ಶಿವಮೊಗ್ಗ, ಜನವರಿ 16 :ದೇಶದ ಸರ್ವಾಂಗೀಣ ಅಭಿವೃದ್ದಿಯಲ್ಲಿ ನಮ್ಮ ಯುವಜನತೆ ಪಾತ್ರ ಮಹತ್ತರವಾಗಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ನೆರೆಹೊರೆ ಯುವ ಸಂಸತ್ತು ಕಾಯಕ್ರಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಯುವ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶ ಯುವಶಕ್ತಿಯಿಂದ ಸಂಪತ್ಭರಿತವಾಗಿದೆ. ಜನಸಂಖ್ಯೆಯಲ್ಲಿಯೂ ಸಹ ಪ್ರಪಂಚದಲ್ಲಿ ಮೊದಲ ಸ್ಥಾನ ಪಡೆದ ದೇಶವೆಂದು ಘೋಷಣೆಯಾಗಲಿದೆ. ಅತ್ಯಂತ ಹೆಚ್ಚು ಯುವಜನತೆಯನ್ನು ಹೊಂದಿರುವ ನಮ್ಮ ರಾಷ್ಟ್ರ ಪ್ರಪಂಚಕ್ಕೆ ಉತ್ತಮ ಮಾನವ ಸಂಪನ್ಮೂಲವನ್ನು ನೀಡುವ ಜವಾಬ್ದಾರಿ ಹೆಚ್ಚಿದೆ.
21 ನೇ ಶತಮಾನದಲ್ಲಿ ತಂತ್ರಜ್ಞಾನ ಬಳಕೆ, ಇ-ಗವರ್ನೆನ್ಸ್, ಕ್ಷಿಪ್ರತೆ ಮತ್ತು ಪಾರದರ್ಶಕತೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಸುಸ್ಥಿರ ಮತ್ತು ಉತ್ತಮ ಆರ್ಥಿಕತೆ ಎಡೆ ನಮ್ಮ ದೇಶ ಹೆಜ್ಜೆ ಹಾಕುತ್ತಿದ್ದು, ಈ ಬಾರಿಯ ಜಿ-20 ರಾಷ್ಟ್ರಗಳ ಶೃಂಗ ಸಭೆ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಹೆಮ್ಮೆ ತರುವ ವಿಚಾರ. ಒಂದು ವರ್ಷ ಕಾಲ ಅನೇಕ ರಾಷ್ಟ್ರಗಳನ್ನು ಆಹ್ವಾನಿಸಿ, ಜನರ ಪಾಲ್ಗೊಳ್ಳುವಿಕೆಯಿಂದ ಉತ್ತಮ ಚರ್ಚೆ, ಕಾರ್ಯಕ್ರಮಗಳು ನಡೆಯಲಿವೆ. ಭೂಮಿ, ಪರಿಸರ ಮಾಲಿನ್ಯ ನಿಯಂತ್ರಣ, ಆರ್ಥಿಕತೆ ಇತರೆ ಆದ್ಯತೆಯ ವಿಚಾರಗಳು ಚರ್ಚೆಯಾಗಲಿದೆ. ಜೊತೆಗೆ ಜಗತ್ತಿಗೆ ನಮ್ಮ ದೇಶ, ಸಂಪನ್ಮೂಲ ಪರಿಚಯ ಆಗಲಿದೆ.
ಯುವಶಕ್ತಿ ಒಂದು ಹಬ್ಬದ ರೀತಿಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದೆ. ಯುವಜನತೆ ನೀಡುವ ಸಲಹೆಗಳಿಗೆ ಸರ್ಕಾರ ಗಮನ ನೀಡಲಿದೆ. ನಮ್ಮ ಪ್ರಧಾನಿಯವರು ನೀಡುವ ಸಲಹೆಗಳನ್ನು ಇಂದು ಜಗತ್ತು ಒಪ್ಪುತ್ತಿದೆ. ಟಾಪ್ 5 ದೇಶಗಳಲ್ಲಿ ನಮ್ಮ ರಾಷ್ಟ್ರ ಇದ್ದು, ನಮ್ಮ ಯುವಜನತೆ ಇನ್ನೂ ಹೆಚ್ಚಿನ ರೀತಿಯಲ್ಲಿ ದೇಶದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬೇಕೆಂದು ಆಶಿಸಿದರು.
10 ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ಜಿ20 ಅಧ್ಯಕ್ಷತೆ ವೈ 20 ಯುವ ಸಭೆ ಹಾಗೂ ಮಿಷನ್ ಲೈಫ್ ಮತ್ತು ಇಂಟರ್‍ನ್ಯಾಷನಲ್ ಇಯರ್ ಆಫ್ ಮಿಲೆಟ್ಸ್ ಕುರಿತು ಪಿಪಿಟಿ ಪ್ರದರ್ಶನದೊಂದಿಗೆ ವಿಷಯ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ನವದೆಹಲಿಯ ಸಂಸತ್ತಿನಲ್ಲಿ ಭಾಷಣ ಮಾಡಿದ ಸುಪ್ರದ, ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಶಾಲಿನಿ, ಹಸ್ಮಿತಾ ತಸ್ಮಿ, ಮೇಘನಾ ಹಾಗೂ ನೆಹರು ಯುವ ಕೇಂದ್ರದಿಂದ ಯುವ ಸಂಘಗಳಿಗೆ ಸ್ಪೋಟ್ರ್ಸ್ ಕಿಟ್ ಮತ್ತು ಡೊಳ್ಳುಕುಣಿತ ತಂಡಕ್ಕೆ ಪ್ರಶಸ್ತಿಯನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ನವೀನ್‍ಕುಮಾರ್ ಎಸ್.ಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಯುವ ಅಧಿಕಾರಿ ಉಲ್ಲಾಸ್ ಕೆಟಿಕೆ, ರಂಗಾಯಣದ ಆಡಳಿತಾಧಿಕಾರಿ ಶೈಲಜ ಎಸಿ, ಕುವೆಂಪು ವಿವಿ ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ್ ಪರಿಸರ, ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಕುಮಾರಸ್ವಾಮಿ ಬಿ.ಎಂ, ಸಹಾಯಕ ಪ್ರಾಧ್ಯಾಪಕಿ(ಆಯುರ್ವೇದ)ಡಾ.ಹರ್ಷಿತ್ ಕೆ.ಜೆ, ಹೊಯ್ಸಳ ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಪ್ರಾಂಶುಪಾಲ ವಿಲಿಯಂ ಡಿಸೋಜ ಪಾಲ್ಗೊಂಡಿದ್ದರು.

error: Content is protected !!