News Next

ಶಿವಮೊಗ್ಗ, ಮಾರ್ಚ್ 13 : ಜಿಲ್ಲೆಯಲ್ಲಿನ ರೈತರು ಸಹಕಾರ ಸಂಘ/ಸಹಕಾರ ಬ್ಯಾಂಕುಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು 2018 ಜುಲೈಗೆ ಹೊರ ಬಾಕಿ ಹೊಂದಿರುವ ಗರಿಷ್ಠ ರೂ. 1.00 ಲಕ್ಷದವರೆಗಿನ ಬೆಳೆ ಸಾಲದ ಮೊತ್ತವನ್ನು ಮನ್ನಾ ಮಾಡಲು ನಿರ್ಧರಿಸಿದ್ದು, ರೈತರು ಸಂಬಂಧಪಟ್ಟ ಆಧಾರ್, ಪಡಿತರ ಚೀಟಿ ಮತ್ತು ಭೂಮಿ ದಾಖಲೆಗಳನ್ನು ಹಾಗೂ ಸ್ವಯಂ ದೃಢೀಕರಣ ಪತ್ರವನ್ನು ಇದುವರೆವಿಗೂ ಸಂಬಂಧಪಟ್ಟ ಸಹಕಾರ ಸಂಘ/ಬ್ಯಾಂಕುಗಳಿಗೆ ಮಾರ್ಚ್ 25ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಅವಧಿಯಲ್ಲಿ ದಾಖಲೆ ಸಲ್ಲಿಸಲು ವಿಫಲರಾದಲ್ಲಿ ಅಂತಹ ರೈತರು ಸಾಲ ಮನ್ನಾ ಸೌಲಭ್ಯ ಪಡೆಯಲು ಅನರ್ಹತೆ ಹೊಂದುತ್ತಾರೆ. ಅಲ್ಲದೇ ಪಡಿತರ ಚೀಟಿಯನ್ನು ಹೊಂದಿಲ್ಲದೇ ಇರುವ ರೈತರು ಅಥವಾ ರೈತರು ಪಡಿತರ ಚೀಟಿ ಹೊಂದಿದ್ದರೂ, ಚಾಲನೆಯಿಲ್ಲಿಲ್ಲದಿದ್ದರೆ ಅಂತಹವರೂ ಹೊಸ ಪಡಿತರ ಚೀಟಿಯನ್ನು ಪಡೆದು ಸಂಬಂಧಪಟ್ಟ ಸಹಕಾರ ಸಂಘಗಳಿಗೆ/ಬ್ಯಾಂಕುಗಳಿಗೆ ಮಾ. 25ಸಲ್ಲಿಸಲು ಅಂತಿಮ ಅವಕಾಶವನ್ನು ನೀಡಲಾಗಿದೆ.
ರೈತರು ಈ ಸದವಕಾಶವನ್ನು ಉಪಯೋಗಿಸಿಕೊಂಡು ನಿಗಧಿತ ದಿನಾಂಕದೊಳಗೆ ಸಲ್ಲಿಸಿ ಸಾಲ ಮನ್ನಾ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!