ವಿಶ್ವ ಹೆಪಟೈಟಿಸ್ ದಿನ ಜುಲೈ 28ರಂದು ಇರಲಿದ್ದು, ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮವು ಒಂದು ಸಮಗ್ರ ಯೋಜನೆ ಆಗಿದೆ. ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ಅನ್ನು ತಡೆಗಟ್ಟುವ, ನಿಯಂತ್ರಣ ಮಾಡುವ ಹಾಗೂ 2030ರ ವೇಳೆಗೆ ಹೆಪಟೈಟಿಸ್ ಮುಕ್ತ ದೇಶವನ್ನಾಗಿಸುವ ಗುರಿ ಹೊಂದಲಾಗಿದೆ.
ಹೆಪಟೈಟಿಸ್ ನಿಯಂತ್ರಣ ವಿಧಾನಗಳ ಬಗ್ಗೆ ಮಾಹಿತಿ ಅತ್ಯಂತ ಅವಶ್ಯಕ. ಜೀವನಶೈಲಿ ಮತ್ತು ವರ್ತನೆ ಬದಲಾವಣೆ ಅರಿವು ಮೂಡಿಸುವುದು, ಹೆಪಟೈಟಿಸ್ ಬಿ ಲಸಿಕೆ ಹಾಕಿಸುವುದು (ನವಜಾತ ಶಿಶು, ಆರೋಗ್ಯ ಕಾರ್ಯಕರ್ತರು ಮತ್ತು ಸೋಂಕಿನ ಹೆಚ್ಚಿನ ಅಪಾಯ ಉಳ್ಳವರು), ಸುರಕ್ಷಿತ ರಕ್ತ ಮತ್ತು ಅದರ ಉತ್ಪನ್ನಗಳ ಬಳಕೆ, ಸುರಕ್ಷಿತ ಚುಚ್ಚುಮದ್ದು ನೀಡುವಿಕೆ, ಸುರಕ್ಷಿತ ನೀರು, ಸ್ವಚ್ಛ ಶೌಚಗೃಹ ಉಪಯೋಗ ಹಾಗೂ ನೈರ್ಮಲ್ಯ ಕಾಪಾಡುವಿಕೆಯಿಂದ ನಿಯಂತ್ರಣ ಮಾಡಬಹುದಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಲಭ್ಯವಿರುವ ಸೇವೆಗಳ ಮಾಹಿತಿ ಇಲ್ಲಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಪಟೈಟಿಸ್ ಖಾಯಿಲೆಗೆ ಉಚಿತ ತಪಾಸಣೆ ಹಾಗೂ ಪ್ರಯೋಗಾಲಯ ಸೇವೆಗಳು ಲಭ್ಯ ಇರಲಿದೆ. ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೂಡ ಉಚಿತ ತಪಾಸಣೆ, ಹೆಚ್ಚಿನ ಪ್ರಯೋಗಾಲಯ ಸೇವೆಗಳು ಹಾಗೂ ಚಿಕಿತ್ಸೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರ ಸಂಪರ್ಕಿಸಬಹುದಾಗಿದೆ.