![](https://www.newsnext.co/wp-content/uploads/2023/10/IMG-20231001-WA0109-1024x472.jpg)
ದೇಶಾದ್ಯಂತ ಅಕ್ಟೋಬರ್ 1 ರಂದು ಹಮ್ಮಿಕೊಳ್ಳಲಾದ ಸ್ವಚ್ಚತೆಯೇ ಸೇವೆ ( ಎಕ್ ತಾರೀಕ್, ಎಕ್ ಘಂಟಾ, ಎಕ್ ಸಾಥ್) ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗದ ಕೇಂದ್ರ ಸಂವಹನ ಇಲಾಖೆ ವತಿಯಿಂದ ನಗರದ ಗೋಪಾಲಗೌಡ ಬಡಾವಣೆಯಲ್ಲಿರುವ ಚಂದನ ಸಾರ್ವಜನಿಕ ಉದ್ಯಾನವನದಲ್ಲಿ ಇಂದು ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಯಿತು.
![](https://www.newsnext.co/wp-content/uploads/2023/09/IMG-20230920-WA0152-1024x768.jpg)
ಚಂದನ ಪಾರ್ಕ್ ಗೆಳೆಯರ ಬಳಗದ ಸಹಯೋಗದಲ್ಲಿ ಆಯೋಜಿಸಲಾದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಹಾಗೂ ಇತರ ಶುಚಿತ್ವ ಕಾರ್ಯದಲ್ಲಿ ಭಾಗಿಯಾದರು.
![](https://www.newsnext.co/wp-content/uploads/2023/10/IMG-20231001-WA0111-1024x768.jpg)
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ. ಕಲಗೋಡು ರತ್ನಾಕರ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ನಮ್ಮ ಸಮಾಜವನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಹೊಣೆ ಎಂದರು.
ಕ್ಷೇತ್ರ ಪ್ರಚಾರ ಅಧಿಕಾರಿ ಶ್ರೀಮತಿ. ಅಕ್ಷತಾ ಸಿ. ಹೆಚ್ ಮಾತನಾಡಿ, ಸ್ವಚ್ಛ ಭಾರತ ನಿರ್ಮಾಣದಲ್ಲಿ ಜನರ ಸಹಭಾಗಿತ್ವ ಅಗತ್ಯ ಎಂದರು.
![](https://www.newsnext.co/wp-content/uploads/2023/10/IMG-20231001-WA0111-1-1024x768.jpg)
ಗೆಳೆಯರ ಬಳಗದ ಶ್ರೀ. ಶಿವ ಕುಮಾರ್ ಸೇರಿದಂತೆ ಅನೇಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೈ ಜೋಡಿಸಿದರು.