ಪಪಾಯ ಉತ್ಕøಷ್ಟವಾದ ಹಾಗೂ ಪೌಷ್ಟಿಕತೆಯಿಂದ ಪರಿಪೂರ್ಣವಾದ ಹಣ್ಣು. ಹಿಂದೊಮ್ಮೆ ಹಿತ್ತಲಗಿಡವಾಗಿದ್ದ ಪಪಾಯ ಈಗ ಆರ್ಥಿಕ ರಂಗದಲ್ಲಿ ವಿಶ್ವದ ಐದನೇ ಮುಖ್ಯ ಬೆಳೆಯಾಗಿದೆ, ಪಪಾಯ ಗಿಡದ ಹಣ್ಣು, ಕಾಯಿ, ಎಲೆ, ಕಾಂಡ, ಬೇರು, ಹೂವು ಎಲ್ಲವೂ ವಿಭಿನ್ನ ಪೋಷಕಾಂಶಗಳನ್ನು ಒಳಗೊಂಡಿದ್ದು ನಮ್ಮ ದಿನನಿತ್ಯದ ಆಹಾರದಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲದೆ ಇದರ ಬಣ್ಣ, ಸುವಾಸನೆ ಹಾಗೂ ರುಚಿ, ಊಟದಲ್ಲಿ ವೈವಿದ್ಯತೆಯನ್ನು ಉದಗಿಸುತ್ತದೆ.
ಪಪಾಯ ಹಣ್ಣಿನಲ್ಲಿರುವ ಪೋಷಕಾಂಶಗಳು: ಪಪಾಯ ಹಣ್ಣಿನಲ್ಲಿ ಶೇ. 88-90 ರಷ್ಟು ನೀರಿನಾಂಶವಿದೆ. ಪೋಷಕಾಂಶಗಳಲ್ಲಿ ಮುಖ್ಯವಾಗಿ ಜೀವಸತ್ವಗಳಾದ ಬಿ1, ಬಿ2, ಬಿ3 ಹಾಗೂ ಖನಿಜ ಲವಣಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ. ಮಾವಿನ ನಂತರ ಬೀಟಾ ಕರೋಟಿನ್ ಪ್ರಮಾಣದಲ್ಲಿ, ಪಪಾಯ ಹಣ್ಣು ಎರಡನೇ ಸ್ಥಾನದಲ್ಲಿ. ಬೀಟಾ ಕರೋಟಿನ್ ದೇಹದಲ್ಲಿ ‘ಎ’ ಜೀವಸತ್ವಕ್ಕೆ ಪರಿವರ್ತನೆ ಹೊಂದಿ ಕಾರ್ಯ ನಿರ್ವಹಿಸುತ್ತದೆ. ‘ಎ’ ಜೀವಸತ್ವವು ದೇಹದ ಬೇಡಿಕೆಯಾದರೆ (600 ಮೈಕ್ರೋ ಗ್ರಾಂ) “ಇರುಳು ಕುರುಡು” ಮತ್ತು ಚರ್ಮರೋಗ ಕಾಣಿಸುತ್ತವೆ. ಹೆಚ್ಚಿನ ಕೊರತೆಯಿಂದ ಕುರುಡರಾಗುವ ಸಾಧ್ಯತೆಯೂ ಇದೆ. ಪಪಾಯವನ್ನು ಬಳಸುವುದರಿಂದ ಈ ದೃಷ್ಟಿ ಮಾಂದ್ಯತೆಯನ್ನು ತಡೆಗಟ್ಟಬಹುದು. ಶಾಖ ಹಾಗೂ ಬೆಳಕಿನ ಕಿರಣಗಳಿಗೆ ಹೆಚ್ಚಾಗಿ ಈ ಜೀವಸತ್ವ ನಾಶವಾಗುವುದಿಲ್ಲ.
ಪಪಾಯ ಹಣ್ಣಿನಲ್ಲಿರುವ ಪೋಷಕಾಂಶಗಳೆಂದರೆ : ನೀರಿನಾಂಶ 78-90 ಗ್ರಾಂ, ಶರ್ಕ ಪಿಷ್ಠ 7.29.5 ಗ್ರಾಂ, ಥಯಾಮಿನ್ 0.04 ಮಿ.ಗ್ರಾಂ, ಸಸಾರಜನಕ 0.4-0.5 ಗ್ರಾಂ, ರಿಬೋಪ್ಲೇವಿನ್ 0.25 ಮಿ.ಗ್ರಾಂ, ಕೊಬ್ಬು 0.1 ಗ್ರಾಂ, ನಿಯಾಸಿನ್ ಆಮ್ಲ 0.2 ಮಿ.ಗ್ರಾಂ, ಖನಿಜ 0.4-0.5 ಗ್ರಾಂ, ಕ್ಯಾಲೋರಿ (ಶಕ್ತಿ) 32-38, ಸುಣ್ಣ 17.00 ಮಿ.ಗ್ರಾಂ, ಸೋಡಿಯಮ್ 26 ಮಿ.ಗ್ರಾಂ, ರಂಜಕ 13.00 ಮಿ.ಗ್ರಾಂ, ಪೊಟ್ಯಾಸಿಯಂ 69 ಮಿ.ಗ್ರಾಂ ಮತ್ತು ಕಬ್ಬಿಣ 0.5 ಮಿ.ಗ್ರಾಂ.
ಪಪಾಯ ಔಷಧಿಯ ಗುಣಗಳು: ಹಣ್ಣಿನ ತಿರುಳಿನ ಜೊತೆಗೆ, ಹಾಲು ಮತ್ತು ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ನರಗಳ ದೌರ್ಬಲ್ಯವನ್ನು ಹೋಗಲಾಡಿಸಬಹುದು. ಹಣ್ಣು, ಕಾಯಿ, ಎಲೆ, ಬೇರು ಇವುಗಳ ರಸ ಮೂಲವ್ಯಾದಿ ರೋಗ ಮತ್ತು ಅಜೀರ್ಣಕ್ಕೆ ಪರಿಹಾರ ಒದಗಿಸುತ್ತದೆ. ಪಪಾಯ ಕಾಯಿ ಅಥವಾ ಎಲೆಯನ್ನು ಸಕ್ಕರೆಯೊಂದಿಗೆ ಬೆರೆಸಿ ತಿನ್ನುವುದರಿಂದ ಹೊಟ್ಟೆ ಹಾಗೂ ಕರುಳಿನ ಹಾನಿಕಾರಕ ಜಂತುಗಳು ನಾಶವಾಗುತ್ತವೆ. ಈ ದಿಶೆಯಲ್ಲಿ ನ್ಯಾಷನಲ್ ಡ್ರಗ್ ಆಯಂಡ್ ಟಾಕ್ಸಿಕಾಲಜಿಕಲ್ ಇನ್ಸಟಿಟ್ಯೂಟ್ ಸಂಶೋಧನೆ ಕೈಗೊಂಡಿದೆ. ಊಟವಾದ ನಂತರ ತಿನ್ನುವ ಪಪಾಯ ಹಣ್ಣು ಪಚನ ಶಕ್ತಿಯನ್ನೂ ವೃದ್ಧಿಸುತ್ತದೆ. ಪಪಾಯ ಹಣ್ಣು ಪಚನ ಶಕ್ತಿಯನ್ನು ವೃದ್ಧಿಸುತ್ತದೆ. ಪಪಾಯ ಹೋಳುಗಳನ್ನು ಗಾಯ ಮತ್ತು ಹಣ್ಣುಗಳ ಮೇಲಿಡುವುದರಿಂದ ಬೇಗ ಗುಣಮುಖರಾಗಬಹುದು ಎಂದು ಸಂಶೋಧನೆಗಳು ತಿಳಿಸಿವೆ.
ನಮ್ಮ ದೇಶದ ಬಡಮಕ್ಕಳಿಗೆ ಕಾಣಬರುತ್ತಿರುವ ಇರುಳು ಕುರುಡು (8-10%), ರಕ್ತಹೀನ (40%) ಹಾಗೂ ‘ಬಿ’ ಗುಂಪಿನ ಜೀವಸತ್ವಗಳ ಕೊರತೆಯನ್ನು (5%) ನಿಯಂತ್ರಿಸಲು ಕಡಿಮೆ ವೆಚ್ಚದ ಪಪಾಯ ಗಿಡದ ಬಳಕೆಯನ್ನು ಜನಪ್ರಿಯಗೊಳಿಸುವುದು ಅತ್ಯಾವಶ್ಯಕ. ಈ ನಿಟ್ಟಿನಲ್ಲಿ ಪಪಾಯವನ್ನು ಆಹಾರದ ವಿವಿಧ ರೂಪದಲ್ಲಿ ಬಳಸುವುದಕ್ಕೆ ಆಹಾರ ಸಂಸ್ಥೆಗಳಾದ, ಹೈದರಾಬಾದನ ನ್ಯಾಷನಲ್ ಇನ್ಸಟಿಟ್ಯೂಟ್ ಆಫ್ ನ್ಯೂಟ್ರಿಷನ್ ಮತ್ತು ಮೈಸೂರಿನ ಸೆಂಟ್ರಲ್ ಫುಡ್ ಟೆಕನಾಲಾಜಿಕಲ್ ರಿಸರ್ಚ ಇನ್ಸಿಟಿಟ್ಯೂಟ್ ಇವುಗಳು ಗಣನೀಯ ಸೇವೆ ಸಲ್ಲಿಸುತ್ತವೆ. ಬೆಳೆದ ಪಪಾಯ ರಫ್ತಿಗಾಗಿ ಮಾರಾಟಕ್ಕೆ ಬಂದರೆ ಸಾಲದು, ಮನೆಯಲ್ಲಿಯೂ ಇದರ ಬಳಕೆ ಅವಶ್ಯಕ. ಪಪಾಯವನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಬಳಸುವುದರಿಂದ ಸದೃಢ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದಲ್ಲದೇ. ಈ ನಿಟ್ಟಿನಿಂದ ಸ್ವಲ್ಪ ಮಟ್ಟಿಗಾದರೂ ನಮ್ಮ ಜನತೆಯಲ್ಲಿನ ಪೋಷಕಾಂಶಗಳ ನ್ಯೂನ್ಯತೆಯನ್ನು ತಡೆಗಟ್ಟಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ: ZAHEER AHAMED . B , SCIENTIST (PLANT PATHOLOGY) ICAR KVK, KALABURAGI (GULBARGA) KARNATAKA -585101, ಮೊಬೈಲ್ ಸಮಖ್ಯೆ: 9845300326