ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಟೋಸ್ಟ್ ಮಾಸ್ಟರ್ ಕ್ಲಬ್ ನ 121ಜಿಲ್ಲೆಯ ಸದಸ್ಯರ ಸಹಯೋಗದೊಂದಿಗೆ, ಸಂಘದ ಆಡಳಿತ ವರ್ಗ, ವಿಭಿನ್ನ ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು ಹಾಗೂ ಸಂಘದ ಸದಸ್ಯರಿಗೆ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ ಸಂಜೆ 5.00 ಘಂಟೆಯಿಂದ 7.30ರ ವರೆಗೆ ಪ್ರಾತ್ಯಕ್ಷಿತಾ (ಡೆಮೋ) ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ್‍ರವರು ಪರಿಸರ ದಿನಾಚರಣೆಯ ದ್ಯೋತಕವಾಗಿ ಹಸಿರು ಗಿಡಕ್ಕೆ ನೀರೆರೆಯುವ ಮೂಲಕ ವಿನೂತನವಾಗಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ಸದಸ್ಯರ ಕುಟುಂಬ ಜೀವನ, ವೃತ್ತಿ ಜೀವನ ಸಂಘ ಸಂಸ್ಥೆಗಳ ಸಮಾರಂಭಗಳಲ್ಲಿ ದಕ್ಷ ನಾಯಕತ್ವ ಗುಣ ಮತ್ತು ಪ್ರಭಾವಶಾಲಿ ಸಂವಹನ ಶಕ್ತಿ(ಕಮ್ಮೂನಿಕೇಷನ್) ಬೆಳೆಸಿಕೊಳ್ಳಲು ಸಂಘ-ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರುಗಳಿಗೆ ಸಹಕಾರಿಯಾಗುವುದರ ಜೊತೆಗೆ ವೈಯಕ್ತಿಕ ಹಾಗೂ ಸಂಘಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದು ತಿಳಿಸುತ್ತಾ ಇಂತಹ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಂಡರೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದೆಂದು ಅಭಿಪ್ರಾಯ ಸೂಚಿಸಿದರು.

ಟೋಸ್ಟ್ ಮಾಸ್ಟರ್ ಸಂಸ್ಥೆ ಯಾವುದೇ ಲಾಭದಾಯಕ ಅಪೇಕ್ಷೆ ಇರದ ಪ್ರಭಾವಶಾಲಿ ನಾಯಕತ್ವ ಗುಣ, ಸಭಾ ಸಂವಹನ ಗುಣಮಟ್ಟ ಹೆಚ್ಚಿಸುವ 150 ಕ್ಕೂ ಹೆಚ್ಚು ದೇಶಗಳ್ಲಿ 5-6 ಲಕ್ಷಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು ಪ್ರತಿಯೊಬ್ಬ ವೈಕ್ತಿಯಲ್ಲಿರುವ ಅದ್ಭುತ ಚಿಂತನಾ ಶಕ್ತಿ, ಪ್ರಾವಿಣ್ಯತೆ, ವಿಷಯಕ್ಕೆ ಮೆರಗು ನೀಡುವ ಸಮರ್ಥವಾಗಿ ಸಮರ್ಪಕವಾಗಿ ಪರಿಣಾಮಕಾರಿ ಸಂವಹನ ನಡೆಸುವ ಸಾಮಥ್ರ್ಯ ದಕ್ಷ ನಾಯಕತ್ವಗುಣ ನಿರ್ವಹಣೆಯ ಮಾರ್ಗದರ್ಶಿಯೊಂದಿಗೆ ಬೆಳೆಯುತ್ತಿರುವ ಸಹಕಾರಿ ಸಂಸ್ಥೆಯಾಗಿದೆ ಎಂದು ಟೋಸ್ಟ್ ಮಾಸ್ಟರ್ ನಾಲ್ಕು ಜಿಲ್ಲೆಗಳ 121ರ ನಿರ್ದೇಶಕರಾದ ವನಿತಾ ರಂಗರಾಜನ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ನಿರ್ದೇಶಕರುಗಳಾದ ಇ. ಪರಮೇಶ್ವರ, ಪ್ರದೀಪ್ ವಿ. ಯಲಿ, ಗಣೇಶ್ ಎಂ. ಅಂಗಡಿ, ರಮೇಶ್ ಹೆಗಡೆ, ಟೋಸ್ಟ್ ಮಾಸ್ಟರ್ ಡಿವಿಜನಲ್ ಡೈರೆಡಕ್ಟರ್ ಅಮಿತ್ ಆನಂದ್, ಅಶ್ವಿನ್, ಶಿವಮೊಗ್ಗ ಜಿಲ್ಲಾ ನಿರ್ದೇಶಕರಾದ ಶರತ್, ಶಿವಮೊಗ್ಗ ಜಿಲ್ಲಾ ಟೋಸ್ಟ್ ಮಾಸ್ಟರ್ ಹಲವಾರು ಸದಸ್ಯರು ಭಾಗವಹಿಸಿದ್ದರು. ಸ್ಮೀತಾ ನರಸಿಂಹಮೂರ್ತಿಯವರು ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು.

error: Content is protected !!