ಮನುಷ್ಯ ಮತ್ತು ಸಾಕು/ಮುದ್ದು ಪ್ರಾಣಿಗಳ ನಡುವಿನ ಪರಸ್ಪರ ಸಂಬಂಧವನ್ನು ಪರೀಕ್ಷಿಸುವ ಮೂಲಕ ಸಾಕುಪ್ರಾಣಿಗಳು ತಮ್ಮ ಮಾಲೀಕರಿಗೆ ಉತ್ತಮ ಭಾವನೆಯನ್ನುಂಟು ಮಾಡುತ್ತದೆ ಎಂಬ ಮಾಹಿತಿಗಳು ಇವೆ. ನಾಯಿ ಮತ್ತು ಬೆಕ್ಕು ಸಾಕುವವರು ಆಗಾಗೆ ನಗುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಜೊತೆಗೆ ಮಾಲೀಕರು ಸಾಕು ಪ್ರಾಣಿಗಳನ್ನು ಸ್ನೇಹಿತರು ಮತ್ತು ಸಹಚರರಂತೆ ವೀಕ್ಷಿಸುತ್ತಾರೆ. ಸಾಕುಪ್ರಾಣಿಗಳ ಬಗ್ಗೆ ಸಕಾರಾತ್ಮಕ ಮನೋಭಾವವು ಒಬ್ಬರ ದೈಹಿಕ ಯೋಗಕ್ಷೇಮದ ಮೇಲೆ ಪ್ರಭಾವ ಬೀರುತ್ತದೆ. ಈ ಮುದ್ದು ಪ್ರಾಣಿಗಳು ತಮ್ಮ ಮಾಲೀಕರ ಯೋಗ ಕ್ಷೇಮಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಗೊಳಿಸುತ್ತವೆ ಎಂಬ ಕಾರಣದಿಂದ ಸಾಮಾನ್ಯವಾಗಿ ಬಲವಾದ ಬಂಧಗಳನ್ನು ಬೆಳೆಸಿಕೊಳ್ಳುತ್ತಾರೆ. ಸಾಕುಪ್ರಾಣಿಗಳ ಮಾಲೀಕತ್ವವು ಇತರರೊಂದಿಗೆ ಸಂವಹನದ ಸಾಮಥ್ರ್ಯವನ್ನು ಸುಧಾರಿಸುತ್ತದೆ ಎಂದು ಕಂಡುಬಂದಿದೆ. ಇದು ಕುಟುಂಬ ಮತ್ತು ಸ್ನೇಹ ಸಂವಹನದ ಸಾಮಥ್ರ್ಯವನ್ನು ಸುದಾರಿಸುತ್ತದೆ ಎಂದು ಹೇಳಬಹುದು.
ಈ ಎಲ್ಲಾ ಕಾರಣಗಳನ್ನು ತಾಂತ್ರಿಕವಾಗಿ ವರದಿ ಮಾಡಲು ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಒಂದು ಸಂಶೋಧನೆ ನಡೆಯುತ್ತದೆ. ಈ ಯೋಜನೆಯೂ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ICMR ಅಡಿಯಲ್ಲಿ “ಮನುಷ್ಯ ಮತ್ತು ಸಾಕು/ಮುದ್ದು ಪ್ರಾಣಿಗಳ ನಡುವಿನ ಪರಸ್ಪರ ಸಂಬಂಧ ಹಾಗೂ ಒಳಗೊಂಡಿರುವ ಸಾಮಾಜಿಕ, ಸಾಂಸ್ಕøತಿಕ ಮತ್ತು ವಾತಾವರಣದ ಅಂಶಗಳ ಪಾತ್ರಗಳ ಕುರಿತಾದ ಅಧ್ಯಯನ” ಎಂಬ ವಿಷಯದ ಬಗ್ಗೆ ಪ್ರಧಾನ ಸಂಶೋದಕಿ ಡಾ.ಆರ್. ಜಯಶ್ರೀ, ಸಹ ಪ್ರಾಧ್ಯಾಪಕರು ಮತ್ತು ಇವರ ತಂಡ ಈಗಾಗಲೇ ಯೋಜನೆಗೆ ಸಂಬಂಧ ಪಟ್ಟಂತೆ ಸಾಕು ಪ್ರಾಣಿಗಳ ಮಾಲೀಕರು ಮತ್ತು ಪ್ರಾಣಿ ಪ್ರೇಮಿಗಳನ್ನು ಸಂಧರ್ಶಿಸಿ, ಸಾಕು ಪ್ರಾಣಿಗಳೊಂದಿಗೆ ಪ್ರೀತಿ ಮತ್ತು ಭಾಂದವ್ಯದ ಬಗ್ಗೆಗಿನ ಸಮೀಕ್ಷೆಯನ್ನು ಶಿವಮೊಗ್ಗ, ಕುಂಸಿ, ಮತ್ತೂರು, ತೀರ್ಥಹಳ್ಳಿ ಮತ್ತು ಭದಾವ್ರತಿಯಲ್ಲಿ ನಡೆಸಿರುತ್ತಾರೆ. ಈ ಸಮೀಕ್ಷೆಯಲ್ಲಿ ಇಲ್ಲಿಯವರೆಗೂ ಸಾಕು ಪ್ರಾಣಿಗಳನ್ನು ಹೊಂದಿರುವುದರಿಂದ ಮತ್ತು ಅವುಗಳೊಂದಿಗಿನ ಭಾಂದವ್ಯದ ಮತ್ತು ಅವುಗಳ ಜೊತೆ ನಡೆದಿರುವ ಕೆಲವು ಮರೆಯಲಾಗದ ಘಟನೆಗಳನ್ನು ಶಿವಮೊಗ್ಗ ಜಿಲ್ಲೆಯ ಪ್ರಾಣಿ ಪ್ರಿಯರು ಹಂಚಿಕೊಂಡಿರುತ್ತಾರೆ. ಇವು ಈ ಸಂಶೋಧನೆಯಲ್ಲಿ ಇನ್ನು ಹೆಚ್ಚು ಕುತೂಹಲವನ್ನು ಮೂಡುವಂತೆ ಮಾಡಿರುತ್ತದೆ.
ದನಕರುಗಳು ಹಾಗೂ ಹೊಲ, ಗದ್ದೆ, ತೋಟವನ್ನು ನೋಡಿಕೊಂಡು ಸುಖವಾದ ಜೀವನವನ್ನು ಸಾಗಿಸುತ್ತಿದ್ದ, ತೀರ್ಥಹಳ್ಳಿಯ ‘ರಮೇಶ್’ ರವರಿಗೆ ಇದ್ದಕ್ಕಿದ್ದಾಗಲೇ ಪಾಶ್ರ್ವವಾಯು (ಸ್ಟ್ರೋಕ್) ಕಾರಣದಿಂದ ಅವರ ಎಡಭಾಗ ಸ್ವಾಧೀನವನ್ನು ಕಳೆದುಕೊಂಡು ದೈನಂದಿನ ಎಲ್ಲಾ ಕೆಲಸಗಳಿಗೂ ತಮ್ಮ ಮನೆಯವರನ್ನೇ ಅವಲಂಬಿಸುವ ಸ್ಥಿತಿ ಎದುರಾಯಿತು. ಅವರಿಗೆ ಹೊಸ ಚೈತನ್ಯವನ್ನು ಮತ್ತು ತನ್ನ ನೋವನ್ನು ಮರೆಯಲು ಮತ್ತು ಕಾಯಿಲೆಯಿಂದ ಗುಣಮುಖನಾಗುತ್ತಿದ್ದೇನೆಂಬ ಬಾವನೆಯು ಅವರು ಸಾಕಿರುವ ‘ಧನಲಕ್ಷ್ಮೀ’ ಎಂಬ ಅವರ ಪ್ರೀತಿಯ ಹಸುವಿನೊಂದಿಗೆ ಮಾತನಾಡುವುದು ಮತ್ತು ಅದರ ಜೊತೆಗಿನ ಒಡನಾಟದಿಂದಲೇ ಉಂಟಾಯಿತು ಎಂದು ಹೇಳುತ್ತಾರೆ.
ಕರೋನಾ ಲಾಕ್ ಡೌನ್ ಸಂದರ್ಭದಲ್ಲ್ಲಿ ಭದ್ರಾವತಿಯ ‘ಸುಹಾಸ’ ರವರ ಪ್ರೀತಿಗೆ ಶರಣಾಯಿತು ಒಂದು ಬೆಕ್ಕಿನ ಮರಿ. ಈಗ ಅದು ಅವರ ಮನೆಯ ಸದಸ್ಯರೆಲ್ಲರ ಜೊತೆ ಅನ್ಯೋನ್ಯವಾದ ಭಾಂದವ್ಯವನ್ನು ಬೆಳಸಿಕೊಂಡಿದ್ದರೂ ಸಹ ‘ಸುಹಾಸ್’ ರವರು ಕೆಲಸದಿಂದ ಹಿಂದಿರುಗಿ ಬರುವವರೆಗೂ ಆಹಾರವನ್ನು ತಿನ್ನದೇ ಅವರಿಗಾಗಿ ಕಾಯುತ್ತಿತ್ತು ಎನ್ನುತ್ತಾರೆ.
ಎರಡು ಹಸುಗಳು ಮತ್ತು ಐದು ನಾಯಿಗಳನ್ನು ಸಾಕಿದ್ದಾರೆ ಮತ್ತೂರಿನ ‘ಸುರೇಶ್’ ಎಂಬ ಪ್ರಾಣಿ ಪ್ರಿಯರು. ಇವರು ತಮ್ಮ ಹಸುಗಳೊಂದಿಗೆ ತುಂಬಾ ಹೆಚ್ಚಿನ ಬಾವನಾತ್ಮಕ ಪ್ರೀತಿಯನ್ನು ಹೊಂದಿದ್ದಾರೆ. ಅವುಗಳು ತಿನ್ನುವ ಆಹಾರದ ಜೊತೆಗೆ ಅವುಗಳಿಗೆ ವಾರದಲ್ಲಿ 2 ರಿಂದ 3 ಬಾರಿ ಬಿಸಿನೀರಿನಲ್ಲಿ ಸ್ನಾನ ಮಾಡಿಸುತ್ತಾರೆ ಮತ್ತು ಕಾದಾರಿಸಿದ ನೀರನ್ನೆ ಅವುಗಳಿಗೂ ನೀಡುತ್ತಾರೆ. ಇವುಗಳೊಂದಿಗೆ ಹೆಚ್ಚಾದ ಸಮಯವನ್ನು ಕಳೆಯುತ್ತಿರುವುದರಿಂದ ತನಗೆ ಯಾವುದೇ ರೀತಿಯ ಚಿಂತೆ ಹಾಗೂ ಒತ್ತಡಗಳಿಲ್ಲದೆ ತುಂಬಾ ಖುಷಿಯಾಗಿದ್ದೇನೆ ಎಂದು ಹೇಳುತ್ತಾರೆ.
ಶಿವಮೊಗ್ಗ ಪಶು ಆಸ್ಪತ್ರೆಗೆ ಚಿಕಿತ್ಸೆಗೆ ತಮ್ಮ ಮುದ್ದು ನಾಯಿಯನ್ನು ತಂದ ತಾಯಿ ‘ಸುಮ’ ಹೇಳುತ್ತಾರೆ, ಕಣ್ಣ್ಣಿನ ದೃಷ್ಟಿಯ ತೊಂದರೆಯಿಂದ ಎಲ್ಲ್ಲಾರಿಂದ ದೂರನಾಗಿ ಒಂಟಿಯಾಗಿದ್ದ ಅವರ ಮಗನ ದುಃಖದ ಸ್ಥಿತಿ ನೋಡಲಾರದೆ ಅವನಿಗೆ ತುಂಬಾ ಇಷ್ಟ ಎಂದು ಒಂದು ನಾಯಿ ಮರಿಯನ್ನು ಕೊಡಿಸಿದರು. ಇದು ಅವರ ಮಗನೊಂದಿಗೆ ತುಂಬಾ ಅನ್ಯೋನ್ಯವಾಗಿರುತ್ತದೆ ಅದರಿಂದ ಅವನು ತನ್ನ ನೋವನ್ನು ಮರೆಯುತ್ತಾ ಸಂತೋಷವಾಗಿದ್ದಾನೆ.
ಕಳೆದ 40-50 ವರ್ಷಗಳಿಂದ ತಮ್ಮನ್ನು ತಾವು ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿ
ಕೊಂಡಿರುವ ಕುಂಸಿಯ ‘ದೇವರಾಜ್ ಮತ್ತು ಗಂಗಮ್ಮ’ ದಂಪತಿಗಳು ತಮ್ಮ ಮನೆಯಲ್ಲಿ ಹಸು, ಕುರಿ, ಕೋಳಿ ಮತ್ತು ನಾಯಿ ಮುಂತಾದ ಎಲ್ಲಾ ಸಾಕು ಪ್ರಾಣಿಗಳ ಒಡನಾಟದಿಂದ
ಎಲ್ಲಾರ ಆರೋಗ್ಯವು ತುಂಬಾ ಚೆನ್ನಾಗಿದೆ ಎಂದು ಹೇಳಿದರು. ಒಂದು ಸಂದರ್ಭದಲ್ಲಿ ಅವರ ಮಗನಿಗೆ ಕಾಲು ಮೂಳೆ ಮುರಿದು ನಡೆಯಲು ನೋವಾದ ಸಂದರ್ಭದಲ್ಲಿ ಅವನು ಕೆಲಸಗಳಿಗೆ ಹೋಗಲು ತೊಂದರೆಯಾಗಿತ್ತು. ಆದರೆ ಅವರ ಮನೆಯ ಪ್ರಾಣಿಗಳ ಜೊತೆಗಿನ ಒಡನಾಟದಿಂದಲೇ ಅವನ ನೋವು ಕಡಿಮೆಯಾಗಿ ಬೇಗನೆ ಚೇತರಿಸಿಕೊಂಡರು ಎಂದು ತಿಳಿಸಿದರು.
ಕೆಲವು ಸಂದರ್ಭಗಳಲ್ಲಿ ಸಾಕುಪ್ರಾಣಿಗಳಿಂದ ಇತರರಿಗೆ ಅಥವಾ ಆಸುಪಾಸಿನವರಿಗೆ ತೊಂದರೆಗಳಾಗಬಹುದು. ಅದೇ ರೀತಿ ಸಾಕುಪ್ರಾಣಿಗಳು ಕಾಯಿಲೆಗಳಿಂದ ಬಳಲುತ್ತಿರುವಾಗ ಅಥವಾ ಮರಣ ಹೊಂದಿದಾಗ ಅದರ ದುಃಖ ತಾಳಲಾರದೆ ಒತ್ತಡ ಅನುಭವಿಸಿರುವ ಸಂದರ್ಭಗಳಿವೆ.
ಇದರ ಅನ್ವಯ ಒಂದು ಸನ್ನಿವೇಶದಲ್ಲಿ ‘ಪ್ರೇಮ್’ ರವರು ತಮ್ಮ ಮನೆಯಲ್ಲಿ ಸಾಕಿದ ಮುದ್ದಿನ ನಾಯಿ ‘ಮ್ಯಾಕ್ಸಿಗೆ’ ಕೂದಲು ಉದುರುವ ಸಮಸ್ಯೆ ಉಂಟಾಗಿತ್ತು. ನಾಯಿಯ ಕೂದಲು ಮನೆಯ ಎಲ್ಲಾ ಭಾಗದಲ್ಲಿಯೂ ಬೀಳುತ್ತಿದ್ದುದ್ದನ್ನು ನೋಡಿ ಅವರ ಮನೆಯಲ್ಲಿ, “ನಾಯಿ ಸಾಕುವುದೆ ಬೇಡ! ಎಲ್ಲಾದರೂ ಇದನ್ನು ಬಿಟ್ಟು, ಬಾ,” ಎಂದು ಅವರ ಮನೆಯ ಹುಡುಗ ‘ಪ್ರೇಮ್’ ಗೆ ಹೇಳಿದರು. ಆಗ ‘ಪ್ರೇಮ್’ ಪಶು ಆಸ್ಪತ್ರೆ, ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ತಂದು ಚಿಕಿತ್ಸೆನೀಡಿ, ಗುಣಮುಕವಾಗಿತ್ತು ಮತ್ತು ನಾಯಿ ‘ಮ್ಯಾಕಿ’ ಅವರ ಮನೆಯವರನ್ನು ಇನ್ನಷ್ಟು ಕುಷಿ ಪಡಿಸುತ್ತದೆ. ಹೇಗೋ ನಾಯಿಯನ್ನು ಹೊರಹಾಕುವ ಸಮಸ್ಯೆ ಬಗೆಹರಿಯುತ್ತಾ ಬಂದಿದೆ ಎಂದು ‘ಪ್ರೇಮ್’ ಹಂಚಿಕೊಂಡರು.
* ಮೇಲಿನ ಎಲ್ಲಾ ಸನ್ನಿವೇಶಗಳಲ್ಲಿ ಪ್ರಾಣಿ ಮಾಲೀಕರ ಗೌಪ್ಯತೆಯನ್ನು ಕಾಪಾಡಲು ಸ್ಥಳ ಮತ್ತು ಹೆಸರುಗಳನ್ನು ಬದಲಾಯಿಸಲಾಗಿದೆ)
ನಾಯಿ ಕೂಗುವುದು, ಪದೇ ಪದೇ ಬೊಗಳುವುದು, ಮಕ್ಕಳ ಸೈಕಲ್ ಸ್ಕೂಟರ್ ಅಟ್ಟಿಸುವುದು ಅಂತಹ ತೊಂದರೆಗಳಿಂದ ಬಹಳಷ್ಟು ಜನ ಒತ್ತಡಕ್ಕೆ ಒಳಗಾಗುತ್ತಾರೆ. ಸಾಕು ಮುದ್ದು ಪ್ರಾಣಿಗಳು ಮನುಷ್ಯರ ಜೊತೆ ಇದ್ದು ಅವರ ಮನೋ ಆರೊಗ್ಯಕ್ಕೆ ಒಳ್ಳೆಯದನ್ನು ನೀಡುತ್ತದೋ??? ಅಥವಾ ಆತಂಕಕ್ಕೆ ಒಳಪಡಿಸುತ್ತದೋ???? ಎಂದು ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ICMR) ಅನುದಾನದಡಿಯಲ್ಲಿ “ಮನುಷ್ಯ ಮತ್ತು ಸಾಕು/ಮುದ್ದು ಪ್ರಾಣಿಗಳ ನಡುವಿನ ಪರಸ್ಪರ ಸಂಬಂಧ ಕುರಿತಾದ ಅಧ್ಯಯನ”ದಲ್ಲಿ ಹೊರ ಹೊಮ್ಮುತ್ತದೆ!! ಕಾಯಿದು ನೋಡೋಣಾ.
ಈ ಯೋಜನೆಯಡಿಯಲ್ಲಿ ಪ್ರಾಣಿ ಪ್ರೇಮಿಗಳು ಮತ್ತು ಹಿತೈಷಿಗಳಿಂದ ಸಮೀಕ್ಷೆ ಮಾಡಬೇಕಗುತ್ತದೆ. ಆದ್ದರಿಂದ ಸಾಕು/ಮುದ್ದು ಪ್ರಾಣಿಗಳ ಮಾಲೀಕರು/ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಈ ಯೋಜನೆಯಲ್ಲಿ ಭಾಗವಹಿಸುವಿಕೆಯನ್ನು ನಾವು ನಿರೀಕ್ಷಿಸುತ್ತೇವೆ. ಇದರ ಸಂಬಂಧಿತ ಯೋಜನಾ ಸಿಬ್ಬಂಧಿಗಳು ಭಾಗವಹಿಸುವವರೊಂದಿಗೆ ಸಂವಹನ ನಡೆಸುತ್ತಾರೆ. ಈ ಯೋಜನೆಗಾಗಿ ಸಿದ್ಧಪಡಿಸಿದ ನಮೂನೆ/ಪ್ರಶ್ನಾವಳಿಗಳನ್ನು ತಮಗೆ ನೀಡಿ ಅಥÀವಾ ತಮ್ಮನ್ನು ಭೇಟಿ ಮಾಡಿ ವಿವರವಾದ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ.
ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಪ್ರಧಾನ ಸಂಶೋಧಕಿ ಡಾ|| ಆರ್. ಜಯಶ್ರೀ, ಸಹ ಪ್ರಾಧ್ಯಾಪಕರು, ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ನಿಮ್ಮ ಮುದ್ದಿನ ಪ್ರಾಣಿಯ ವಿಶೇಷಗಳನ್ನು ಹಂಚಿಕೊಳ್ಳಲು ಒಂದು ಸುವರ್ಣ ಅವಕಾಶವನ್ನು ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇಲ್ಲಿ ಕೇಂದ್ರೀಕೃತ ಗುಂಪು ಚರ್ಚೆ FOCUS GROUP DISCUSSION (FGD) ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಡಾ|| ಆರ್. ಜಯಶ್ರೀ, ಪ್ರಧಾನ ಸಂಶೋಧಕಿ ಮತ್ತು ಅವರ ತಂಡ
ದೂರವಾಣಿ ಸಂಖ್ಯೆ:- 8310384135 E mail:-icmradhocagb@gmail.com