ಶಿವಮೊಗ್ಗ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಯ ನೆಲೆಯಲ್ಲಿ ಘನ ರಾಜ್ಯ ಸರ್ಕಾರದ ಗಮನ ಸೆಳೆದು, ಆಗಬೇಕಾದ ಕಾರ್ಯಗಳ ಬಗ್ಗೆ ಒತ್ತಡತರಲು ಎಫ್.ಕೆ.ಸಿ.ಸಿ.ಐ ಅಧ್ಯಕ್ಷರಿಗೆ ಬೇಡಿಕೆಗಳ ಮನವಿಯನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಡಾ.ಐ.ಎಸ್. ಪ್ರಸಾದ್‍ರವರಿಗೆ ನಿವೇದನಾ ಮನವಿಯನ್ನು ಸಲಿಸಲಾಯಿತು.
ಶಿವಮೊಗ್ಗ ನಗರಕ್ಕೆ ಟ್ರಕ್-ಟರ್ಮಿನಲ್, ಬಸ್-ಟರ್ಮಿನಲ್ ಯಾರ್ಡ್ ಸ್ಥಾಪನೆಗೆ ಸಕಾರದಿಂದ 25 ಎಕರೆ ಜಾಗವನ್ನು ನೀಡುವ ಬಗ್ಗೆ, ಟಿಂಬರ್ ಯಾರ್ಡ್ ಸ್ಥಾಪನೆಗೆ ಸರ್ಕಾರದಿಂದ 40ಎಕರೆ ಜಾಗ ಮಂಜೂರು ಮಾಡಿಕೊಡಲು ಬೇಡಿಕೆ, ಎಪಿಎಂಸಿಗಳಿಗೆ ಸರ್ಕಾರ ವಿಧಿಸಿರುವ ಸೆಸ್‍ನ್ನು ರದ್ದುಪಡಿಸುವ ಬಗ್ಗೆ. ಹಳೇ ಮೈಸೂರು ಭಾಗವಾದ ಶಿವಮೊಗ್ಗ ಜಿಲ್ಲೆಗೆ ಟಿಜಿಟಲ್ ಯೂನಿವರ್ಸಿಟಿ ಮಂಜೂರು ಮಾಡುವ ಬಗ್ಗೆ, ಶಿವಮೊಗ್ಗ ರೈಲ್ವೆ ಇಲಾಖೆಗೆ ಸಂಬಂಧಿಸಿದ ಸವಲತ್ತುಗಳ ಬಗ್ಗೆ ಶಿವಮೊಗ್ಗ-ಭುವನೇಶ್ವರ್‍ವರೆಗೆ ರೈಲು ಮಂಜೂರಾಗಿದ್ದು ಕಾರ್ಯರೂಪಕ್ಕೆ ತರುವ ಬಗ್ಗೆ, ಶಿವಮೊಗ್ಗ-ಸಿಕಂದರಾಬಾದ್ ಹೊಸ ರೈಲು ಸಂಪರ್ಕವನ್ನು ಚಿಕ್ಕಜಾಜೂರು ಮೂಲಕ ಪ್ರಾರಂಬಿಸಲು ಬೇಡಿಕೆ, ಫುಡ್ ಪ್ರೋಸೆಸಿಂಗ್ ಪಾರ್ಕ್ ಸ್ಥಾಪನೆ ಕುರಿತು ಒನ್ ಡಿಸ್ಟಿಕ್ ಒನ್ ಪ್ರಾಡಕ್ಟ್ ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಪೈನಾಪಲ್ ಬೆಳೆಗೆ ಆಯ್ಕೆ ಮಾಡಲಾಗಿದ್ದು, ಕೂಡಲೆ ಪುಡ್ ಪ್ರೊಸೆಸಿಂಗ್ ಪಾರ್ಕ್ ಪ್ರಾರಂಭಿಸಲು ಒನ್ ಟೈಮ್ ಟ್ರೇಡ್-ಲೈಸೆನ್ಸ್ ಬಗ್ಗೆ, ವಾಣಿಜ್ಯೋಧ್ಯಮಿಗಳಿಗೆ ಪ್ರತಿವರ್ಷ ”ಉದ್ದಿಮೆ ಪರವಾನಗಿ ಪತ್ರ್ರ” ಪ್ರತಿ ವರ್ಷದ ಬದಲಾಗಿ ಒಮ್ಮೆ ಮಾತ್ರ ಪರವಾನಗಿ ಪತ್ರ ಪಡೆಯುವ ವ್ಯವಸ್ಥೆಯನ್ನು ಸರ್ಕಾರದಿಂದ ಜಾರಿಗೆ ತಂದು ಮಹಾನಗರಪಾಲಿಕೆ ಕಾಯಿದೆಯ ತಿದ್ದುಪಡಿ ತರುವ ಬಗ್ಗೆ. ಎರಡನೆ ಹಂತದ ನಗರಗಳಿಗೆ ಕೈಗಾರಿಕಾ ವಸಹಾತು ಪ್ರದೇಶಗಳಿಗೆ ಮೂಲಭೂತ ಸೌಕರ್ಯಗ ಬಗ್ಗೆ. 2017-18ರ ಜಿ.ಎಸ್.ಟಿ ಆಡಿಟಿಂಗ್ ವ್ಯವಸ್ಥೆಯನ್ನು ರದ್ದುಪಡಿಸಲು ಸರ್ಕಾರಕ್ಕೆ ಒತ್ತಡ ತರುವ ಕುರಿತು, ಶಿವಮೊಗ್ಗ ಜಿಲ್ಲೆಗೆ ಆಯಷ್ ವಿಶ್ವವಿದ್ಯಾಲಯ ಮಂಜೂರಾಗಿದ್ದು, ಆಯುಷ್ ವಿಶ್ವವಿದ್ಯಾಲಯ ಕಾರ್ಯರೂಪಕ್ಕೆ ತರಲು ಸಕಾರದಿಂದ ತುರ್ತಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ ಮನವರಿಕೆ ಮಾಡಿ ಸರ್ಕಾರದ ಗಮನ ಸೆಳೆಯಲು ವಿವರಣೆಯೊಂದಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ಪ್ರದೀಪ್ ವಿ.ಯಲಿ, ಮಾಜಿ ಅಧ್ಯಕ್ಷರಾದ ಡಿ.ಎಂ. ಶಂಕರಪ್ಪರವರು ಉಪಸ್ಥಿತರಿದ್ದರು.