ಶಿವಮೊಗ್ಗ, ಸೆಪ್ಟಂಬರ್ 13 : ಜಾನುವಾರು ಸಾಕಾಣಿಕಾ ಮತ್ತು ನಿರ್ವಹಣಾ ವಿಭಾಗವು ಹೆಸರುಘಟ್ಟ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಸೆ. 23 ರಿಂದ 28ರವರೆಗೆ ನಗರದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ 6 ದಿನಗಳ ಸಮಗ್ರ ಕೋಳಿ ಸಾಕಾಣಿಕೆ ಕುರಿತು ತರಬೇತಿಯನ್ನು ಹಮ್ಮಿಕೊಂಡಿದೆ.
ಈ ತರಬೇತಿ ಭಾಗವಹಿಸಲು ಇಚ್ಛಿಸುವ ರೈತರು/ರೈತ ಮಹಿಳೆಯರು ಸೆ. 18 ರೊಳಗಾಗಿ ಡಾ|| ಕೃಷ್ಣಮೂರ್ತಿ ಟಿ.ಎಸ್., ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಮತ್ತು ತರಬೇತಿ ನಿರ್ದೇಶಕರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ. ಮೊ.ನಂ.: 9900519138 ನ್ನು ಸಂಪರ್ಕಿಸುವಂತೆ ಡೀನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!