ಭಾರತ ಸರ್ಕಾರ ಯುವಜನರನ್ನು ಕ್ರೀಡೆಯಲ್ಲಿ ತೊಡಗಿಸಲು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಅದರಡಿ ಖೇಲೋ ಇಂಡಿಯಾ ವಿಂಟರ್ಸ್ ಗೇಮ್ ಕೂಡ ಒಂದು. ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಸಹೋದರಿಯರಿಬ್ಬರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಿಂಟರ್ಸ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಮಲೆನಾಡಿನ ಶಿವಮೊಗ್ಗ ಜಿಲ್ಲೆ ಹಾಗೂ ತಾಲೂಕಿನ ಆಡಿನಕೊಟ್ಟಿಗೆಯ ಗ್ರಾಮದ ಕೂಲಿ ಕಾರ್ಮಿಕರಾದ ಆರ್ಮುಗಂ ಮತ್ತು ಯಶೋಧಮ್ಮ ದಂಪತಿ ಪುತ್ರಿಯರಾದ ಧನಲಕ್ಷ್ಮೀ ಹಾಗೂ ಲತಾ ವಿಶೇಷ ಸಾಧನೆ ಮಾಡಿರುವ ಸಹೋದರಿಯರು. ಇಬ್ಬರು ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ವಿಂಟರ್ಸ್ ಗೇಮ್‍ನ ಸ್ನೋ ಶೂಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಧನಲಕ್ಷ್ಮಿ ಹಿರಿಯರ ವಿಭಾಗದಲ್ಲಿ 5 ಕಿಮೀ ಸ್ನೋ ಶೂಸ್ ರನ್ನಿಂಗ್‍ನಲ್ಲಿ ಸ್ನೋ ಶೂಸ್ ರನ್ನಿಂಗ್‍ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಲತಾ ಕಿರಿಯರ ವಿಭಾಗದಲ್ಲಿ 5 ಕಿಮೀ ಸ್ನೋ ಶೂಸ್ ರನ್ನಿಂಗ್‍ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗುಲ್‍ಮಾರ್ಗ್‍ನಲ್ಲಿ ನಡೆದ ಎರಡನೇ ಖೇಲೋ ಇಂಡಿಯಾ ವಿಂಟರ್ ಗೇಮ್ಸ್‍ನಲ್ಲಿ ಬಾಲಕಿಯರಿಬ್ಬರು ಚಿನ್ನದ ಪದಕ ಮುಡಿಗೇರಿಸಿಕೊಂಡು ಮಲೆನಾಡಿನ ಕೀರ್ತಿ ಪತಾಕೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ.


ಧನಲಕ್ಷ್ಮೀ,ಮಾಧ್ಯಮದೊಂದಿಗೆ ಮಾತನಾಡಿ ಜನರಲ್ ತಿಮ್ಮಯ್ಯ ಅಕಾಡೆಮಿಯ ಸಹಕಾರದಿಂದ ನಿರಂತರವಾಗಿ ನಾನು ಓಟದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆಯುತ್ತ ಬಂದಿದ್ದೇನೆ. ಖೇಲೋ ಇಂಡಿಯಾ ಸ್ಫರ್ಧೆಯಲ್ಲಿಯೂ ಸ್ನೋಶೂಸ್ ರೇಸ್ ವಿಭಾಗದಲ್ಲಿಯೂ ಚಿನ್ನದ ಪದಕ ಗಳಿಸಿದ್ದೇನೆ. ನಮ್ಮ ತರಬೇತುದಾರರ ಶಬ್ಬೀರ್ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಭಾರಿಯಾಗಿದ್ದೇನೆ.

ಲತಾ, ಮಾಧ್ಯಮದೊಂದಿಗೆ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ನಮಗೆ ಕಾಶ್ಮೀರದಲ್ಲಿ ಆಯೋಜಿಸಿದ್ದ ವಿಂಟರ್ಸ್ ಗೇಮ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಜತೆಯಲ್ಲಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ. ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಹೊಂದಿದ್ದೇನೆ.


ನಾಗೇಶ್, ಸ್ಥಳೀಯರು ಮಾತನಾಡಿ ಶಿವಮೊಗ್ಗ ತಾಲೂಕಿನ ಆಡಿನಕೊಟ್ಟಿಗೆಯ ಗ್ರಾಮದ ಯುವತಿಯರು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ನಮಗೆಲ್ಲರಿಗೂ ಸಂತಸ ತಂದಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಧನೆ ಮಾಡಲು ಆಶೀಸಿತ್ತೇವೆ.


ಪ್ರಕಾಶ್, ಸ್ಥಳೀಯರು ಮಾತನಾಡಿಶಿವಮೊಗ್ಗ ಜಿಲ್ಲೆಯ ಆಡಿನಕೊಟ್ಟಿಗೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿರುವ ದಂಪತಿಯ ಪುತ್ರಿಯರಾದ ಧನಲಕ್ಷ್ಮೀ ಹಾಗೂ ಲತಾ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ನಮ್ಮೂರಿನ ಕೀರ್ತಿ ಹೆಚ್ಚಿಸಿದೆ. ಇನ್ನು ಉತ್ತಮ ಸಾಧನೆ ಮಾಡಲಿ


ಲಲಿತಮ್ಮ, ಆಡಿನಕೊಟ್ಟಿಗೆ ಗ್ರಾಮಸ್ಥರು ಮಾತನಾಡಿ ನಮ್ಮೂರಿನ ಹೆಣ್ಣು ಮಕ್ಕಳ ಸಾಧನೆ ಎಲ್ಲರ ಗಮನ ಸೆಳೆದಿದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಇವರ ಕ್ರೀಡಾ ಪ್ರತಿಭೆ ಪ್ರೋತ್ಸಾಹಿಸಿ ಹೆಚ್ಚಿನ ಸಹಕಾರ ನೀಡಬೇಕು. ಕುಟುಂಬದ ಸದಸ್ಯರು ಬದುಕಿಗಾಗಿ ಕೃಷಿ ಕೂಲಿ ಮಾಡುತ್ತ ಜೀವನ ಮಾಡುತ್ತಿದ್ದಾರೆ. ಐವರು ಪುತ್ರಿಯರಲ್ಲಿ ಇಬ್ಬರ ಸಾಧನೆ ಶ್ಲಾಘನೀಯ.

error: Content is protected !!