ಶಿವಮೊಗ್ಗ ತಾಲ್ಲೂಕು ಪುರಲೆ ಗ್ರಾಮದ ಅಂಗನವಾಡಿ ಕಾಯಕತೆ೯ ವೇದಾವತಿಯವರು ಅಂಗನವಾಡಿ ಕೇಂದ್ರದ ಕತ೯ವ್ಯ ಹಾಗು ಕೋವಿಡ್ -೧೯ ಮನೆಗಳಗೆ ಭೇಟಿಯನ್ನು ಮುಗಿಸಿ ತನ್ನ ಬಿಡುವಿನ ವೇಳೆಯಲ್ಲಿ ತನ್ನ ಸ್ವಂತ ಖಚಿ೯ನಲ್ಲಿ ಮಾಸ್ಕನ್ನು ತಯಾರಿಸಿ ಗ್ರಾಮದಲ್ಲಿ ವೃದ್ದರಿಗೆ, ಕೂಲಿಕಾಮಿ೯ಕರಿಗೆ ವಿತರಿಸುತ್ತಿದ್ದಾರೆ.
ಗ್ರಾಮದಲ್ಲಿ ವೃದ್ದರಿಗೆ,ಗಭಿ೯ಣಿ ಬಾಣಂತಿ ಮತ್ತು ಬಡ ಕುಟುಂಬಗಳಿಗೆ ಉಚಿತವಾಗಿ ಕೊಡುವಂತೆ ಕರೆ ನೀಡಿದ ಮೇರೆಗೆ ತನ್ನ ಕತ೯ವ್ಯವನ್ನು ಮುಗಿಸಿಕೊಂಡಿ ಸಿಗುವಂತಹ ಬಿಡುವಿನ ವೇಳೆಯಲ್ಲಿ ದಿನಕ್ಕೆ ಸುಮಾರು ೭೫ ರಿಂದ ೧೦೦ಮಾಸ್ಕಗಳನ್ನು ತಯಾರಿಸಿ ಕೊಡಲಾಗುತ್ತದೆ. ಎನ್ನುತ್ತಾರೆ ವೇದಾವತಿ.
ಶಿವಮೊಗ್ಗದ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ ಚಂದ್ರಪ್ಪ ಮಾತನಾಡಿ ಅಂಗನವಾಡಿ ಕಾತೆ೯ಯರಿಗೆ ಸೂಕ್ತ ಮಾಗ೯ದಶ೯ನವನ್ನು ನೀಡಿ ಬಟ್ಟೆಯ ಮಾಸ್ಕನ್ನು ತಯಾರುಮಾಡಲು ಸಹಕಾರ ನೀಡಲಾಗುತ್ತಿದೆ.. ಈ ಮಾಸ್ಕ್ ಉತ್ತಮ ಗುಣಮಟ್ಟದ್ದಾಗಿರುತ್ತದೆ ಹಾಗು ಇದನ್ನು ಸ್ವಚ್ಚಗೊಳಿಸಿ ಮತ್ತೆ ಮತ್ತೆ ಉಪಯೋಗಿಸಬಹಯದಾಗಿದೆ ಈ ಕಾಯ೯ಕ್ಕೆ ಜಿಲ್ಲೆಯಾದ್ಯಂತ ಅಂಗನವಾಡಿ ಕಾಯ೯ಕತೆ೯ಯರು ಹಾಗು ಮೇಲ್ವಿಚಾರಕರ ಸ್ಪಂದನೆ ಉತ್ತಮವಾಗಿ ದೊರಯುತ್ತಲಿದೆ ಎನ್ನತ್ತಾರೆ .