ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ಮಹಾವಿದ್ಯಾಲಯವು ಕೃಷಿ ವಿಶ್ವವಿದ್ಯಾಲಯದ ಒಂದು ಪ್ರಮುಖ ಮಹಾವಿದ್ಯಾಲಯವಾಗಿದೆ. 1974 ರಲ್ಲಿ ಸ್ಥಾಪಿತವಾದ ಈ ಮಹಾವಿದ್ಯಾಲಯವು ಸಾವಿರಾರು ವಿದ್ಯಾರ್ಥಿಗಳನ್ನು ಉದಯೋನ್ಮುಖ ಉದ್ಯಮಿಗಳನ್ನು ನೀಡಿದ ಮಹಾವಿದ್ಯಾಲಯ ಇದಾಗಿದೆ. ಈ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ, (ಆನರ್ಸ್) ಸಮುದಾಯ ವಿಜ್ಞಾನದಲ್ಲಿ ನಾಲ್ಕು ವರ್ಷಗಳ ಪದವಿಯನ್ನು ನೀಡುತ್ತದೆ. ವೈದ್ಯಾಕೀಯ ಮತ್ತು ಇಂಜನಿಯರಿಂಗ್ ಶಿಕ್ಷಣದ ಪ್ರವೇಶದ ಪದ್ಧತಿಯಮತೆ ಇಲ್ಲಿಯೂ ಕೂಡ ಸಿಇಟಿ ಪಡೆದು ಪ್ರವೇಶವನ್ನು ಪಡೆಯಬೇಕಾಗುತ್ತದೆ. ಒಟ್ಟಾರೆ 8 ಸೆಮಿಸ್ಟರ್ ಗಳಲ್ಲಿ ಮೊದಲ ಐದು ಸೆಮಿಸ್ಟರ್‍ಗಳಲ್ಲಿ ಎಲ್ಲಾ ವಿಭಾಗದ ಕೋರ್ಸಗಳನ್ನು ಕಲಿಸಲಾಗುತ್ತದೆ. ಆರನೇ ಸೆಮಿಸ್ಟರ್ ಮತ್ತು ಅಂತಿಮ ವರ್ಷದಲ್ಲಿ (ಗ್ರಾಮೀಣ ಉದ್ಯಮಶೀಲತೆ ಜಾಗೃತಿ ಅಭಿವೃದ್ಧಿ ಯೋಜನೆ) ಎಂದು ಕರೆಯಲ್ಪಡುವ ಒಂದು ನವೀನ ಗಳಿಕೆ ಮತ್ತು ಕಲಿಕೆ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ. ಈ ಕಾರ್ಯಕ್ರಮವು ಅನುಭವಿ ಕಲಿಕೆಯನ್ನು ಒಳಗೊಳ್ಳುತ್ತದೆ. ಅದು ಅವರಿಗೆ ಸ್ವ-ಅನುಭವ ನೀಡುವುದಲ್ಲದೇ ಉದ್ಯಮಶೀಲತಾ ಕೌಶಲ್ಯಗಳನ್ನು ಬೆಳೆಸುವ ಅವಕಾಶವನ್ನು ಪ್ರತಿಬಿಂಬಿಸುತ್ತದೆ. ಅರ್ಹತೆಯ ಆಧಾರದ ಮೇಲೆ ವಿದ್ಯಾರ್ಥಿಗಳು ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಕೈಗೊಂಡ ವಿವಿಧ ಉದ್ಯಮಶೀಲ ಚಟುವಟಿಕೆಗಳೆಂದರೆ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ಆಡಿಯೋ-ವಿಡಿಯೋ ಮತ್ತು ಡಿವಿಡಿ ತಯಾರಿಸುವುದು, ಮುದ್ರಣ ಉತ್ಪಾದನೆಯಡಿಯಲ್ಲಿ ರೈತರ ಅಗತ್ಯತೆಗಳನ್ನು ಪೂರೈಸುವ ಜನಪ್ರಿಯ ಪುಸ್ತಕಗಳನ್ನು ಬರೆಯುವುದು ಮತ್ತು ಪ್ರಕಟಿಸುವ ಇತ್ಯಾದಿ ಚಟುವಟಿಕೆಗಳನ್ನು ವಿಸ್ತರಣೆ ಮತ್ತು ಸಂವಹನ ವಿರ್ವಹಣಾ ವಿಭಾಗÀದಿಂದ ಮಾಡಲಾಗುತ್ತದೆ. ಗ್ರಾಹಕ ರಾಸಾಯನಿಕಗಳ ಉತ್ಪಾದನೆ ಅಂದರೆ ಫಿನೈಲ್. ಡಿಶ್‍ವಾಶ್, ಫ್ಲೋರ್ ಕ್ಲೇನರ್, ಡಿಟರ್ಜಂಟ್ ಪೌಡರ್ ಮತ್ತು ಲಿಕ್ವಿಡ್ ಹ್ಯಾಂಡ ವಾಶ್ ಮತ್ತು ಆಫೀಸ್ ಸ್ಟೇಷನರಿಗಳ ಫೋಲ್ಡರ್‍ಗಳು, ಲಕೋಟೆಗಳು, ಫೈಲ್‍ಗಳು ಮತ್ತು ಹೊದಿಕೆಗಳ ಉತ್ಪಾದನೆಯನ್ನು, ಹೂಗಳ ಅಲಂಕಾರಿಕ ಜೋಡನೆ ಕುಟುಂಬ ಸಂಪನ್ಮೂಲ ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳು ಕೈಗೊಳ್ಳುತ್ತಾರೆ. ಆರೋಗ್ಯ, ಆಹಾರಗಳ ಉತ್ಪಾದನೆ, ಪೂರಕ ಆಹಾರಗಳ ಪ್ರಮಾಣೀಕರಣ ಮತ್ತು ಉತ್ಪಾದನೆ, ಶಕ್ತಿಯನ್ನು ಒದಗಿಸುವ ಆಹಾರ. ವಿವಿಧ ವಯೋಮಾನದವರಿಗೆ ಆರೋಗ್ಯ ಆಹಾರಗಳನ್ನು ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶÀ ವಿಭಾಗದ ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಾರೆ. ಎಲ್ಲಾ ರೀತಿಯ ಉಡುಪು ತಯಾರಿಕೆ, ದೊಡ್ಡ ಪ್ರಮಾಣದ ಕಸೂತಿ ಮತ್ತು ಬಟ್ಟೆಗಳನ್ನು ಬಣ್ಣ ಮಾಡಲು ಪರಿಸರ ಸ್ನೇಹಿ ತಂತ್ರಜ್ಞಾನಗಳ ಬಳಕೆಯನ್ನು ಜವಳಿ ಮತ್ತು ಉಡುಪು ವಿನ್ಯಾಸ ಇಲಾಖೆಯಿಂದ ತೆಗೆದುಕೊಳ್ಳಲಾಗಿದೆ. ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಶಾಲಾ ಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗೆ ಆಪ್ತ ಸಮಾಲೋಚನೆ ಚಟುವಟಿಕೆಗಳು ಕೊಡುಗೆಯಾಗಿ ನೀಡಿದ್ದು ಅನೇಕ ಪ್ರಮುಖ ಇಲಾಖೆಗಳಲ್ಲಿ ಮೇಲ್ದರ್ಜೆ ವಿಭಾಗಗಳಲ್ಲಿ ಅನೇಕ ವಿದ್ಯಾರ್ಥಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಅನೇಕ. ಮಕ್ಕಳ ಬೆಳವಣಿಗೆ ಮತ್ತು ಪೂರಕ ಪ್ರಚೋದನಾತ್ಮಕ ಚಟುವಟಿಕೆಗಳು, ಆಟದ ಸಾಮಾನುಗಳು, ಬೇಳವಣಿಗೆ ವಿವಿಧ ಹಂತಗಳು ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಲಾಗುವದು, ಹೀಗಾಗಿ ಈ ಕೋರ್ಸ ವಿದ್ಯಾರ್ಥಿಗಳಿಗೆ ಪ್ರಾರಂಭ ಮತ್ತು ಉದ್ಯಮದಲ್ಲಿ ಅನುಭವವನ್ನು ಪಡೆಯಲು ಮಾತ್ರವಲ್ಲದೆ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸುತ್ತಾರೆ. ಕಾಲೇಜಿನಿಂದ ಹೊರಬರುತ್ತಿರುವ ತಂತ್ರಜ್ಞಾನಗಳಿಗೆ ಪ್ರತಿಕ್ರಿಯೆಯನ್ನು ಪ್ರಯೋಗಿಸುವುದು ಮತ್ತು ಅನುಭವಿಸುವುದು ವಿದ್ಯಾರ್ಥಿ ಕಾರ್ಯಕ್ರಮದ ಮುಖ್ಯ ಧ್ಯೇಯವಾಗಿದೆ.

error: Content is protected !!