ಭಾರತ ಸರ್ಕಾರದ ಕೇಂದ್ರ ಸಂವಹನ ಇಲಾಖೆ ಶಿವಮೊಗ್ಗದಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಹಾಗೂ ಕೇಂದ್ರ ಸರ್ಕಾರದ ಸಾಧನೆಯನ್ನು ಬಿಂಬಿಸುವ ವಿಶೇಷ ಛಾಯಾ ಚಿತ್ರ ಪ್ರದರ್ಶನವನ್ನು ಅಕ್ಟೋಬರ್ 2 ರಿಂದ 5 ದಿನಗಳ ಕಾಲ ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿತ್ತು.
ಶಿವಮೊಗ್ಗ ಜಿಲ್ಲೆಯ ಸಂಸದ ಬಿ ವೈ ರಾಘವೇಂದ್ರ ಛಾಯಾಚಿತ್ರ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಛಾಯಾಚಿತ್ರವನ್ನು ಉದ್ಘಾಟಿಸಿದರು
ಪ್ರದರ್ಶನದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಕಳೆದ ಎಂಟು ವರ್ಷಗಳಿಂದ ಸಾಧಿಸಿದ ಸಾಧನೆಯನ್ನು ಬಿಂಬಿಸುವ ಛಾಯಾಚಿತ್ರ ನಡೆಯುತ್ತಿದೆ. ಅಲ್ಲದೆ ಸ್ವಾತಂತ್ರ್ಯ ಸಂಗ್ರಾಮದ ವಿವಿಧ ಮಜಲುಗಳನ್ನು ಛಾಯಾಚಿತ್ರ ಪ್ರದರ್ಶನ ಪರಿಚಯಿಸುತ್ತಿದೆ
ಬಿ. ವೈ ರಾಘವೇಂದ್ರ ಸಂಸದ ಶಿವಮೊಗ್ಗ ಮಾತನಾಡಿ
ಪ್ರಧಾನಿ ನರೇಂದ್ರ ಮೋದಿ ಅವರ ನೇತತ್ವದಲ್ಲಿ ಭಾರತ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ತಲುಪುವಂತೆ ಮಾಡಿದೆ ಕೃಷಿಯಲ್ಲಿ ತೊಡಗಿಕೊಂಡವರು ಬೀದಿ ವ್ಯಾಪಾರಿಗಳು ಹೀಗೆ ಸಮಾಜದ ಎಲ್ಲ ವರ್ಗದ ಜನರನ್ನು ಕಳೆದ ಎಂಟು ವರ್ಷಗಳಲ್ಲಿ ಭಾರತ ಸರ್ಕಾರ ತಲುಪಿದೆ ಮಹಾತ್ಮ ಗಾಂಧೀಜಿಯವರ ಧ್ಯೇಯ ವಾಕ್ಯ ಮತ್ತು ಆಲೋಚನೆಯ ಗ್ರಾಮ ಸ್ವರಾಜ್ ಪರಿಕಲ್ಪನೆಯನ್ನು ಮುನ್ನಡೆಸುವಲ್ಲಿ ನಿರಂತರ ಪ್ರಯತ್ನ ಮಾಡುತ್ತಾ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.
ಈರಣ್ಣ ಕಾಡಾಡಿ ರಾಜ್ಯಸಭಾ ಸದಸ್ಯರು ಕಾರ್ಯಕ್ರಮ ದಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಕೇಂದ್ರ ಸರ್ಕಾರದ ಯೋಜನೆ ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಯುತ್ತಿದೆ ಪ್ರತಿಯೊಬ್ಬರು ತಮ್ಮ ಕೌಶಲ್ಯವನ್ನು ಬಳಸಿಕೊಂಡು ಬದುಕನ್ನು ಮುನ್ನಡೆಸುವಲ್ಲಿ ಸಹಕಾರಿಯಾಗಿದೆ ಕರ್ನಾಟಕ ರಾಜ್ಯದಲ್ಲಿ ಕೇಂದ್ರದ ಯೋಜನೆಗಳು ಜನತೆಯ ಬದುಕನ್ನು ಯಶಸ್ವಿಯಾಗಿ ಕಟ್ಟಲು ಸಹಕಾರಿಯಾಗಿದೆ
ಮಂಗಳ ಫಲಾನುಭವಿ ಮಾತನಾಡಿ ಭಾರತ ಸರ್ಕಾರದ ಆರೋಗ್ಯ ಇಲಾಖೆ ವತಿಯಿಂದ ಮಾತೃ ವಂದನ ಯೋಜನೆಯಲ್ಲಿ ನಮಗೆ ಸಹಕಾರ ನೀಡಿದ್ದಾರೆ ಸರ್ಕಾರ ಮಗು ಹುಟ್ಟುವುದರಿಂದ ಅದರ ಬೆಳವಣಿಗೆಯವರೆಗೂ ಆರ್ಥಿಕ ಸಹಕಾರವನ್ನು ನೀಡುತ್ತಿರುವುದು ನಮಗೆ ಸಂತಸ ತಂದಿದೆ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದು ತಿಳಿಸಿದರು.
ಶಾಂತಮ್ಮ ಬೀದಿ ವ್ಯಾಪಾರಿ ಮಾತನಾಡಿ ನಾವು ಬೀದಿ ವ್ಯಾಪಾರ ಮಾಡಲು ಕೇಂದ್ರ ಸರ್ಕಾರ ಆರ್ಥಿಕ ಸಹಕಾರವನ್ನು ಮಾಡಿದೆ ಇದರಿಂದ ನಮ್ಮ ಜೀವನೋಪಾಯಕ್ಕೆ ತುಂಬಾ ಸಹಕಾರಿಯಾಗಿದೆ ಎಂದರು
ಸುಷ್ಮಾಫಲಾನುಭವಿ ಮಾತನಾಡಿ ನಾವುಗಳು ಸಾಕಷ್ಟು ದಿನಗಳಿಂದ ಒಲೆಯಲ್ಲಿ ಅಡುಗೆ ಮಾಡುತ್ತಿದ್ದೆವು. ಮಳೆಗಾಲದಲ್ಲಿ ಅಂತು ಇದು ಕಷ್ಟ ಸಾಧ್ಯ ಸರ್ಕಾರ ನಮಗೆ ಉಚಿತವಾಗಿ ಸಿಲಿಂಡರ್ ನೀಡಿದೆ. ಇದರಿಂದ ನಮಗೆ ತುಂಬಾ ಸಹಕಾರಿಯಾಗಿದೆ ಎಂದು ತಿಳಿಸಿದರು.
ಗಣಪತಿ ಫಲಾನುಭವಿ ಮಾತನಾಡಿ ನಾವು ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡಿಕೊಂಡು ಸ್ವಯಂ ಉದ್ಯೋಗವನ್ನು ನಡೆಸಲು ಸರ್ಕಾರದ ಯೋಜನೆಯಿಂದ ನಮಗೆ ಸಹಕಾರಿಯಾಗಿದೆ ಕೇಂದ್ರ ಸರ್ಕಾರ ನಿಜವಾದ ಫಲಾನುಭವಿಗೆ ಆರ್ಥಿಕ ಸಹಕಾರವನ್ನು ನೇರ ಅವರ ಖಾತೆಗೆ ನೀಡುತ್ತಿರುವುದು ಉಪಯುಕ್ತವಾದದ್ದು ಎಂದರು
ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಗುರುಮೂರ್ತಿ ಫೀಲ್ಡ್ ಪಬ್ಲಿಸಿಟಿ ಆಫೀಸರ್ ಅಕ್ಷತಾ ಪ್ರಚಾರ ಸಹಾಯಕ ಲಕ್ಷ್ಮಿಕಾಂತ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.