ಶಿಕಾರಿಪುರ : ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮ. ಸಮಾಜದ ಏಳಿಗೆ ಹಾಗೂ ಜನಪತ್ರಿನಿಧಿಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ, ಮುದ್ರಣ ಬಳಿಕ ರೇಡಿಯೋ, ಟಿವಿ ಈಗ ಅಂತರ್ಜಾಲ ಹೀಗೆ ಮಾಧ್ಯಮ ಕ್ಷೇತ್ರ ತಂತ್ರಜ್ಞಾನದೊಂದಿಗೆ ವಿಸ್ತಾರವಾಗುತ್ತಲೇ ಬಂದಿದೆ. ಆದರೆ ಇಂದಿಗೂ ಅತ್ಯಂತ ವಿಶ್ವಾಸಾರ್ಹವಾಗಿ ಉಳಿದಿರುವುದು ಮುದ್ರಣ ಮಾಧ್ಯಮ ಕೋವಿಡ್ ನಂತರದ ದಿನದಲ್ಲಿ ಕೋವಿಡ್ ನಂತರದ ದಿನದಲ್ಲಿ ಪತ್ರಕರ್ತರು ಸಾಕಷ್ಟು ಸವಾಲು ಎದುರಿಸಿದ್ದಾರೆ.

ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ನಮ್ಮ ಪತ್ರಕರ್ತರ, ಮಾಧ್ಯಮದ ಸೇವೆಯನ್ನು ನಾನಿಲ್ಲಿ ಸ್ಮರಿಸುತ್ತೇನೆ. ಜನ ಸಾಮಾನ್ಯರಿಗೆ ಕೋವಿಡ್ ಕುರಿತ ಮಾಹಿತಿ ಹಂಚುವಿಕೆ, ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ಸರಕಾರವನ್ನು ಎಚ್ಚರಿಸುವ ಒಂದು ಪವಿತ್ರ ಕೆಲಸವನ್ನು ಪತ್ರಕರ್ತರು ಮಾಡಿದ್ದರು. ಹಲವಾರು ಪತ್ರಕರ್ತರು ಕೋವಿಡ್ ಸೋಂಕಿಗೊಳಗಾಗಿದ್ದರು. ಈ ಹಿನ್ನಲೆಯಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರಕಾರ ಪತ್ರಕರ್ತರನ್ನು ಕೂಡ ಫ್ರಂಟ್ ಲೈನ್ ವಾರಿಯರ್ ಎಂದು ಪರಿಗಣಿಸಿ, ಸಮಾಜಕ್ಕಾಗಿ ಜೀವ ತೆತ್ತ ಪತ್ರಕರ್ತರ ಕುಟುಂಬಕ್ಕೆ ಪರಿಹಾರ ಘೋಷಿಸಿದರು. ಇದಕ್ಕಾಗಿ ಪತ್ರಕರ್ತರ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪತ್ರಕರ್ತರಿಗೆ ಉಚಿತ ಅರೋಗ್ಯ ವಿಮಾ ಯೋಜನೆ ಜಾರಿಗೊಳಿಸಿತ್ತು ಎಂದು ಸಂಸದರಾದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು.

ಶಿಕಾರಿಪುರ ತಾಲೂಕು ನೂತನ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಮಠದ್ ಅವರಿಗೆ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಎಲ್. ರಾಜು ಅವರಿಗೆ ಹಾಗೂ ನೂತನ ಪದಾಧಿಕಾರಿಗಳಿಗೆ ಆತ್ಮೀಯವಾಗಿ ಶುಭವನ್ನು ತಿಳಿಸಿದರು.

ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಎಸ್‌.ಗುರುಮೂರ್ತಿ ಅವರು, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರು ಎನ್. ರವಿಕುಮಾರ್, ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಹುಚಾಯಪ್ಪ, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ರಾಘವೇಂದ್ರ ಮತ್ತಿತರ ಮುಖಂಡರು, ಶಿಕಾರಿಪುರ ಪತ್ರಕರ್ತರು ಉಪಸ್ಥಿತರಿದ್ದರು.

error: Content is protected !!