ಶಿವಮೊಗ್ಗ. ಜೂನ್ 07 : ಶಿವಮೊಗ್ಗ ಅರಣ್ಯ ಇಲಾಖೆಯು ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಕಾಳಜಿ ಮತ್ತು ಅರಿವನ್ನು ಮೂಡಿಸುವ ದೃಷ್ಠಿಯಿಂದ ಒಂದು ವಿಶೇಷವಾದ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ತಂಡವನ್ನು ರಚನೆ ಮಾಡಲು ಉದ್ದೇಶಿಸಲಾಗಿದ್ದು, ಆಸಕ್ತ 16 ವರ್ಷ ಮೇಲ್ಪಟ್ಟ ನಾಗರಿಕರಿಂದ ಅರ್ಜಿ ಅಹ್ವಾನಿಸಿದೆ.
ಈ ತಂಡವು ಒಂದು ವರ್ಷ ಕಾಲ ಕಾರ್ಯ ನಿರ್ವಹಿಸಲಿದ್ದು, ಆಯ್ಕೆಯಾದ ನಂತರ ತಮ್ಮ ಬಿಡುವಿನ ವೇಳೆಯಲ್ಲಿ ಅರಣ್ಯ ಇಲಾಖೆಯ ಜೊತೆಗೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವ ಅವಕಾಶ ನೀಡಲಾಗುವುದು.
ಆಸಕ್ತರುvanasevakasene@gmail.com, ಇಮೇಲ್ ವಿಳಾಸಕ್ಕೆ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಸ್ವವಿವರದ ಮಾಹಿತಿಯನ್ನು ಜೂನ್ 15ರೊಳಗಾಗಿ ಕಳುಹಿಸುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸುಲು ತಿಳಿಸಿರುತ್ತಾರೆ.
ಮಾಹಿತಿಗಾಗಿ ಮೊ.ಸಂ.: 9844087990, 08182-240385 ಗಳನ್ನು ಸಂಪರ್ಕಿಸುವುದು.