| ಇಂದು ಬ್ರಹ್ಮಣ್ಯ ತೀರ್ಥರ ಉಪನ್ಯಾಸ | ನಾಳೆ ವೀಣಾ ಬನ್ನಂಜೆ ನಗರಕ್ಕೆ
ಶಿವಮೊಗ್ಗ, ಮೇ. 30ಃ ನಗರದ ಪುರಾಣ, ಇತಿಹಾಸ ಪ್ರಸಿದ್ಧ ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಭಾರತೀಯ ವಿಚಾರ ವೇದಿಕೆ, ಭಕ್ತ ಶಿರೋಮಣಿ, ಅನಂತ ರಾಮ ಅಯ್ಯಂಗಾರ್ ಸ್ಮಾರಕ ಟ್ರಸ್ಟ್ ಹಾಗೂ ದೇವಾಲಯ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಜೂ. 01ರಿಂದ 03ರವರೆಗೆ ಹನುಮ ಜಯಂತಿ ಮಹೋತ್ಸವವು ಆಯೋಜನೆಗೊಂಡಿದ್ದು, ಇದರ ಅಂಗವಾಗಿ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರತಿದಿನ ಸಂಜೆ 07ಗಂಟೆಗೆ ದೇವಾಲಯದ ಆವರಣದಲ್ಲಿನ ಸಭಾ ಮಂಟಪದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಮೇ. 30ರ ಇಂದು ಶ್ರೀ ಬ್ರಹ್ಮಣ್ಯ ಆಚಾರ್ಯರವರಿಂದ ಉಪನ್ಯಾಸ ಹಾಗೂ ಮೇ. 31ರಂದು ಬೆಂಗಳೂರಿನ ಆಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆಯವರಿಂದ ರಾಮನ ಭಕ್ತಿ, ಹನುಮನ ಶಕ್ತಿ ಕುರಿತು ಉಪನ್ಯಾಸ ನಡೆಯಲಿದೆ.
* ಧಾರ್ಮಿಕ ಕಾರ್ಯಕ್ರಮಗಳು
ಹನುಮ ಜಯಂತಿ ಅಂಗವಾಗಿ, ಜೂ. 01ರಂದು ಸ್ವಾತಿ ನಕ್ಷತ್ರ ಬೆಳಿಗ್ಗೆ 08ರಿಂದ ಶ್ರೀ ಆಂಜನೇಯ, ಶ್ರೀ ನಾರಸಿಂಹರಿಗೆ ಅಭಿಷೇಕ, ನಂತರ ಸುದರ್ಶನ ಹೋಮ, ಸಂಜೆ ಶ್ರೀ ಲಕ್ಷ್ಮೀ ನರಸಿಂಹರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಜೂ. 02ರಂದು ವಿಶಾಖ ನಕ್ಷತ್ರ ಬೆಳಿಗ್ಗೆ ಶ್ರೀ ಆಂಜನೇಯರಿಗೆ ಅಭಿಷೇಕ, ನಂತರ ಶ್ರೀ ರಾಮತಾರಕ ಹೋಮ, ರಾತ್ರಿ ಪಟ್ಟಾಭಿರಾಮರ ಪಲ್ಲಕ್ಕಿ ಉತ್ಸವ, ಜೂ. 03ರಂದು ಅನುರಾಧ ನಕ್ಷತ್ರ ಶ್ರೀ ಹನುಮ ಜಯಂತಿ ಬೆಳಿಗ್ಗೆ ಶ್ರೀ ಆಂಜನೇಯರಿಗೆ ಅಭಿಷೇಕ, ಶ್ರೀ ಮಾರುತಿ ಮೂಲ ಮಂತ್ರ ಹೋಮ, ಸಂಜೆ 07ರಿಂದ ಶ್ರೀ ರಾಮ, ಹನುಮರ ಎದುರು ಉತ್ಸವ, ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.