ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇವರ ಅಶ್ರಯದಲ್ಲಿ ಸಾವಯವ ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರ ಸಹಯೋಗದೊಂದಿಗೆ ಮಧ್ಯ ಕರ್ನಾಟಕದ ಪರಿಶಿಷ್ಟ ಪಂಗಡದ ರೈತರಲ್ಲಿ ಸಮಗ್ರ ಕೃಷಿ ಜನಪ್ರಿಯಗೊಳಿಸುವ ಕಾರ್ಯಕ್ರಮವನ್ನು ಇಂದು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೌರವಾನ್ವಿತ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್‍ರವರು ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಸುಸ್ಥಿರ ಆಹಾರ ಉತ್ಪಾದಿಸಲು ಸಾಧ್ಯ. ಗುಣಮಟ್ಟದ ಆಹಾರ ಉತ್ಪಾದನೆಗೆ ಹಾಗೂ ರೈತರ ಅದಾಯ ದ್ವಿಗುಣಗೊಳ್ಳಲು ಮತ್ತು ಕೃಷಿ ತಂತ್ರಜ್ಞಾನಗಳನ್ನು ಅಳವಡಿಕೊಂಡು ಮಾಡುವ ಸಮಗ್ರ ಕೃಷಿಯು ರೈತರ ಸಮೃದ್ಧ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನುವಹಿಸಿದ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ಕೆ.ಟಿ.ಗುರುಮೂರ್ತಿ ಮಾತನಾಡಿ ಮಣ್ಣಿನ ಆರೋಗ್ಯ ಕಾಪಾಡಿ ಉತ್ತಮ ಆಹಾರ ಉತ್ಪಾದನೆಗೆ ಸಮಗ್ರ ಕೃಷಿ ಸಹಕಾರಿ ಎಂದರು
ಮೊದಲಿಗೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಹ ಸಂಶೋಧನಾ ನಿರ್ದೇಶಕರಾದ ಡಾ.ಎಸ್. ಪ್ರದೀಪ್ ಮಾತನಾಡಿದರು, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರಾದ ಡಾ. ಸಣ್ಣತಿಮ್ಮಪ್ಪ ಎಲ್ಲರನ್ನೂ ವೇದಿಕೆಗೆ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಸಹವಿಸ್ತರಣಾ ನಿರ್ದೇಶಕರಾದಂತಹ ಡಾ.ಬಿ.ಸಿ. ಹನುಮಂತಸ್ವಾಮಿ. ಐ.ಸಿ.ಎ.ಆರ್. ನೋಡಲ್ ಅಧಿಕಾರಿಗಳಾದ ಡಾ.ಎಸ್.ಶ್ರೀಧರ್, ಪ್ರಾಧ್ಯಾಪಕರಾದ ಡಾ.ಗಿರಿಜೇಶ್, ಡಾ.ವೀರಣ್ಣ ಹೆಚ್. ಕೆ. ಡಾ.ಜ್ಯೋತಿರಾಥೋಡ್ ಭಾಗವಹಿಸಿದ್ದರು.

ಡಾ.ಭರತ್, ವಿಜ್ಞಾನಿ (ತೋಟಗಾರಿಕೆ) ಕಾರ್ಯಕ್ರಮ ನಿರೂಪಿಸಿದರು. ಡಾ.ಸಂತೋಷ್, ಕಾರ್ಯಕ್ರಮವನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಆಯ್ದ 50 ಜನ ರೈತರಿಗೆ ಒಂದು ದಿನದ ತರಬೇತಿ ನೀಡಲಾಯಿತು. ಅಪರಾಹ್ನದ ಕಾರ್ಯಕ್ರಮದಲ್ಲಿ ಸಿರಿಧಾನ್ಯ ಅಂದೋಲನ ಹಾಗೂ ಹವಮಾನ ವೈಪರೀತ್ಯಕ್ಕೆ ಪೂರಕ ಕೃಷಿ ತಂತ್ರಜ್ಞಾನಗಳ ಬಗ್ಗೆ ವಿಷಯತಜ್ಞರಾದ ಡಾ.ಹೆಚ್. ಕೆ. ವೀರಣ್ಣ, ಡಾ.ಸಣ್ಣತಿಮ್ಮಪ್ಪ, ಡಾ.ಸಂತೋಷ್, ಡಾ.ಭರತ್ ರೈತರೊಂದಿಗೆ ಸುದೀರ್ಘ ಸಂವಾದ ನಡೆಸಿದರು.

error: Content is protected !!