ಶಿವಮೊಗ್ಗ, ಜನವರಿ 24 : ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗದಲ್ಲಿ ದಿನಾಂಕ 28-01-2020 ರಿಂದ 11-02-2020ರವರೆಗೆ “ತೋಟಗಾರಿಕಾ ಬೆಳೆಗಳ ನರ್ಸರಿ ತಾಂತ್ರಿಕತೆಗಳು“ ಕುರಿತು 15 ದಿನಗಳ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಆಸಕ್ತಿಯುಳ್ಳ ರೈತರು / ರೈತ ಮಹಿಳೆಯರು /ನಿರುದ್ಯೋಗಿ ಯುವಕ-ಯುವತಿಯರು ಈ ಕೋರ್ಸಿನ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ತರಬೇತಿಯು ಕೇವಲ 25 ಜನರಿಗೆ ಮಾತ್ರ ಸೀಮಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ಜ. 26 ರೊಳಗಾಗಿ ಹೆಸರನ್ನು ದೂರವಾಣಿ ಸಂಖ್ಯೆ 63609 02731 ಸಂಪರ್ಕಿಸಿ ನೊಂದಾಯಿಸಿಕೊಳ್ಳುವುದು