ಶಿವಮೊಗ್ಗ, ಮಾರ್ಚ್ 03 : ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 06/03/2021 ರ ಭಾನುವಾರದಂದು 2021-22 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ “ಸಹ್ಯಾದ್ರಿ ಕಾಲೇಜ್ ಮುಂಭಾಗ- ಬಿ.ಹೆಚ್.ರಸ್ತೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗ-ಗಾಡಿಕೊಪ್ಪ, ಗುಡ್‍ಲಕ್ ಸರ್ಕಲ್ ಹತ್ತಿರ-ಸ್ವಾಮಿ ವಿವೇಕಾನಂದ ಬಡಾವಣೆ, ಶಾಂತಿನಗರ ಯಲ್ಲಮ್ಮ ದೇವಸ್ಥಾನದ ಹತ್ತಿರ, ವಿನೋಬನಗರ ಪೊಲೀಸ್ ಚೌಕಿ ಹತ್ತಿರ” ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗಿದೆ.
ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
