ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ಗ್ರಾಮ, ನಗರ ಹಾಗೂ ಜನವಸತಿಯ ಎಲ್ಲ ಪ್ರದೇಶಗಳನ್ನು ಸ್ವಚ್ಛ ಆಗಿಡಲು ಮೇರಾ ಸ್ವಚ್ಛ ಶೆಹರ್ ಅಭಿಯಾನ ರೂಪಿಸಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪುರಸಭೆಯಲ್ಲಿ ಈ ಯೋಜನೆ ಪರಿಣಾಮಕಾರಿಯಾಗಿ ರೂಪುಗೊಳ್ಳುವಲ್ಲಿ ಮಹಿಳಾ ಸ್ವ ಸಹಾಯ ಸಂಘಗಳು ಬೆನ್ನೆಲುಬಾಗಿ ನಿಂತಿವೆ.
ಮಹಾತ್ಮ ಗಾಂಧಿಯವರು ದೇಶಕ್ಕೆ ಗ್ರಾಮ ರಾಜ್ಯದ ಪರಿಕಲ್ಪನೆ ನೀಡಿದರು. ಗ್ರಾಮಗಳನ್ನು ಸ್ವಚ್ಛ ಆಗಿಟ್ಟುಕೊಳ್ಳುವಲ್ಲಿ ನಡೆದ ದಾರಿ, ತೋರಿಸಿದ ಮಾರ್ಗ ಅವಿಸ್ಮರಣೀಯ.
ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ನನ್ನ ಲೈಫ್ , ನನ್ನ ಸ್ವಚ್ಛ ನಗರ ಕಾರ್ಯಕ್ರಮದಡಿಯಲ್ಲಿ ಮನೆಗಳಲ್ಲಿ ಸಂಗ್ರಹಿಸಿದ , ಶೇಖರಿಸಿದ ಪ್ಲಾಸ್ಟಿಕ್ ಬ್ಯಾಗ್, ಆಟಿಕೆ, ಬಳಸಿದ ಬಟ್ಡೆಗಳು, ಹಳೆಯ ಪುಸ್ತಕ, ಎಲೆಕ್ಟ್ರಾನಿಕ್ ತ್ಯಾಜ್ಯ ಸೇರಿದಂತೆ ಆರು ಬಗೆಯ ವಸ್ತುಗಳನ್ನು ವರ್ಗೀಕರಿಸಿ ಅದನ್ನು ನವೀಕರಿಸಿ ಮರುಬಳಸಲು ಕೇಂದ್ರ ತೆರೆಯಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯಲ್ಲಿ ಶಿರಾಳಕೊಪ್ಪ ಜನತೆ ವ್ಯವಸ್ಥಿತವಾಗಿ ಬಳಸಿಕೊಳ್ಳಲು ಜೂನ್ 6ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಹೇಮಂತ್ ಎಸ್.ಡೊಳ್ಳೆ
ಶಿರಾಳಕೊಪ್ಪ ಪುರಸಭೆ ಮುಖ್ಯಾಧಿಕಾರಿ
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ನನ್ನ ಲೈಫ್ , ನನ್ನ ಸ್ವಚ್ಛ ನಗರ ಯೋಜನೆಯಡಿ ಜನಜಾಗೃತಿ ಮೂಡಿಸಲಾಗುತ್ತಿದ್ದು, ಆರು ಬಗೆಯ ವಸ್ತುಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ನವೀಕರಿಸಿ ಪುನರ್ ಬಳಸುವಂತೆ ಮಾಡಲಾಗುತ್ತಿದೆ. ರಾಷ್ಟ್ರ ಮಟ್ಟದ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ನಮ್ಮ ಪುರಸಭೆ ಕಾರ್ಯ ನಿರ್ವಹಿಸುತ್ತಿದೆ.
ದೀಪಾ
ಶಿರಾಳಕೊಪ್ಪ
ಪ್ಲಾಸ್ಟಿಕ್ ಅತಿ ಬಳಕೆಯಿಂದ ಕ್ಯಾನ್ಸರ್ ನಂತಹ ಮಾರಕ ರೋಗ ಬರುತ್ತವೆ. ಪ್ಲಾಸ್ಟಿಕ್ ಬಳಸದೇ ಪರಿಸರ ಸ್ನೇಹಿ ಬ್ಯಾಗ್ ಗಳನ್ನು ಒದಗಿಸುತ್ತಿದೆ. ಆಧುನಿಕ ತಂತ್ರಜ್ಞಾನ ಲೇಪನವಿರುವ ಪ್ರಶಂಸಾ ಪತ್ರ ನೀಡಲಾಗುತ್ತಿದೆ.
ಪುಷ್ಪಾ, ಶಿರಾಳಕೊಪ್ಪ
ಸ್ತ್ರೀ ಶಕ್ತಿ ಸಂಘ
ಶಿರಾಳಕೊಪ್ಪ ಪುರಸಭೆ ಶುಚಿತ್ವದ ಕುರಿತು ಜನಜಾಗೃತಿ ಮೂಡಿಸುವ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ವಿಶೇಷ ಅಭಿಯಾನ ಸಾರ್ವಜನಿಕ ರನ್ನು ಪರಿಸರ ಸ್ನೇಹಿ ಕಾರ್ಯದಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡುತ್ತಿದೆ. ಸರ್ಕಾರದ ಯೋಜನೆ ಅತ್ಯಂತ ಉಪಯುಕ್ತ ವಾಗಿದೆ.