ಪ್ರೇಕ್ಷಕರೇ ಕಲೆಗೆ ಜೀವಾಳ ಹಿಂದೆ ರಾಜ ಮಹಾರಾಜರು ಕಲೆ ಗಳನ್ನು ಪೋಷಿಸುತ್ತಿದ್ದರು ಎಂದು ಉದ್ಯಮಿ ನಾಗರಾಜ್ ಪೈ ಹೇಳಿದರು
ಸಾಗರದ ಶಿವಮಯ ಸಭಾಂಗಣದಲ್ಲಿ ಭಾನುವಾರ ಸಂಜೆ ಕಲರವ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಗೀತ ಕಲರವ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು
70ರ ದಶಕದಲ್ಲಿ ಮೂಡಿ ಬಂದ ಹಳೆಯ ಹಾಡುಗಳು ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ ಅದರಲ್ಲೂ ಚಲನಚಿತ್ರ ಗೀತೆಗಳಲ್ಲಿಯೂ ಸುಗಮ ಸಂಗೀತವನ್ನು ಬಳಸಲಾಯಿತು ಬರ ಬರುತ್ತಾ ಅರ್ಥ ಕಳೆದುಕೊಂಡ ಶಬ್ದ ಮೇಲೆಯೇ ನಿಂತಿರುವ ಗೀತೆಗಳು ಆಗುತ್ತಾ ಬಂದವು ಎಷ್ಟೋ ಗೀತೆಗಳಲ್ಲಿ ಅರ್ಥವೂ ಇಲ್ಲ ಅದು ಬಹುಕಾಲ ಮನಸ್ಸಿನಲ್ಲಿ ಉಳಿಯುವುದೂ ಇಲ್ಲ ಸುಗಮ ಸಂಗೀತಕ್ಕೆ ಅರ್ಥವಂತಿಕೆಯನ್ನು ಹೊಸ ಭಾಷೆಯನ್ನು ತಂದುಕೊಟ್ಟವರು ಪಿ ಕಾಳಿಂಗರಾವ್ ಮೈಸೂರು ಅನಂತಸ್ವಾಮಿ ಸಿ ಅಶ್ವತ್ ಅವರ ಪ್ರಯತ್ನ ನಾವು ಮರೆಯುವಂತಿಲ್ಲ ಹೊಸ ತಾಳಿ ಮಾರಿನ ಹಾಡುಗಾರರ ಪ್ರಯತ್ನಗಳು ಇನ್ನು ಹೆಚ್ಚಾಗಬೇಕು ಯುವ ಕಲಾವಿದರಿಗೆ ವೇದಿಕೆ ನಿರ್ಮಿಸಿ ಕೊಡುವ ಕೆಲಸ ಹೆಚ್ಚಾಗಬೇಕು ಎಂದರು
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ದೀಪಕ್ ಸಾಗರ್ ಮಾತನಾಡಿ ಸುಗಮ ಸಂಗೀತದಲ್ಲಿ ಹೊಸ ಹಾಡುಗಳಿಗೆ ರಾಗ ಸಂಯೋಜಿಸಿ ಹಾಡುವ ಪ್ರಯತ್ನಗಳು ಕಡಿಮೆಯಾಗುತ್ತಿವೆ ಸಿದ್ಧಿಗಿಂತ ಪ್ರಸಿದ್ಧಿ ಹೆಚ್ಚಾಗುತ್ತಿದೆ ರಿಯಾಲಿಟಿ ಶೋಗಳು ಹೊಸ ಹಾಡುಗಾರರನ್ನು ಸೃಷ್ಟಿಸುತ್ತಿದ್ದರು ಕಾಯಕಕ್ಕಿಂತ ಪ್ರಚಾರವೇ ಹೆಚ್ಚುತ್ತಿರುವುದು ಕಲಾ ಕ್ಷೇತ್ರದಲ್ಲಿ ಅಪಾಯಕಾರಿ ಬೆಳವಣಿಗೆಯಾಗಿದೆ ಮೈಸೂರನ್ನು ಹೊರತುಪಡಿಸಿದರೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಬಹುದೊಡ್ಡ ಹೆಸರಿದೆ ಇಂದಿನ ಆಧುನಿಕ ತಂತ್ರಜ್ಞಾನ ಗುರು ಮುಖೇನ ಕಲಿಯುವ ವಿದ್ಯಗಳಿಂದಲೂ ತಪ್ಪಿಸುತ್ತಿದೆ ಗಾಯನ ಕ್ಷೇತ್ರದಲ್ಲೊಂದು ಇದು ಹೆಚ್ಚು ಬಳಕೆಯಾಗುತ್ತಿದ್ದು ಕಲಾವಿದರು ತಮ್ಮ ಕ್ಷೇತ್ರದಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗುತ್ತಿದೆ ಸುಗಮ ಸಂಗೀತ ಗಾಯಕರು ಹೊಸ ಪ್ರಯತ್ನಗಳತ್ತ ಗಮನಹರಿಸಬೇಕು ಅದನ್ನು ಪ್ರೇಕ್ಷಕರು ಒಪ್ಪಿಕೊಳ್ಳುವಂತಾಗಬೇಕು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲರವ ಟ್ರಸ್ಟಿನ ಅಧ್ಯಕ್ಷ ಮಧುಸೂದನ್ ಘಾಟೆ ಮಾತನಾಡಿ ಕಲೆ ಬರೆ ಮನೋರಂಜನೆಗಾಗಿ ಅಲ್ಲ ಅದು ಆತ್ಮ ಸಂತೋಷವನ್ನು ನೀಡುತ್ತದೆ ಸುಗಮ ಸಂಗೀತ ಸುಲಭವಾದ ಕೆಲಸವಲ್ಲ ಇದರಲ್ಲಿರುವ ಅರ್ಥ ಭಾವವನ್ನು ಜನತೆಗೆ ತಲುಪಿಸುವುದು ಸುಗಮ ಸಂಗೀತ ಗಾಯಕರಿಗೆ ಕವಿ ಕಾವ್ಯದ ಅರ್ಥವಂತಿಕೆಯು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು
ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ಹೆಸರಾಂತ ಸುಗಮ ಸಂಗೀತ ಗಾಯಕ ಮುರಳಿಧರ ನಾವಡ ಮತ್ತು ಸಂಗಡಿಗರು ಕವಿ ಗೋಪಾಲಕೃಷ್ಣ ಅಡಿಗ ಡಾಕ್ಟರ್ ಚಂದ್ರಶೇಖರ ಕಂಬಾರ ಜಿಪಿ ರಾಜರತ್ನಂ ರಾಷ್ಟ್ರಕವಿ ಕುವೆಂಪು ರಚಿತ ಭಾವಗೀತೆಗಳ ಗಾಯನದ ಜೊತೆಯಲ್ಲಿ ಭಕ್ತಿ ಸಂಗೀತ ಜಾನಪದ ಸಂಗೀತವನ್ನು ಹಾಡಿ ಜನಮನ ಸೆಳೆದರು
ಕಾರ್ಯಕ್ರಮವನ್ನು ಕಲರವ ಟ್ರಸ್ಟ್ ಕಾರ್ಯದರ್ಶಿ ಅರುಣ್ ಘಾಟೆ ನಿರ್ವಹಿಸಿದರು
ಗಾಯನದಲ್ಲಿ ಸಂಜನಾ ಆರ್ ಎಸ್ ನಿರತ ಗೋಪಾಲ್ ಸಹಕರಿಸಿದರು
ಪಕ್ಕ ವಾದ್ಯದಲ್ಲಿ ಶ್ರೀಧನ್ ನಿಖಿಲ್ ಕುಂಸಿ ಸಂವತ್ಸರ ಸಹಕರಿಸಿದರು
ಕಾರ್ಯಕ್ರಮದಲ್ಲಿ ವಿದ್ವಾನ್ ಎಂ ಗೋಪಾಲ್. ರಾಧಾಕೃಷ್ಣ ಉರಾಳ. ಸತೀಶ್. ರವೀಶ್ ರಾಘವೇಂದ್ರ ಮಂಕಾಳೆ ಅಪರ್ಣ ರಾಜೇಶ್. ಶೈಲಜಾ. ಪುಟ್ಟಪ್ಪ ಗೌರಿ. ಪರಿಣಿತಿ ಕಲಾ ಕೇಂದ್ರದ ವಿದ್ಯಾರ್ಥಿಗಳು ಇತರರು ಹಾಜರಿದ್ದರು