ಭದ್ರಾ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಭದ್ರಾನದಿಗೆ ಅಧಿಕ ನೀರು ಬರುತಿದ್ದು ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಲಾಶಯಕ್ಕೆ ಇಂದು ಒಳಹರಿವು 29942 ಕ್ಯೂಸೆಕ್ಷ್ ಇದ್ದು ಇಂದಿನ ಮಟ್ಟ 166”4”ಅಡಿಯಾಗಿರುತ್ತದೆ. ಗರಿಷ್ಟ ಮಟ್ಟ 186 ಅಡಿ, ಹೊರ ಹರಿವು 143 ಕ್ಯೂಸೆಕ್ಸ್, ಕಳೆದ ವರ್ಷ ಈ ದಿನ ನೀರು ಸಂಗ್ರಹ: 166 ಅಡಿ ಇತ್ತು. ಇಂದಿನ ಮಟ್ಟ 166.”4”ಅಡಿ ಇರುತ್ತದೆ.ಒಟ್ಟು ಜಲಾಶಯದ ನೀರಿನ ಒಟ್ಟು ಸಾಮಥ್ರ್ಯ 71535 ಟಿಎಂಸಿ ಗಳಾಗಿರುತ್ತದೆ.
ಜೂನ್ ತಿಂಗಳಲ್ಲಿ ಮಳೆ ಕೊರತೆ ಆಗಿದ್ದರೂ ಈಗ ಬರುತ್ತಿರುವ ಮಳೆಯಿಂದ ಆ ಕೊರತೆಯನ್ನು ನೀಗಿಸಿದೆ.ಜಲಾಶಯದ ಅಚ್ಚು ಕಟ್ಟುಪ್ರದೇಶಗಳಾದ ಶಿವಮೊಗ್ಗ,ಚಿಕ್ಕಮಗಳೂರು,ದಾವಣಗೆರೆ,ಚಿತ್ರದುರ್ಗ ಜಿಲ್ಲೆಗಳಲ್ಲಿ ಮಳೆಗಾಲದ ಹಂಗಾಮಿಗೆ 2.42 ಲಕ್ಷ ಪ್ರದೇಶಕ್ಕೆ ಭದ್ರಾ ಜಲಾಶಯದಿಂದ ನೀರು ಸಿಗಲಿದೆ ಮುಂಬರುವ ಬೇಸಿಗೆ ಬೆಳಗೆ ಜಲಾಶಯ ಭರ್ತಿಯಾದರೆ ರೈತರಿಗೆ ಅನುಕೂಲವಾಗಲಿದೆ.
ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಪ್ರತಿಕ್ರಿಯಿಸಿ ಮಳೆಗಾಲ ಉತ್ತಮವಾಗಿ ಆಗುತ್ತಿದ್ದು ಇದೇ ರೀತಿ ಮಳೆಯಾದರೆ ಜಲಾಶಯಕ್ಕೆ ಇನ್ನೂ ಹೆಚ್ಚಿನ ನೀರು ಬರಲಿದೆ ಎಂದು ಸಂತಸ ವ್ಯಕ್ತಪಡಿಸಿದರು.