ಶಿವಮೊಗ್ಗ:ಡಿ:19: ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅಭಿಯಾನದ ಪ್ರಯುಕ್ತ ಜಾನಪದ ಯುವಜನೋತ್ಸವ ಸಮ್ಮೇಳನ ತರಬೇತಿ ಕಾರ್ಯಾಗಾರವನ್ನು ಡಿ:22ರಂದು ಸೂಗೂರುನ ತುಂಗಾಭದ್ರಾ ಪ್ರೌಢಶಾಲಾ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ತಿಳಿಸಿದ್ದಾರೆ.
ಡಿ:22ರಂದು ಬೆಳಿಗ್ಗೆ 10-30 ಗಂಟೆಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಇಲಾಖೆ ಸಚಿವರಾದ ಕೆ.ಎಸ್.ಈಶ್ವರಪ್ಪನವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸೂಗೂರು ಗ್ರಾ.ಪಂ.ಅಧ್ಯಕ್ಷೆ ಕೆ.ಬಿ.ಸರೋಜಮ್ಮ ವಹಿಸುವರು. ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಜಾನಪದ ಕಲಾ ಕೇಂದ್ರ, ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆ, ತುಂಗಾಭದ್ರಾ ಪ್ರೌಢಶಾಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕ್‍ನಾಯ್ಕ, ಜಿ.ಪಂ.ಸದಸ್ಯೆ ಕೆ.ಈ.ಕಾಂತೇಶ್, ತಾ.ಪಂ.ಸದಸ್ಯೆ ವನಜಾಕ್ಷಮ್ಮ, ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್.ಬಿ.ಮಂಜಪ್ಪ, ಕಾರ್ಯದರ್ಶಿ ಎಸ್.ಜಿ.ಮಲ್ಲಿಕಾರ್ಜುನ, ಉಪಾಧ್ಯಕ್ಷ ಕೆ.ಪಿ.ಲೋಕೇಶ್ ಎ.ಪಿ.ಎಂ.ಸಿ.ನಿರ್ದೇಶಕ ಡಿ.ಕುಮಾರನಾಯ್ಕ, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ದಿನೇಶ್, ಶ್ರೀ ಮುರುಡ ಬಸವೇಶ್ವರ ಗ್ರಾಮ ಸಮಿತಿ ಅಧ್ಯಕ್ಷ ಟಿ.ಎಂ.ಪಾಲಾಕ್ಷಪ್ಪ, ಎಂ.ಈಶ್ವರಪ್ಪನವುಲೆ, ಪಿ.ಬಾಲಪ್ಪ, ಕೆ.ಗುರುಮೂರ್ತಿ, ಪರಿಸರ ಸಿ.ರಮೇಶ್, ಡಾ: ಹೆಚ್.ಸಿ.ಈಶ್ವರನಾಯ್ಕ, ಲೀಲಾವತಿ, ಗ್ರಾ.ಪಂ.ಉಪಾದ್ಯಕ್ಷ ಟಿ.ಎಂ.ಅಶೋಕ, ಸದಸ್ಯರಾದ ಎಂ.ಪ್ರಸನ್ನ, ಎಸ್.ಟಿ.ಸುರೇಶ್, ಸುಮಶಿವಕುಮಾರ್, ಮಂಜುಳ, ಕಮಲಮ್ಮ, ಕೆ.ಆರ್.ಅಶ್ವಿನಿ, ಎ.ಕೆ.ಹುಮಂತಪ್ಪ, ಹನುಮಂತಪ್ಪ, ಎಂ.ಆರ್.ರಮೇಶ್, ಪಿ.ಗೀತಾ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹೆಚ್.ಸುನಂದಮ್ಮ, ಕಾರ್ಯದರ್ಶಿ ಪರಶುರಾಮರಾವ್, ಎಂ.ಯು.ಚೇತನ್, ಹೆಚ್.ಎಸ್.ಅಶ್ವಿನಿ, ಎಸ್.ಜೆ.ರಮೇಶ್, ಎಸ್.ಮುರುಡಪ್ಪ ಮಾಸ್ಟರ್, ಎನ್.ಪರಮೇಶ್ವರಪ್ಪ, ನೀಲಮ್ಮ, ರಾಜೇಶ್ವರಿ ಚೆನ್ನಬಸಪ್ಪ, ಜಯಮ್ಮ, ಹನುಮಂತಮ್ಮ, ಭಾಗವಹಿಸುವರು.
ತೀರ್ಪುಗಾರರಾಗಿ ವೀರಗಾಸೆ ಕಲಾವಿದ ಜಿ.ಈ.ಶಿವಾನಂದಪ್ಪ, ಜಾನಪದ ಕಲಾವಿದ ಮಂಜುವಿಠಲ್‍ಶೇಟ್, ನಿವೃತ್ತ ಶಿಕ್ಷಕಿ ಸುಶೀಲಭವಾನಿಶಂಕರ್‍ರಾವ್, ನಿವೃತ್ತ ತಹಶೀಲ್ದಾರ್ ಕೆ.ಗುರುಮೂರ್ತಿ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಜಾನಪದ ಕಲಾವಿದೆ ಎ.ಹೆಚ್.ಶ್ಯಾಮಲಾ ಭಾಗವಹಿಸುವರು.
ಕಲಾ ತಂಡದ ಗುಂಪು ಸ್ಫರ್ದೇಗಳಿಗೆ ಮಾತ್ರ ಜಾನಪದ ಯುವಜನೋತ್ಸವದಲ್ಲಿ ಭಾಗವಹಿಸಲು ಅವಕಾಶ ವಿದೆ. ವಿಜೇತರಿಗೆ ಪ್ರಥಮ-ದ್ವಿತೀಯ-ತೃತೀಯ ಬಹುಮಾನ ಮತ್ತು ಅಭಿನಂದನಾ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಆಸಕ್ತ ಸಂಘ ಸಂಸ್ಥೆಯ ಕಲಾ ತಂಡದವರು ಭಾಗವಹಿಸುವಂತೆ ಮುಖ್ಯ ಸಂಚಾಲಕರಾದ ಎನ್.ನಿಂಗಯ್ಯ ಸೂಗೂರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಮೊ: 9731160675, 9880349700, 9901228507.

error: Content is protected !!