ಶಿವಮೊಗ್ಗ : ವಿದ್ಯಾರ್ಥಿಗಳಿಗೆ ಪಠ್ಯದ ಮೂಲಕ ಜಾನಪದ ಕಲೆ, ಸಾಹಿತ್ಯದ ಅರಿವು ಮೂಡಿಸಲು ಅಳವಡಿಸಲಾಗಿದೆ. ನೀವು ಪರೀಕ್ಷೆಗೆ ಸೀಮಿತವಾಗಿರಿಸದೆ ಅದರ ಮಹತ್ವ ತಿಳಿಯಬೇಕು. ಅರಿವನ್ನು ವಿಸ್ತಾರಗೊಳಿಸಿಕೊಳ್ಳಬೇಕು. ಅಲ್ಲಿರುವ ಯಶೋಗಾತೆ, ಸಾಹಸವನ್ನು ಮನಗಾಣಬೇಕು ಎನ್ನುವಕಾರಣ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಡಿ. ಮಂಜುನಾಥ ವಿವರಿಸಿದರು.
ಕರ್ನಾಟಕ ಜಾನಪದ ಪರಿಷತ್ತು ನೇತೃತ್ವದಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜು ಸಹಯೋಗದಲ್ಲಿ ಗುರುವಾರ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯದಲ್ಲಿರುವ ಪುನೇದಹಳ್ಳಿ ಸಮದ್ ಸಾಹೇಬರು ಬರೆದ ಮೈಲಾರ ಮಹಾದೇವ ಅವರನ್ನು ಕುರಿತ ಲಾವಣಿ ಗಾಯನ ವಿಶ್ಲೇಷಣೆ ಒಳಗೊಂಡ ಮುಂಗಾರು ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಿನ ಖ್ಯಾತ ಲಾವಣಿ ಕಲಾವಿದ ಗದುಗಿನ ಶಂಕರಣ್ಣ ಆರ್. ಎಸ್. ಅವರು ಜಾನಪದ ಸಂಗೀತ ಕಲೆಗಳ ಜೊತೆಗೆ ನಿಮ್ಮನ್ನು ಬೆಸೆಯುವ ಸಲುವಾಗಿ ಈ ವ್ಯವಸ್ಥೆ. ಜನರ ಬದುಕಿನ ಜೊತೆ ಜನಪದವಿದೆ. ಲಾವಣಿ ಶಿಷ್ಟಸಾಹಿತ್ಯದಂತಲ್ಲ. ಲಾವಣಿ ರಾಜ, ಮಹಾರಾಜರ, ದೇವಾನು ದೇವತೆಗಳ ಕುರಿತು ಬಾಯಿಂದ ಬಾಯಿಗೆ ಹರಿದು ಬಂದವು. ಐತಿಹಾಸಿಕ, ಪೌರಾಣಿಕ ವ್ಯಕ್ತಿಗಳ ವೀರಮರಣ ಕುರಿತು ಮೂಡಿಬಂದಿವೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಎನ್. ರಾಜೇಶ್ವರಿ ಅವರು ಹಸಿದಾಗ ಪಾಯಸದ ಊಟ ಸಿಕ್ಕರೆ ಆಗುವ ಅನುಭವ ಆಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಲು ವಿದ್ಯಾರ್ಥಿಗಳಿಗೆ ಪ್ರೇರಕವಾಗಿದೆ. ಪಠ್ಯವನ್ನು ಈ ರೀತಿ ಅರ್ಥ ಮಾಡಿಕೊಂಡರೆ ಅದರ ಪ್ರಭಾವ ಖಂಡಿತವಾಗಿ ಆಗುತ್ತೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಎಂ. ಮುತ್ತಯ್ಯ ಸ್ವಾಗತಿಸಿದರು. ಕನ್ನಡ ಅಧ್ಯಾಪಕ ಆರ್. ಗಣೇಶ್ ಕೆಂಚನಾಲ ಸ್ವಾಗತ ಗೀತೆ ಹಾಡಿದರು. ಕರ್ನಾಟಕ ಜಾನಪದ ಪರಿಷತ್ತು ಉಪಾಧ್ಯಕ್ಷ ರಾದ ಡಿ.ಸಿ. ದೇವರಾಜ್, ಪ್ರಧಾನ ಕಾರ್ಯದರ್ಶಿ ಡಾ. ಕೆ. ಜಿ. ವೆಂಕಟೇಶ್ ಉಪಸ್ಥಿತರಿದ್ದರು. ಕನ್ನಡ ಅಧ್ಯಾಪಕರಾದ ಡಾ. ಜಿ.ಕೆ. ಪ್ರೇಮ ನಿರೂಪಿಸಿದರು. ಡಾ. ಹಾ.ಮಾ. ನಾಗಾರ್ಜುನ ವಂದಿಸಿದರು.