಯೋಜನೆಗಳು ದೊರಕುತ್ತಿಲ್ಲ ಎಂದು ದೂರಿದ್ದರು. ಇದರಂತೆ ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಶಿವಮೊಗ್ಗದಲ್ಲಿ ಪೌರಕಾರ್ಮಿಕ ಯೋಜನೆ ಅನುಷ್ಠಾನವಾಯಿತು. ಇದನ್ನು ಮಾದರಿಯಾಗಿಸಿಕೊಂಡು ರಾಜ್ಯದಾದ್ಯಂತ ಇದನ್ನು ಜಾರಿ ಮಾಡಲು ನಿರ್ಧರಿಸಲಾಯಿತು. ಶಿವಮೊಗ್ಗ ನಗರದ ಅಭಿವೃದ್ಧಿಗೆ ಸಾರ್ವಜನಿಕರ ಸಲಹೆಗಳಿಗೆ ಮುಕ್ತ ಸ್ವಾಗತವಿದೆ ಎಂದರು.

ಬ್ರಹ್ಮಾನಂದ ರಾನಡೆ, ಕೃಷ್ಣ, ಪ್ರೇಮಕುಮಾರ್, ಮಧುಮತಿ, ನವೀನ ಕುಮಾರ್, ಡಾ. ರವೀಂದ್ರ, ಅರ್ಚನಾ, ವಿಜಯಾ, ಕೃಷ್ಣಮೂರ್ತಿ, ಅಂಬರೀಶ್, ರೂಪಾ, ಶಾಂತಿನಿ ಹಾಸನ, ಗುಂಡಣ್ಣ, ಜಾಲ, ಸತೀಶ್, ಚಂದ್ರು, ಲೀಲಾ, ಯುವರಾಜ್, ಮಹೇಶ್ವರಪ್ಪ, ಕುಸುಮಾ, ಮಂಜುಳಾ, ಶೋಭಾ, ಪೂರ್ಣಿಮಾ, ಬಿಂದು, ಭರತ್ ಕರೆ ಮಾಡಿ ಮಾತನಾಡಿದರು. ಇವರೆಲ್ಲರಿಗೂ ಶಾಸಕರು ಸಕಾರಾತ್ಮಕವಾಗಿ, ಆತ್ಮೀಯವಾಗಿ ಸ್ಪಂದಿಸಿದರು.

ಈ ಸಂದರ್ಭದಲ್ಲಿ ರೇಡಿಯೋ ಶಿವಮೊಗ್ಗದ ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್, ಕಿಡ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಸಿ.ಎಸ್. ಚಂದ್ರಶೇಖರ್, ಎ.ಎಸ್. ಚಂದ್ರಶೇಖರ್, ಭಾಗ್ಯಾ ಇನ್ನಿತರರು ಇದ್ದರು.

error: Content is protected !!