ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ ಪುರಸ್ಕಾರ-2020” ü, ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ರೂ. 8 ಲಕ್ಷ ನಗದನ್ನು ಒಳಗೊಂಡಿದೆ.


ದೇಶದಲ್ಲಿರುವ ಒಟ್ಟು 722 ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರಗಳ ಪೈಕಿ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರವು ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿವೆ “ಪಂಡಿತ್ ಧೀನ್‍ದಯಾಳ ಉಪಾಧ್ಯಾಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ ಪುರಸ್ಕಾರ-2020” ಪ್ರಶಸ್ತಿಯನ್ನು ಅಟಾರಿ ಬೆಂಗಳೂರು, ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಆಳಂದ ರಸ್ತೆಯಲ್ಲಿ ಬರುವ ಐಸಿಎಅರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಗೆ ನೀಡಲಾಗಿದೆ.
ಕೃಷಿಯಲ್ಲಿ ತಂತ್ರಜ್ಞಾನಾಧಾರಿತ ಅಧಿಕ ಹಾಗೂ ಗುಣಮಟ್ಟದ ಇಳುವರಿ ಮತ್ತು ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಕೃಷಿ ವಿಜ್ಞಾನ ಕೇಂದ್ರಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಈ ಅತ್ಯುನ್ನತÀವಾದ ಪ್ರಶಸ್ತಿಯು ಟ್ರೋಪಿ ಅಟಾರಿ ಬೆಂಗಳೂರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಅಡಿಯಲ್ಲಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಕೇಂದ್ರುವು ಪ್ರಸಾರ ಮಾಡಿದ ಹಲವಾರು ತಾಂತ್ರಿಕತೆಗಳಾದ ತೊಗರಿ ಬೆಳೆಯಲ್ಲಿ ಮುಖ್ಯವಾಗಿ ಕಂಡುಬರುವ ನೆಟೆ ಮತ್ತು ಗೊಡ್ಡು ರೋಗ ನಿರೋಧಕ ತಳಿಗಳನ್ನು ಅಧಿಕ ಕ್ಷೇತ್ರಗಳಿಗೆ ವಿಸ್ತರಿಸಿ, ಪಲ್ಸ್‍ಮ್ಯಾಜಿಕ್ ತಂತ್ರಜ್ಞಾನದ ಬಳಕೆ ಹಾಗೂ ಸಮಗ್ರ ಕೀಟ ಮತ್ತು ರೋಗ ನಿರ್ವಹಣಾ ತಂತ್ರಜ್ಞಾನಗಳನ್ನು ರೈತ ಬಾಂಧವರು ಅಳವಡಿಸಿಕೊಂಡರು. ಇದರಿಂದ ಹೆಚ್ಚಿನ ಹಾಗೂ ಗುಣಮಟ್ಟದ ತೊಗರಿ ಇಳುವರಿ ಪಡೆದು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಹಾಗೆಯೇ ಹವಾಮಾನ ಮುನ್ಸೂಚನೆ, ಬೀಜೋಪಚಾರ ಆಂದೋಲನಾ, ಸಿರಿಧಾನ್ಯಗಳ ಮೌಲ್ಯವರ್ಧನೆ, ಮಣ್ಣಿನ ಆರೋಗ್ಯ ಕಾಪಾಡಲು ಮಣ್ಣು ಮತ್ತು ನೀರಿನ ಪರೀಕ್ಷೆಯ ಆರೋಗ್ಯ ಚೀಟಿ, ವೈಜ್ಞಾನಿಕ ಹೈನುಗಾರಿP,É ಕೊಟ್ಟಿಗೆ ಪದ್ಧತಿಯಲ್ಲಿ ಆಡು ಸಾಕಾಣಿಕೆ, ಸಿರೋಹಿ ಹೋತದಿಂದ ಸ್ಥಳೀಯ ಆಡುಗಳ ಉನ್ನತಿಕರಣ, ಆಧುನಿಕ ತೋಟಗಾರಿಕೆ, ಪುಷ್ಪಕೃಷಿ, ಹಣ್ಣು ಮತ್ತು ತರಕಾರಿ ಮಾಲ್ಯವರ್ಧನೆ, ತಾರಸಿ ಕೈತೋಟ, ಸಸ್ಯ ಅಭಿವೃದ್ದಿ ತಾಂತ್ರಿಕತೆ, ಒಣ ಬೇಸಾಯ ತೋಟಗಾರಿಕೆ, ಅರಣ್ಯ ಕೃಷಿ ಎರೆಹುಳು ಗೊಬ್ಬರ ಘಟಕ, ಅಜೋಲ್ಲಾ ಘಟಕ, ಜಲಕೃಷಿ ಘಟಕ ಹಾಗೂ ಇ-ಸ್ಯಾಪ್ ತಂತ್ರಜ್ಞಾನಗಳ ಮಾಹಿತಿಯನ್ನು ರೈತರೊಂದಿಗೆ ಹಂಚಿಕೊಳ್ಳುತ್ತಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಾದ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಸರಕಾರೇತರ ಸಂಸ್ಥೆಗಳೊಂದಿಗೆ ಅನೇಕ ರೈತಪರ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿ ಜಾರಿಗೆ ತಂದ ಹೆಗ್ಗಳಿಕೆ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ್ದಾಗಿದೆ. ಇದಲ್ಲದೆ ಕೃಷಿ ಸಂವಹನಗಳಾದ ರೇಡಿಯೋ, ದೂರದರ್ಶನ, ವಾಟ್ಸ್‍ಆಪ್, ವಿಡಿಯೋ ಕ್ಲಿಪಿಂಗ್ಸ್, ಸಂದೇಶಗಳು, ಯುಟ್ಯೂಬ್, ಕೆವಿಕೆ ಆ್ಯಪ್, ಟ್ವೀಟರ್ ಮತ್ತು ಫೇಸ್‍ಬುಕ್‍ಗಳ ಮೂಲಕ ರೈತರಿಗೆ ಮಾಹಿತಿಯನ್ನು ನೀಡುತ್ತಾ ಹಾಗೂ ದೇಶ-ವಿಧೇಶ ವಿನೂತನ ಕೃಷಿ ಪದ್ದತಿಯನ್ನು ರೈತರಿಗೆ ತಲುಪಿಸಿ ರೈತರ ಆದಾಯ ಹೆಚ್ಚಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರವು ಸದಾ ಮುಂಚೂಣಿಯಲ್ಲಿದೆ.


ಈ ಎಲ್ಲಾ ತಂತ್ರಜ್ಞಾನಗಳನ್ನು ಮುಂಚೂಣಿ ಪ್ರಾತ್ಯಕ್ಷಿಕೆ, ರೈತರ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಪರಿಶೀಲಿನೆ, ತರಬೇತಿ ಮತ್ತು ಪದ್ದತಿ ಪ್ರಾತ್ಯಕ್ಷಿಗಳ ಮೂಲಕ ಜಿಲ್ಲೆಯಲ್ಲಿ ಹಲವಾರು ಕೃಷಿ ತಂತ್ರಜ್ಞಾನರನ್ನು ಹುಟ್ಟು ಹಾಕಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪುರಸ್ಕಾರ ರೈತರ ಮೂಡಗೆರಿಸುವಲ್ಲಿ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರವು ಮಹತ್ತರವಾದ ಪಾತ್ರ ವಹಿಸಿದೆ.
ಕೃಷಿ ಪಂಡಿತ ಪುರಸ್ಕಾರ, ಅವಿಷ್ಕಾರಿ ಕೃಷಿಕ, ಶ್ರೇಷ್ಠ ಕೃಷಿಕ, ರೈತ ವಿಜ್ಞಾನಿ, ಚಂದನ ಪ್ರಶಸ್ತಿ, ಮಹೇಂದ್ರ ಸಮೃದ್ಧಿ ಪ್ರಶಸ್ತಿ ಎಂಬ ಹಲವಾರು ಪ್ರಶಸ್ತಿಗಳು ಪ್ರಮುಖವಾಗಿವೆ. ಈ ಎಲ್ಲಾ ಗರಿಗಳುಳ್ಳ ‘ಪಂಡಿತ್ ಧೀನ್‍ದಯಾಳ ಉಪಾಧ್ಯಾಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ ಪುರಸ್ಕಾರ’ವೆಂಬ ಕಿರೀಟವನ್ನು ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯ ತನ್ನದಾಗಿಸಿಕೊಂಡಿದೆ.
‘ಐಸಿಎಆರ್-ಜಗಜೀವನ್‍ರಾಮ್ ಅವಿಷ್ಕಾರ ಕೃಷಿಕ ಪುರಸ್ಕಾರ ಪ್ರಶಸ್ತಿ-2020’

ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಪ್ರೋತ್ಸಾಹಿತ, ಪ್ರಗತಿಪರ ಹಾಗೂ ಕ್ರಿಯಾಶೀಲ ಕೃಷಿಕರಾದ ಶ್ರೀ ಶರಣಬಸಪ್ಪಾ ಪಾಟೀಲ, ಹಾಲಸುಲ್ತಾನಪೂರ ಗ್ರಾಮದರವರಿಗೆ ರಾಷ್ಟ್ರ ಮಟ್ಟದ ‘ಐಸಿಎಆರ್-ಜಗಜೀವನ್‍ರಾಮ್ ಅವಿಷ್ಕಾರ ಕೃಷಿಕ ಪುರಸ್ಕಾರ ಪ್ರಶಸ್ತಿ-2020’ ಲಭಿಸಿದೆ. ಈ ಪುರಸ್ಕಾರವು ಕೃಷಿ ಕ್ಷೇತ್ರದಲ್ಲಿ ಅವರು ಅಳವಡಿಸಿರುವ ಹಲವಾರು ತಂತ್ರಜ್ಞಾನಗಳು ಮತ್ತು ಅವಿಷ್ಕಾರಗಳಾದ ತೋಗರಿ ಕುಟಿ ಚಿವುಟುವ ಯಂತ್ರ, ಸೌರಬೇಲಿ, ನಳ ನೀರಾವರಿ, ಕಡಿಮೆ ವೆಚ್ಚದ ಹೈಡ್ರೋಪೊನಿಕ್ಸ್, ಲಿಂಬೆ ಶ್ರೇಣಿಕರಣ ಉಪಕರಣ ಮತ್ತು ಸೌರಶಕ್ತಿ ವಿದ್ಯುತ್ ದೀಪ ಬಲೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು ಕೋವಿಡ್-19 ಕಾರಣದಿಂದ ಯಾವುದೇ ಸಭೆ, ಸಮಾರಂಭಗಳನ್ನು ಮಾಡದಿರುವುದರಿಂದ ಆನ್‍ಲೈನ್ ಮುಖಾಂತರ ನೀಡಲಾಯಿತು. ಈ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಶ್ರೀ ನರೇಂದ್ರಸಿಂಗ್ ತೋಮರ್, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು ರವರ ಅಧ್ಯಕ್ಷತೆಯಲ್ಲಿ ಕೃಷಿ ಭವನ, ನವದೆಹಲಿ ಆಯೋಜಿಸಲಾಗಿತ್ತು. ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು, ಶ್ರೀ ಪರುಷೋತ್ತಮ ರೂಪಾಲಾ, ಕೇಂದ್ರ ಮೀನುಗಾರಿಕೆ, ಪಶುಪಾಲನೆ ಮತ್ತು ಹೈನುಗಾರಿಕೆ ಸಚಿವರು, ಶ್ರೀ ಕೈಲಾಸ ಚೌದರಿ ಹಾಗೂ ಕು. ಶೋಭಾ ಕರಂದ್ಲಾಜೆ, ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರು, ಡಾ. ತ್ರೀಲೋಚನಾ ಮಹಾಪಾತ್ರ, ನಿರ್ದೇಶಕರು, ಐಸಿಎಆರ್, ನವದೆಹಲಿ. ಶ್ರೀ ಅಜಯ್‍ಸೌನೆ, ಕಾರ್ಯದರ್ಶಿ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ನವದೆಹಲಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ಗೌರವಾನ್ವಿತ ಕುಲಪತಿಗಳಾದ ಡಾ. ಕೆ.ಎನ್.

error: Content is protected !!