ಶಿವಮೊಗ್ಗ : ನಗರದ ಖ್ಯಾತ ವೈದ್ಯ ಶರಾವತಿ ನರ್ಸಿಂಗ್ ಹೋಂನ ಡಾ.ಪಿ.ನಾರಾಯಣ್ ಅವರಿಗೆ ವೈದ್ಯಕೀಯ ವೃತ್ತಿ ಮತ್ತು ಸಮುದಾಯಕ್ಕೆ ಸಲ್ಲಿಸಿದ ಅಮೋಘ ಸೇವೆಗಳನ್ನು ಗುರುತಿಸಿ 2022ನೇ ಸಾಲಿನ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯು ನೀಡುವ ವೈದ್ಯರ ದಿನಾಚರಣೆಯ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವೈದ್ಯಕೀಯ ಸೇವೆಯ ಜೊತೆಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹ ಕಾರ್ಯದರ್ಶಿಗಳಾಗಿ, ಶಿವಮೊಗ್ಗ ಶಂಕರ ಮಠದ ಧರ್ಮದರ್ಶಿಗಳಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಜು.01 ರಂದು ಬೆಂಗಳೂರಿನಲ್ಲಿರುವ ಐಎಂಎ ರಾಜ್ಯ ಪ್ರಧಾನ ಕಛೇರಿಯಲ್ಲಿ ಭಾರತದ ವೈದ್ಯಕೀಯ ವೃತ್ತಿಯ ಡಾಯೆನ್ ದಿ. ಡಾ. ಬಿ. ಸಿ. ರಾಯ್ ಅವರ ಸ್ಮರಣಾರ್ಥ ನಡೆಯುವ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ‌. ಇವರಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಲ್ಲಾ ಅಜೀವ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ತುಂಬು ಹೃದಯದ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

error: Content is protected !!