- ತೀರ್ಥಹಳ್ಳಿ ಜೂನ್ 3
ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ, ತೀರ್ಥಹಳ್ಳಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ
ತಕ್ಷಣ ಉಪನ್ಯಾಸಕ ಹುದ್ದೆ ಮಂಜೂರು ಮಾಡಲು ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಶ್ರಿ ರಾಮಚಂದ್ರ ರವರು ಒಪ್ಪಿಗೆ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚಿಸಿದ್ದಾರೆ.
ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಸರ್ಕಾರಿ ಪದವಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿದ್ದು, ಈ ದಿನ ಕಾಲೇಜಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.

ಕಾಲೇಜಿನ ಪ್ರಾಂಶುಪಾಲ ರಾದ ಶ್ರೀಮತಿ ಸುಧಾ ಎಂ ರವರು, ವಾಣಿಜ್ಯ ವಿಭಾಗ ಎದುರಿಸುತ್ತಿರುವ ಉಪನ್ಯಾಸಕ ಹುದ್ದೆಗಳ ಕೊರತೆ ಇದ್ದು, ತಕ್ಷಣ ನೇಮಕಾತಿ ಮಾಡಿಸಿಕೊಡಬೇಕು ಎಂದು ವಿನಂತಿಸಿದರು.
ತಕ್ಷಣ ಮನವಿಗೆ ಸ್ಪಂದಿಸಿದ ಸಚಿವರು, ಪದವಿಪೂರ್ವ ಶಿಕ್ಷಣ ನಿರ್ದೇಶಕರನ್ನು ಸಂಪರ್ಕಿಸಿ ಹುದ್ದೆ ಕೊರತೆ ಬಗ್ಗೆ ವಿವರಿಸಿ, ವಿಧ್ಯಾರ್ಥಿಗಳ ಹಿತದೃಷ್ಟಿ ಯಿಂದ ನೇಮಕ ಮಾಡ ಬೇಕು ಎಂದು ವಿವರಿಸಿದರು.

ಸಚಿವರ ಕೋರಿಕೆಗೆ ಸ್ಪಂದಿಸಿದ ನಿರ್ದೇಶಕರು, ಪ್ರಸ್ತಾವನೆ ಕಳಿಸಿದರೆ ತಕ್ಷಣ ನಾಲ್ಕು ಉಪನ್ಯಾಸಕರ ಹುದ್ದೆಯನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಕಾಲೇಜು ಅಭವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.