ಆಧುನಿಕ ತಂತ್ರಜ್ಞಾನದ ಲೇಪನ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಾತುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಿಶಿಷ್ಟವಾದ ವಿನ್ಯಾಸವುಳ್ಳ ಗ್ರಂಥಾಲಯವನ್ನು ನಿರ್ಮಿಸಲಾಗಿದೆ ಇದಕ್ಕೆ ಆಧುನಿಕ ತಂತ್ರಜ್ಞಾನದ ಲೇಪವನ್ನು ಅಳವಡಿಸಲಾಗಿದೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂತಹ ಪುಸ್ತಕಗಳನ್ನು ಜೋಡಿಸಲಾಗಿದೆ ಇಲ್ಲಿ ದಿನಪತ್ರಿಕೆಗಳು ಕಲೆ ಸಾಹಿತ್ಯ ನಾಟಕ ಹಾಗು ಇನ್ನಿತರ ಪುಸ್ತಕಗಳು ಲಭ್ಯವಿದೆ. ಅದರಲ್ಲಿಯೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೊಡಗಿಕೊಂಡಿರುವ ಅನ್ನದಾತರ ಮಕ್ಕಳಿಗೆ ಈ ಗ್ರಂಥಾಲಯ ಅತ್ಯಂತ ಉಪಯುಕ್ತವಾಗಿದೆ ದಿನೇ ದಿನೇ ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ ಮಕ್ಕಳ ಪುಸ್ತಕಗಳಿಂದ ಹಿಡಿದು ದಿನನಿತ್ಯದ ಪತ್ರಿಕೆಗಳು ಎಲ್ಲಿ ಸಿಗುತ್ತದೆ ಊರಿನ ಜನರ ಜ್ಞಾನಾರ್ಜನೆಗೆ ಗ್ರಂಥಾಲಯ ಅತ್ಯಂತ ಸಹಕಾರಿಯಾಗಿದೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಮಾತನಾಡಿ 14ನೇ ಹಣಕಾಸು ಯೋಜನೆಯಲ್ಲಿ ಗ್ರಂಥಾಲಯವು ನಿರ್ಮಿಸಿದ್ದೇವೆ ಇಲ್ಲಿ ಮಕ್ಕಳಿಗೆ ಅನುಕೂಲವಾಗುವ ಪುಸ್ತಕಗಳಿವೆ ಆಧುನಿಕ ತಂತ್ರಜ್ಞಾನ ಬಳಸಿದ್ದೇವೆ ಇಂಟರ್ನೆಟ್ ವ್ಯವಸ್ಥೆಯಿದೆ ಮಕ್ಕಳು ಸಾಮಾಜಿಕ ಜಾಲತಾಣವನ್ನು ಬಳಸಿ ಹೊಸ ವಿಚಾರಗಳ ಅಧ್ಯಯನ ಮಾಡುತ್ತಾರೆ ಊರಿನ ಎಲ್ಲರಿಗೂ ಗ್ರಂಥಾಲಯ ಅತ್ಯಂತ ಉಪಯುಕ್ತ ವಾಗಿದೆ


 ವೀಣಾ ತನ್ನ ಅನುಭವ ಹಂಚಿಕೊಂಡು ನಾನು ಉನ್ನತ ಶಿಕ್ಷಣ ಅಭ್ಯಾಸ ಮಾಡಿದ್ದೇನೆ ನಮಗೆ ಗ್ರಂಥಾಲಯದ ಕೊರತೆ ನಾವು ನಗರಗಳನ್ನು ಆಶ್ರಯಿಸಬೇಕಾಗಿತ್ತು ಈಗ ನಮ್ಮ ಊರಿನ ಮಕ್ಕಳಿಗೆ ಆಧುನಿಕ ತಂತ್ರಜ್ಞಾನದ ಗ್ರಂಥಾಲಯ ಅತ್ಯಂತ ಉಪಯುಕ್ತವಾಗಿದೆ ಮಾದರಿಯಾಗಿದೆ ಎಂದು ತಿಳಿಸಿದರು


 ಸುಪ್ರೀತಾ ಅನುಭವ ಹಂಚಿಕೊಂಡು ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನಡೆಸಲು ಅಧ್ಯಯನ ಮತ್ತು ಗ್ರಂಥಾಲಯದ ಅವಶ್ಯಕತೆ ಇದೆ ಆ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಉಪಯುಕ್ತ ಲೈಬ್ರರಿಯನ್ನು ನಿರ್ಮಿಸಿದೆ ಎಂದು ತಿಳಿಸಿದರು


 ಹನುಮಂತಪ್ಪ ಹಿರಿಯನಾಗರಿಕ  ನನಗೆ ಈಗ 85 ವರ್ಷ ಪ್ರತಿದಿನ ಇಲ್ಲಿ ಪತ್ರಿಕೆ ಓದಲು ಬರುತ್ತೇನೆ ನಮಗೆ ಎಲ್ಲ ಪತ್ರಿಕೆಯನ್ನು ಕೊಳ್ಳಲು ಸಾಧ್ಯವಿಲ್ಲ ಆದರೆ ಸರ್ಕಾರ ಗ್ರಂಥಾಲಯದಲ್ಲಿ ಎಲ್ಲಾ ಪತ್ರಿಕೆಗಳನ್ನು ತರಿಸುತ್ತಾರೆ ನನಗೆ ದೇಶ ,ರಾಜ್ಯ,ಅಂತರಾಷ್ಟ್ರೀಯ ವಿಚಾರಗಳನ್ನು ಹಾಗು ಕಲೆ ಸಾಹಿತ್ಯ ಇನ್ನತರ ಪುಸ್ತಕಗಳನ್ನು ಓದಲು ಅನುವು ಮಾಡಿಕೊಟ್ಟಿರುತ್ತಾರೆ ಇದರಿಂದ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು

error: Content is protected !!