ಶಿವಮೊಗ್ಗ, ಜುಲೈ 06 : ಶಿವಮೊಗ್ಗ ತಾಲೂಕು ತೋಟಗಾರಿಕೆ ಇಲಾಖೆಯು 2022-23 ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಸಹಾಯಧನ ಸೌಲಭ್ಯವನ್ನು ಪಡೆಯಲು ಇಚ್ಛಿಸುವ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಕಾಳು ಮೆಣಸು ಪ್ರದೇಶ ವಿಸ್ತರಣೆ, ಅಂಗಾಂಶ ಬಾಳೆ ಪ್ರದೇಶ ವಿಸ್ತರಣೆ, ಹೈಬ್ರಿಡ್ ತರಕಾರಿ ಬೆಳೆಗಳ ಪ್ರದೇಶ ವಿಸ್ತರಣೆ, ಕೋಕೋ ಪ್ರದೇಶ ವಿಸ್ತರಣೆ, ಪುಷ್ಪ ಬೆಳೆ ಪ್ರದೇಶ ವಿಸ್ತರಣೆ, ತರಕಾರಿ ಬೆಳೆಗಳಲ್ಲಿ ಪ್ಲಾಸ್ಟಿಕ್ ಹೊದಿಕೆ, ಪಾಲಿಹೌಸ್ ಮತ್ತು ಶೇಡ್ ನೆಟ್ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಮಿನಿ ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ, ಪ್ಯಾಕ್‍ಹೌಸ್ ನಿರ್ಮಾಣ ಹಾಗೂ ಪ್ರಾಥಮಿಕ ಸಂಸ್ಕರಣಾ ಘಟಕ ನಿರ್ಮಾಣ ಇತ್ಯಾದಿ ಸೌಲಭ್ಯಗಳಿಗೆ ಅವಕಾಶವಿದ್ದು, ಆಸಕ್ತ ರೈತರು ನಿಗಧಿತ ನಮೂನೆ ಅರ್ಜಿಯನ್ನು ಸಹಾಯಕ ತೋಟಗಾರಿಕೆ ಅಧಿಕಾರಿಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ದಿ:20/07/2022 ರೊಳಗಾಗಿ ಸಲ್ಲಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.