ಕಲಬುರಗಿ ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಾದ ಪಟ್ಟಣ, ನರೋಣ, ಆಳಂದ, ಖಜೂರಿ, ನಿಂಬರಗಾ, ಮಾದನಹಿಪ್ಪರ್ಗಾ, ಕಲಬುರಗಿ, ಫರಹತಬಾದ್, ಅತನೂರ್, ಅಫಜಲಪೂರ, ಕರಜಗಿ, ಅವರಾದ್, ಮಹಗಾಂವ್, ಕಮಲಾಪೂರ ವ್ಯಾಪ್ತಿಯ ಗ್ರಾಮದ ರೈತರಿಗೆ ಕೃಷಿ ಸಂಜೀವಿನ ಮೊಬೈಲ್ ಪ್ರಯೋಗಾಲಯ ವಾಹನದ ಅನಕೂಲತೆಗಳ ಅರಿವು ಕಾರ್ಯಕ್ರಮ ನಡೆಸಲಾಯಿತು.
ಮುಖ್ಯವಾಗಿ ಜಮೀನಿನ ಮಣ್ಣು ಪರೀಕ್ಷೆ, ರಸಸಾರ, ಸಾವಯವ ಇಂಗಾಲ, ಬೆಳೆ ಕೀಟ, ರೋಗಭಾದಿತ ಎಲೆಗಳ ಪರೀಕ್ಷೆಯನ್ನು ರೈತರಿಗೆ ವಿವರಿಸಲಾಯಿತು. ಮುಂಗಾರು ಹಂಗಾಮಿನ ಸಿದ್ದತೆ ಹಾಗೂ ಪ್ರಸ್ತುತ ತಲೆದೋರಿರುವ ಮಹಾಮಾರಿ ಕೋವಿಡ್ ರೋಗದ ಕುರಿತು ಮಾಹಿತಿ ನೀಡಲಾಯಿತು. ರೈತರು ಕೃಷಿ ಸಂಜೀವಿನ ಸಹಾಯÀವಾಣಿ 155313 ಗೆ ಕರೆ ಮಾಡಿ ಯೋಜನಾ ಸಿಬ್ಬಂದಿಗಳಿಂದ ಮಾಹಿತಿ ಪಡೆಯಬಹುದಾಗಿದೆ ಎಂದು ಕೃಷಿ ಜಂಟಿ ಕೃಷಿ ನಿರ್ದೇಶಕರು ಹಾಗೂ ಉಪನಿರ್ದೇಶಕರು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾz ಡಾ. ರಾಜು ಜಿ. ತೆಗ್ಗಳ್ಳಿ À ಡಾ. ವಾಸುದೇವ ನಾಯ್ಕ್, ಡಾ.ಯುಸುಫ್ ಅಲಿ, ಡಾ. ಜಹೀರ್ ಅಹಮದ್, ಡಾ. ಮಂಜುನಾಥ ಪಾಟೀಲ್, ಡಾ. ಶ್ರೀನಿವಾಸ ಬಿ.ವಿ ಮತ್ತು ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳು, ಕೃಷಿ ಅಧಿಕಾರಿಗಳು, ಆತ್ಮ ಯೋಜನೆ ಸಿಬ್ಬಂದಿ ಕ್ಷೇತ್ರ ಭೇಟಿಯಲ್ಲಿ ಉಪಸ್ಥಿರಿದ್ದರು. ಶ್ರೀ ಚಂದ್ರಕಾಂತ ಜೀವಣಗಿ, ಸಹಾಯಕ ಕೃಷಿ ನಿರ್ದೇಶಕರು, ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯ ತಾಂತ್ರಿಕ ಅಧಿಕಾರಿಗಳಾದ ಶ್ರೀ ಜಾಂಗೀರ್, ಶ್ರೀ ನಧಾಫ್ ಕೃಷಿ ಸಂಜೀವಿನಿ ಜಿಪಿಎಸ್ ಆಧಾರಿತ ವಾಹನದ ಸೌಲಭ್ಯದ ಹಾಗೂ ಯೋಜನೆಯ ಮಾಹಿತಿಯನ್ನು ನೀಡಿದರು. ಕೃಷಿ ಅಧಿಕಾರಿಗಳಾದ ರಾಹುಲ್ ಚೌಹಾಣ, ಆನಂದ, ಸುರೇಖ, ಅಫ್ರೋಝ, ಮಲ್ಲಿಕಾರ್ಜುನ, ನೀಲಕಂಠ, ಶ್ರೀಮತಿ ವಿಜಯಲಕ್ಷ್ಮಿ, ದಿವ್ಯ, ಆಕಾಶ ರೆಡ್ಡಿ, ಪ್ರಿಯಾಂಕಾ ಕುಲಕರ್ಣಿ, ಸಾಕ್ಷಿ, ಸರೋಜನಿ, ಸುಷ್ಮಾ ಹಾಗೂ ಆತ್ಮ ಯೋಜ£ ಅಧಿಕಾರಿಗಳು ಒಂದು ವಾರ ಕಾಲದ ವಿವಿಧ ಗ್ರಾಮ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
/-ಡಾ. ರಾಜು ಜಿ.ತೆಗ್ಗಳ್ಳಿ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ
ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ