ಚುನಾವಣೆ ಮುಗಿದ ಬೆನ್ನಲ್ಲೇ ಭದ್ರಾವತಿಗೆ ಆಗಮಿಸಿದ ಶಾಸಕರನ್ನು ಶಿವಮೊಗ್ಗ ಜಿಲ್ಲಾ ಗಾಣಿ ಗ ಕ್ಷೇಮಭಿವೃದ್ಧಿ ಸಂಘದ ವತಿಯಿಂದ ಅವರಿಗೆ ಸನ್ಮಾನಿಸಲಾಯಿತು.
ನನಗೆ ಪದವಿ ಮುಖ್ಯವಲ್ಲ ಅಭಿವೃದ್ಧಿ ಮುಖ್ಯ ಎಂದು ಶಾಸಕರನ್ನು ಅಭಿನಂಧಿಸುವ ಸಂದರ್ಭದಲ್ಲಿ, ನನ್ನನ್ನು ಗೆಲ್ಲಿಸಿದ ಸಮಸ್ತ ತಾಲೂಕಿನ ಜನತೆಗೆ ಹಾಗೂ ಸಮಾಜದ ಬಂಧುಗಳಿಗೆ ಕೃತಜ್ಞತೆ ಹೇಳಿದರು ,
ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿಗೆ ಸಂಪೂರ್ಣ ಸಹಕಾರ, ಗ್ರಾಮಾಂತರ ಪ್ರದೇಶಗಳಿಗೆ ಭೇಟಿ, ಪ್ರಗತಿಗಾಗಿ ಜನಪರ ಕಾರ್ಯಕ್ರಮ, ಸಮಾಜದ ಅಭಿವೃದ್ಧಿ, ಭದ್ರಾವತಿ ನಗರದ ಜನತೆಗೆ ಅನುಕೂಲವಾಗುವ ಕಾರ್ಯಗಳನ್ನು ರೂಪಿಸುವುದು ಮತ್ತು ಅಭಿವೃದ್ಧಿಗಾಗಿ ಶ್ರಮಿಸುವುದು, ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಎಲ್ಲ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವುದು ನನ್ನ ಪ್ರಮುಖ ಅಧ್ಯತೆಯಗಿದೆ, ಮುಂಗಾರು ವಿಳಂಭವಾಗಿರುವ ಕಾರಣ ಕುಡಿಯುವ ನೀರಿಗೆ ಕೊರತೆ ಎದುರಾಗಿದ್ದು ಅದರ ನಿವಾರಣೆಯಗಬೇಕು, ಶಿಕ್ಷಣ, ಕೃಷಿ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು, ಶಿವಮೊಗ್ಗ ಜಿಲ್ಲೆಯಲ್ಲಿ ಗಾಣಿಗ ಸಮಾಜದ ಭವನವಾಗಬೇಕಿದೆ ಎಂದು ಭದ್ರಾವತಿ ಶಾಸಕರಾದ ಸಂಗಮೇಶ್ ರವರು ಅವರ ನಿವಾಸದಲ್ಲಿ ಅಭಿನಂಧಿಸುವ ಸಂದರ್ಭದಲ್ಲಿ ಮಾತನಾಡಿದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೆಮಭಿವೃದ್ಧಿ ಸಂಘದ ಅಧ್ಯಕ್ಷರಾದ ಜಿ ವಿಜಯಕುಮಾರ್ ರವರು ಶಾಸಕರು ನಮ್ಮ ಗಾಣಿಗ ಸಮಾಜದ ಆಸ್ತಿ ಅವರ ಗೆಲುವು ಸಮಾಜದ ಹೆಮ್ಮೆ, ಅವರು ಇದುವರಿಗೂ ಗಾಣಿಗ ಸಮಾಜದ ಗೌರವ ಅಧ್ಯಕ್ಸರಾಗಿ ಸಮಾಜದ ಎಳಿಗೆಗೆ ಶ್ರಮಿಸಿದ್ದಾರೆ, ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿ, ಜಿಲ್ಲೆಯಲ್ಲಿ ಭವನ ನಿರ್ಮಾಣಕ್ಕಾಗಿ ಹಾಗೂ ಎಲ್ಲಾ ಸಮಾಜದ ಸಂಘನೆಯತ್ತ ಗಮನ ಹರಿಸಬೇಕು, ಶಿವಮೊಗ್ಗ ಜಿಲ್ಲೆಯ ಮಾದರಿ ಶಾಸಕರಾಗಿ ಮುಂದುವರಿಯಲಿ ಮತ್ತು ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃಧಿ ಗುರುತಿಸಿ ಅವರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಗಲಿದೆ ಎಂದು ಅಭಿನಂಧಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಜಿ ವಿಜಯಕುಮಾರ್, ಕಾರ್ಯದರ್ಶಿ ಕಿರಣ್ ಸಜ್ಜನ್, ಖಜಾಂಚಿ ರವಿ, ನಿರ್ದೇಶಕರಾದ ಗುರುರಾಜ್,ವಾಗೀಶ್ ಕೋಟಿ, ರವೀಶ್, ಮಹೇಶ್, ಎಸ್ Upma ಸತೀಶ್,ಮಲ್ಲಿಕಾರ್ಜುನ ಕಾನೂರ್, ಪ್ರೊ. ನೀಲಗುಂದ್, ಪ್ರೊ. ಸತೀಶ್, ಭದ್ರಾವತಿ ತಾಲೂಕು ಗಾಣಿಗ ಕ್ಷೆಮಭಿವೃದ್ಧಿ ಸಂಘದ ಅಧ್ಯಕ್ಷರು ಆನಂದ್ ಕುಮಾರ್, ಶಿವಾನಂದ ಷಣ್ಮುಕಪ್ಪ, ನಂದಿನಿ ಹೋಟೆಲ್ ಮಹದೇವಪ್ಪ, ದೀಪು ಇತರರಿದ್ದರು.