ಶಿವಮೊಗ್ಗ, ಜುಲೈ.5: ತುಂಗಾ ಮೇಲ್ದಂಡೆ ಯೋಜನೆ ಅಣೆಕಟ್ಟಿನಿಂದ ಜುಲೈ 8ರಿಂದ ನವೆಂಬರ್ ಕೊನೆಯವರೆಗೆ ಕಾಲುವೆಯಲ್ಲಿ ನೀರು ಹರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟು ಆವರಣದ ಹಿನ್ನೀರಿನಲ್ಲಿ ಮತ್ತು ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ವ್ಯಾಪ್ತಿಯಲ್ಲಿ ಬೆಳೆ ಬಿತ್ತುವುದು, ದನಕರುಗಳನ್ನು, ಪ್ರಾಣಿಗಳನ್ನು ಮೇಯಲು ಬಿಡುವುದು ಇತ್ಯಾದಿ ಚಟುವಟಿಕೆಗಳನ್ನು ಕೈಗೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ.
ಅಣೆಕಟ್ಟಿನಲ್ಲಿ ಪೂರ್ಣ ಮಟ್ಟಕ್ಕೆ (588.24ಮೀ) ನೀರು ಸಂಗ್ರಹಿಸಿ ನೀರನ್ನು ಸತತವಾಗಿ ಬಿಡಲು ನಿರ್ಧರಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬೆಳೆ ಬೆಳೆದು ಹಾನಿಯಾದಲ್ಲಿ, ದನಕರುಗಳನ್ನು ಮೇಯಲು ಬಿಟ್ಟು ಮತ್ತು ಇನ್ನಿತರ ಯಾವುದೇ ಚಟುವಟಿಕೆಗಳಿಂದ ಹಾನಿಯಾದಲ್ಲಿ ಇಲಾಖೆ ಜವಾಬ್ದಾರಿಯಲ್ಲ. ಸಾರ್ವಜನಿಕರು ಸಹಕರಿಸುವಂತೆ ತುಂಗಾ ಮೇಲ್ದಂಡೆ ಯೋಜನೆ ಎಕ್ಸಿಕ್ಯುಟಿವ್ ಇಂಜಿನಿಯರ್ ಮನವಿ ಮಾಡಿದ್ದಾರೆ.