ಭೀಮನಕೋಣೆ : ಪುಣ್ಯಕೋಟಿ, ಕಾಮಧೇನು ಎಂದು ಹಿಂದುಗಳು ಪೂಜಿಸುವ ಗೋವಿನ ರಕ್ಷಣೆ ಕಾರ್ಯಾ ಜೊತೆಗೆ ಗೋವಿನ ಮಹತ್ವವನ್ನು ವಿಶ್ವಮಂಗಲ ಗೋ ಯಾತ್ರೆಯ ಮೂಲಕ ಜಗತ್ತಿಗೆ ಸಾರಿದವರು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳವರು,ಮಠ, ದೇವಾಲಯಗಳು ಜ್ಞಾನವನ್ನು ಪಸರಿಸುವ ಕೆಲಸವನ್ನು ಸದಾ ಮಾಡುತ್ತಾ ಬಂದಿದೆ, ಸ್ವಾಮೀಜಿಗಳು ತಮ್ಮ ಯವ್ವನವನ್ನು ಧರ್ಮದ ಕಾರ್ಯಕ್ಕೆ ಅರ್ಪಿಸಿದ್ದಾರೆ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಹೇಳಿದಂತೆ ಸಂತರು ಭವ್ಯ ಭಾರತದಲ್ಲಿ ಇರುವವರೆಗೂ ಈ ನಾಡಿಗೆ ಸಾವಿಲ್ಲ, ಜಗತ್ತಿನ ಶ್ರೇಷ್ಠ ವಿಚಾರಗಳು ಸನಾತನ ಧರ್ಮದಲ್ಲಿದೆ ಎಂದು ಸಂಸದರಾದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು.
ಸಾಗರ ತಾಲೂಕಿನ ಭೀಮನಕೋಣೆಯ
ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವರ ಜೀರ್ಣಾಷ್ಟಬಂಧ ಪೂರ್ವಕ ಪುನಃ ಪ್ರತಿಷ್ಠಾಪನೆ, ನವಭವನ ಲೋಕಾರ್ಪಣೆ ಮತ್ತು ಧರ್ಮ ಸಭೆ ಕಾರ್ಯಕ್ರಮದಲ್ಲಿ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಭಾಗವಹಿಸಿ ಶ್ರೀಗಳ ಆಶೀರ್ವಾದವನ್ನು ಪಡೆದರು.
ದಿವ್ಯ ಸಾನಿಧ್ಯವನ್ನು ಜಗದ್ಗುರುಶಂಕರಾಚಾರ್ಯ
ಶ್ರೀ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರಮಠ,ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ನವರು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ .ಎಸ್. ಗುರುಮೂರ್ತಿ, ಗುರುಪ್ರಸಾದ್ ಐಸಿರಿ,
ಎಲ್. ಟಿ.ತಿಮ್ಮಪ್ಪ ಹೆಗಡೆ, ಶ್ರೀ ಕ್ಷೇತ್ರ ಸಿಂಗಂದೂರಿನ ಪ್ರಧಾನ ಅರ್ಚಕರಾದ ಶೇಷಗಿರಿ ಭಟ್ಟರು, ಬಿ. ಏನ್ ಶ್ರೀಧರ,
ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಸೇವಾ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.