ಕೃಷಿ ಅಭಿವೃದ್ದಿ ಮತ್ತು ರೈತರ ಕಲ್ಯಾಣ ಒಂದೇ ನಾಣ್ಯದ ಎರಡು ಮುಖಗಳಂತೆ. ಇಂತಹ ಧ್ಯೇಯೋಕ್ತಿಯೊಂದಿಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗವು ಏಪ್ರಿಲ್ 2013 ರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ದೇಶದಲ್ಲಿಯೇ ಪ್ರಪ್ರಥಮ ಸಮಗ್ರ ವಿಶ್ವವಿದ್ಯಾಲಯವಾಗಿದ್ದು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಭಾಗಗಳಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿ.ಹೆಚ್‍ಡಿ ಪದವಿಗಳನ್ನು ಅಭ್ಯಸಿಸಲು ಅನುಕೂಲತೆಗಳನ್ನು ಹೊಂದಿರುತ್ತದೆ. ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕು, ಆನಂದಪುರ ಹೋಬಳಿ ಇರುವಕ್ಕಿ, ಹೆಬ್ಬೋಡಿ ಮತ್ತು ಸರಗುಂದ ಗ್ರಾಮಗಳಲ್ಲಿನ ವಿವಿಧ ಸರ್ವೆ ನಂಬರ್‍ಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕ್ಯಾಂಪಸ್ ಹಾಗೂ ಕೇಂದ್ರ ಸ್ಥಾನವನ್ನು ಸ್ಥಾಪಿಸಿ ಅಭಿವೃದ್ದಿ ಪಡಿಸಲು ಕರ್ನಾಟಕ ಸರ್ಕಾರವು ದಿನಾಂಕ 20-03-2015ರಂದು (ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಖಆ 40 ಐಉS 2012 ಃಚಿಟಿgಚಿಟoಡಿe ಜಚಿಣeಜ 31-01-2015) ಆದೇಶ ಹೊರಡಿಸಿರುತ್ತದೆ. ಒಟ್ಟು 787.06 ಎಕರೆ ಜಮೀನು ವಿಶ್ವವಿದ್ಯಾಲಯದ ಹೆಸರಿಗೆ ಮಂಜೂರಾಗಿದೆ. ಈ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಒಟ್ಟು 7 ಜಿಲ್ಲೆಗಳು ಬರುತ್ತವೆ (ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಉಡುಪಿ, ಕೊಡಗು, ಮಂಗಳೂರು) ವಿಶ್ವವಿದ್ಯಾಲಯದಲಿ ್ಲ ಒಟ್ಟು 4 ಪದವಿ ಕಾಲೇಜುಗಳು, 2 ಡಿಪ್ಲೊಮಾ ಕಾಲೇಜುಗಳಿದ್ದು 4 ವಲಯಗಳಲ್ಲಿ ಒಟ್ಟು 13 ಸಂಶೋಧನಾ ಕೇಂದ್ರಗಳು ವಿವಿಧ ವಿಷಯಗಳ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಇದರೊಂದಿಗೆ 4 ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ 2 ವಿಸ್ತರಣಾ ಕೇಂದ್ರಗಳು ಸಹ ರೈತರಿಗೆ ವೈಜ್ಞಾನಿಕ ಮಾಹಿತಿಯನ್ನು ಒದಗಿಸಲು ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಈ ವಿಶ್ವವಿದ್ಯಾಲಯದಲ್ಲಿ ರೈತರಿಗೆ ಅನುಕೂಲವಾಗುವಂತೆ ಜೀವವೈವಿಧ್ಯತೆ ಸಂರಕ್ಷಣಾ ಘಟಕ, ಜೈವಿಕ ಇಂಧನ ಉದ್ಯಾನ, ಕೃಷಿ ಅರಣ್ಯ ಸಂಶೋಧನಾ ಘಟಕ, ತಳಿಗಳ ಸಂರಕ್ಷಣಾ ವಿಭಾಗ, ತೋಟಗಾರಿಕೆ ಬೆಳೆಗಳ ಸಂರಕ್ಷಣಾ ಘಟಕ, ತಾಯಿ ಗಿಡ ಘಟಕ, ಆಹಾರ ಬೆಳೆಗಳ ಘಟಕ, ತೋಟಗಾರಿಕೆ ಬೆಳೆಗಳ ಘಟಕ, ಪಶುಸಂಗೋಪನಾ ಘಟಕ, ಮೀನುಗಾರಿಕೆ ವಿಭಾಗ, ಜಲಾನಯನ ಅಭಿವೃದ್ಧಿ ಘಟಕ ಮತ್ತು ಸಮಗ್ರ ಕೃಷಿ ಪದ್ಧತಿಯನ್ನೊಳಗೊಂಡಂತೆ 787.03 ಎಕರೆಯಲ್ಲಿ ಅಭಿವೃದ್ಧಿ ಮಾಡಲಾಗಿದೆ. ಇವುಗಳ ಜೊತೆಗೆ ಕಟ್ಟಡಗಳನ್ನು ಸರಿ ಸುಮಾರು 4,95,000 ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಇವುಗಳಲ್ಲಿ ಆಡಳಿತ ಭವನ, ಬೆಳೆ ಉತ್ಪಾದನೆ ಮತ್ತು ಬೆಳೆ ಸಂರಕ್ಷಣೆ ವಿಭಾಗ, ಬೆಳೆ ಅಭಿವೃದ್ಧಿ ಮತು ಜೈವಿಕ ತಂತ್ರಜ್ಞಾನ ವಿಭಾಗ, ಸಮಾಜ ಮತ್ತು ಮೂಲ ವಿಜ್ಞಾನಗಳ ವಿಭಾಗ, ತೋಟಗಾರಿಕೆ ಮತ್ತು ಅರಣ್ಯ ವಿಭಾಗ, ಗ್ರಂಥಾಲಯ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ನಿಲಯಗಳನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಕೊಳಚೆ ನೀರನ್ನು ಶುದ್ಧೀಕರಿಸಿ ಪುನರ್ಬಳಕೆ ಮಾಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಈಗಾಗಲೇ ಸಂರಕ್ಷಿತ ಕಾಫಿತೋಟ, ನೆರಳುಮನೆ, ಪಾಲಿಹೌಸ್ ಇತ್ಯಾದಿ ಸವಲತ್ತುಗಳನ್ನೂ ಅಭಿವೃದ್ಧಿಪಡಿಸಲಾಗಿದೆ.
ಈ ಹೊಸ ಆವರಣವು ಅಸ್ಥಿತ್ವಕ್ಕೆ ಬಂದ ನಂತರ ಇಲ್ಲಿ ಹಲವಾರು ವಿಷಯಗಳಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿ.ಹೆಚ್‍ಡಿ ಪದವಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದು, ಒಟ್ಟು ಸುಮಾರು 800-1000 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡಲು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅವಕಾಶಗಳನ್ನು ಕಲ್ಪಿಸಲಾಗುವುದು. ಇದಲ್ಲದೆ, ಈ ಆವರಣದಲ್ಲಿ ಸ್ನಾತಕೋತ್ತರ ಸಂಶೋಧನೆಯೊಂದಿಗೆ ಕೃಷಿ, ಸಂಶೋಧನೆ ಮತ್ತು ಅರಣ್ಯ ವಿಜ್ಞಾನಗಳ ಬಗ್ಗೆ ರೈತರಿಗೆ ಅನುಕೂಲವಾದ ಮಾಹಿತಿಯನ್ನು ಒದಗಿಸಲು ಹಲವು ಸಂಶೋಧನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಂದಾಜಿದೆ.

ವಿಶ್ವವಿದ್ಯಾಲಯದ ಸಾಧನೆಗಳು:
ಕಳೆದ 2013-14 ರಿಂದ ಒಟ್ಟು 1971 ವಿದ್ಯಾರ್ಥಿಗಳು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಭಾಗದ ವಿವಿಧ ವಿಭಾಗಗಳಲ್ಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ, ಅದರಲ್ಲಿ 1455 ಸ್ನಾತಕ ಪದವಿ ವಿದ್ಯಾರ್ಥಿಗಳು, 472 ಎಂ.ಎಸ್ಸಿ. ಮತ್ತು 44 ಪಿಹೆಚ್‍ಡಿ ವಿದ್ಯಾರ್ಥಿಗಳು ಪದವಿಯನ್ನು ಪಡೆದಿದ್ದಾರೆ. ಅಲ್ಲದೆ ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಒಟ್ಟಾರೆ 141 ಚಿನ್ನದ ಪದಕಗಳನ್ನು ನೀಡಲಾಗಿರುತ್ತದೆ.

ಫೆಲೋಶಿಪ್ ವಿಷಯದಲ್ಲಿ ವಿಶ್ವವಿದ್ಯಾಲಯವು ಸಾಧಿಸಿದ ಪ್ರಗತಿ, ಅಖಿಲ ಭಾರತ ಮಟ್ಟದಲ್ಲಿ ತೋಟಗಾರಿಕೆ ಮತ್ತು ಅರಣ್ಯಶಾಶ್ತ್ರದಲ್ಲಿ ಐಸಿಎಆರ್-ಜೆಆರ್‍ಎಫ್ ವಿದ್ಯಾರ್ಥಿ ವೇತನದಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದಕ್ಕಾಗಿ ನಾವು ಐಸಿಎಆರ್ ರಾಷ್ಟ್ರೀಯ ಪ್ರಶಸ್ತಿಯನ್ನು ಎರಡು ಬಾರಿ ಸ್ವೀಕರಿಸಿದ್ದೇವೆ. ನಮ್ಮ ಐಸಿಎಆರ್ ವತಿಯಿಂದ ದೇಶದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್ ಪಟ್ಟಿಯಲ್ಲಿ 2018-19ನೇ ಸಾಲಿನಲ್ಲಿ 51 ರಿಂದ 21 ನೇ ಸ್ಥಾನಕ್ಕೆ ಏರಿರುತ್ತದೆ. ಇದು ಮುಂದಿನ ದಿನಗಳಲ್ಲಿ ಹೊಸ ಶಕೆಯನ್ನು ಆರಂಭಿಸುವ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯದ ಸಾಮಥ್ರ್ಯವನ್ನು ಪ್ರತಿಬಿಂಬಿಸುತ್ತದೆ. ಅಲ್ಲದೇ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ವಿಶ್ವವಿದ್ಯಾಲಯಕ್ಕೆ 2ನೇ ರ್ಯಾಂಕ್‍ನೊಂದಿಗೆ ನಾಲ್ಕು ಸ್ಟಾರ್‍ಗಳನ್ನು ನೀಡಿರುತ್ತದೆ. ಭಾರತೀಯ ಅರಣ್ಯ ಮತ್ತು ಶಿಕ್ಷಣ ಸಂಶೋಧನಾ ಪರಿಷತ್ತು (ಐಸಿಎಫ್‍ಆರ್‍ಇ) ವತಿಯಿಂದ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯಕ್ಕೆ “ಎ” ಎರಡು ಸ್ಟಾರ್ ರ್ಯಾಂಕ್‍ನೊಂದಿಗೆ ಮಾನ್ಯತೆ ಪಡೆದಿರುತ್ತದೆ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅರಣ್ಯದ ಅತ್ಯುತ್ತಮ ಐದು ಮಹಾವಿದ್ಯಾಲಯಗಳಲ್ಲಿ ನಮ್ಮ ಅರಣ್ಯ ಮಹಾವಿದ್ಯಾಲಯವು ಒಂದಾಗಿರುತ್ತದೆ. ಕೃಷಿ ನಾವೀನ್ಯತಾ ಕಾಂಗ್ರೆಸ್ ಅಧಿವೇಶನವತಿಯಿಂದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ‘ಕೃಷಿಯ ಅತ್ಯುತ್ತಮ ಸಂಸ್ಥೆ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ. ಜ್ಞಾನ ವಿಮರ್ಶೆಯ ನಿಯತಕಾಲಿಕದಲ್ಲಿ ವಿಶ್ವವಿದ್ಯಾಲಯವನ್ನು ದೇಶದ ಅತ್ಯುತ್ತಮ ಹತ್ತು ಕೃಷಿ ವಿಶ್ವವಿದ್ಯಾಲಯಗಳಲ್ಲಿ ನಮ್ಮ ವಿಶ್ವವಿದ್ಯಾಲಯವನ್ನು ಸಹ ಸೇರಿಸಲಾಗಿರುತ್ತದೆ. ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಿಗೆ ಬಿ.ಬಿ. ಮುಂಡಕೂರ್ ಪ್ರಶಸ್ತಿ, ಚೌಧರಿ ಚರಣ್‍ಸಿಂಗ್ ಪ್ರಶಸ್ತಿ, ಭಾರತ ರತ್ನ ಸುಬ್ರಮ್ಮಣ್ಯಂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಅಮೆರಿಕಾದ ವತಿಯಿಂದ ಫುಲ್‍ಬ್ರೈಟ್ ವಿಸಿಟಿಂಗ್ ಫೆಲೋಶಿಪ್, ಡಾ.ಎ.ಕೆ. ಸುರ್ಭಾಯ್ ಸ್ಮಾರಕ ಪ್ರಶಸ್ತಿ ನಾಗಮ್ಮ ದತ್ತಾತ್ರೇಯ ಕೇಶವರಾವ್ ಪ್ರಶಸ್ತಿ, ಜವಾಹರಲಾಲ್ ನೆಹರೂ ಪ್ರಶಸ್ತಿ, ಕಾಮನ್‍ವೆಲ್ತ್ ಅಕಾಡೆಮಿಕ್ ಫೆಲೋಶಿಪ್, ಇಂಗ್ಲೇಂಡ್ ವತಿಯಿಂದ ಬ್ರಿಟೀಷ್ ಕೌನ್ಸಿಲ್ ವತಿಯಿಂದ ಇತ್ಯಾದಿ ಪ್ರಶಸ್ತಿಗಳು ಸಂದಿರುತ್ತವೆ. ಪ್ರತಿಷ್ಠಿತ ವೃತ್ತಿಪರ ಸಂಸ್ಥೆಗಳ ವತಿಯಿಂದ 11 ಫೆಲೋಶಿಪ್‍ಗಳಿಗೆ ಆಯ್ಕೆಯಾಗಿರುತ್ತಾರೆ. ಅಲ್ಲದೇ ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಅಕಾಡೆಮಿ, ರಾಷ್ಟ್ರೀಯ ಕೃಷಿ ವಿಜ್ಞಾನಗಳ ಅಕಾಡೆಮಿ, ಫೈಟೋಪಿಥೋಲಾಜಿಕಲ್ ಸೊಸೈಟಿ, ಸೊಸೈಟಿ ಆಫ್ ಮೈಕಾಲಜಿ ಅಂಡ್ ಪ್ಲಾಂಟ್ ಪೆಥಾಲಜಿ, ಪ್ಲಾಂಟ್ ಪ್ರೋಟೆಕ್ಷನ್ ಅಸೋಸಿಯೇಷನ್ ಆಫ್ ಇಂಡಿಯಾ ಇತ್ಯಾದಿ ಸಂಸ್ಥೆಗಳ ಫೆಲೋಶಿಪ್ ಪಡೆದಿರುತ್ತಾರೆ. ಇದರ ಜೊತೆಗೆ ನಮ್ಮ ಬೋಧಕ ವರ್ಗದ ಪ್ರಾಧ್ಯಾಪಕರು 5.0 ನಾಸ್ (ಎನ್‍ಎಎಎಸ್) ರೇಟಿಂಗ್‍ಗಿಂತ ಹೆಚ್ಚಿನದಾದ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜರ್ನಲ್‍ಗಳಲ್ಲಿ 322 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

ನಮ್ಮ ವಿಶ್ವವಿದ್ಯಾಲಯವು 14 ಸಂಶೋಧನಾ ಕೇಂದ್ರಗಳನ್ನು ಹೊಂದಿದ್ದು, 13 ಎಐಸಿಆರ್ ಪ್ರಾಯೋಜನೆಗಳು ನಾಲ್ಕು ಪ್ರಮುಖ ಕೃಷಿ ಹವಾಮಾನ ವಲಯಗಳಲ್ಲಿ ವಿಸ್ತರಿಸಿದ್ದು, 4 ಕೃಷಿ ವಿಜ್ಞಾನ ಕೇಂದ್ರಗಳನ್ನು ಒಳಗೊಂಡು ವಿಶೇಷವಾಗಿ 2 ವಲಯಗಳಲ್ಲಿ ಬೃಹತ್ ಜೈವಿಕ-ವೈವಿಧ್ಯತೆಯ ಸಂಪನ್ಮೂಲಗಳನ್ನು ಹೊಂದಿರುತ್ತದೆ. ಕರ್ನಾಟಕ ಸರ್ಕಾರದ 41 ಪ್ರಾಯೋಜನೆಯ ಧನ ಸಹಾಯ ಯೋಜನೆಗಳು, 41 ನೂತನ ವಿಶ್ವವಿದ್ಯಾಲಯ ಸಿಬ್ಬಂದಿ ಸಂಶೋಧನಾ ಯೋಜನೆಗಳು ಮತ್ತು 54 ತಾತ್ಕಾಲಿಕ (ಅಡ್ಹಾಕ್) ಯೋಜನೆಗಳು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಂಘಟಿತ ಸಂಶೋಧನಾ ಪ್ರಯತ್ನಗಳೊಂದಿಗೆ, ವಿಶ್ವವಿದ್ಯಾಲಯವು ಭತ್ತದಲ್ಲಿ ಹೆಚ್ಚಿನ ಇಳುವರಿ ನೀಡುವ ತಳಿಗಳಾದ ಕೆಪಿಆರ್-1, ಕೆಕೆಪಿ-5, ಐಇಟಿ-21179, ಎಂಓ-21(ಪ್ರಗತಿ), ಸಹ್ಯಾದ್ರಿ ಮೇಘ, ಸಹ್ಯಾದ್ರಿ ಪಂಚಮುಖಿ, ಸಹ್ಯಾದ್ರಿ ಕಾವೇರಿ, ಕೆಎಚ್‍ಪಿ-13, ತಂಬಾಕು ಸಹ್ಯಾದ್ರಿ ಟೋಬಿಯೋಸ್-6, ಅಡಿಕೆ ಮೈದಾನ್-ಸ್ಥಳೀಯ, ಹರಳು ಮತ್ತು ಅಲಸಂದೆ ಸಹ್ಯಾದ್ರಿ ಯುಕ್ತಿ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಉತ್ಪಾದನಾ ತಂತ್ರಜ್ಞಾನಗಳು (25 ಸಂಖ್ಯೆಗಳು), ಸಂರಕ್ಷಣಾ ತಂತ್ರಜ್ಞಾನಗಳು (25 ಸಂಖ್ಯೆಗಳು), ಕೃಷಿ ಯಂತ್ರೋಪಕರಣಗಳು (13 ಸಂಖ್ಯೆಗಳು), ತೋಟಗಾರಿಕೆ (13 ಸಂಖ್ಯೆಗಳು) ಮತ್ತು ಒಳನಾಡು ಮೀನುಗಾರಿಕೆ ತಂತ್ರಜ್ಞಾನಗಳನ್ನು (2 ಸಂಖ್ಯೆ) ಅಭಿವೃದ್ಧಿಪಡಿಸಿರುತ್ತದೆ. ಮಿನಿ ಹ್ಯಾಂಡ್ ಅಪರೇಟೆಡ್ ನೆಲಗಡಲೆ ಶೆಲ್ಲರ್‍ಗಾಗಿ ಒಂದು ಪೇಟೆಂಟ್ ಅನ್ನು ಪಡೆಯಲಾಗಿದೆ. ಅಲ್ಲದೇ ಈ ಕೆಳಗಿನ ತಂತ್ರಜ್ಞಾನಗಳು ಪೇಟೆಂಟ್ ಪ್ರಕ್ರಿಯೆಯಲ್ಲಿರುತ್ತವೆ.

  1. ಸ್ಪಾಟ್ ಲೇಪಕ (ಸ್ಪಾಟ್ ಅಪ್ಲಿಕೇಟರ್)
  2. ಕೈ ಚಾಲಿತ ಕಳೆ ಯಂತ್ರ
  3. ಮೂರು ಸಾಲು ಭತ್ತದ ಕಳೆ ತೆಗೆಯುವ ಯಂತ್ರ (ಅಡ್ಜೆಸ್ಟಬಲ್)
  4. ಪವರ್ ಟಿಲ್ಲರ್ ಚಾಲಿತ ನೆಲಗಡಲೆ ಬಿತ್ತನೆ ಕೂರಿಗೆ
  5. ಮಾವಿನ ಹಣ್ಣಿನಲ್ಲಿನ ಫ್ಲೈ ಡಿಟೆಕ್ಟರ್
  6. ಸೂಕ್ಷ್ಮಜೀವಿಯ ಪಿಜಿಪಿಆರ್

ವಿಶ್ವವಿದ್ಯಾಲಯದ ಬೀಜಘಟಕವು 388.55 ಟನ್ ಗುಣಮಟ್ಟದ ಬೀಜಗಳನ್ನು ಹಾಗೂ 38.53 ಲಕ್ಷ ಬಿತ್ತನೆ ಸಾಮಾಗ್ರಿಗಳನ್ನು (2014-15 ರಿಂದ 2019-20ರ ವರೆಗೆ) ಉತ್ಪಾದಿಸಿದ್ದು, ಇವುಗಳನ್ನು ರೈತರ ಅನುಕೂಲಕ್ಕಾಗಿ ವಿತರಿಸಲಾಗಿರುತ್ತದೆ. ಅಲ್ಲದೆ ವಿಶ್ವವಿದ್ಯಾಲಯವು ಪರಿಸರ ಸ್ನೇಹಿ ಉತ್ಪನ್ನಗಳಾದ 98.90 ಟನ್‍ಗಳ ಜೈವಿಕ ಏಜೆಂಟ್ ಮತ್ತು ಜೈವಿಕ ಗೊಬ್ಬರಗಳನ್ನು ರೈತರಿಗೆ ಪೂರೈಸಿರುತ್ತದೆ. ಇದರ ಜೊತೆಗೆ 4183 ಕಿ.ಗಾಂ್ರ ಜೇನುತುಪ್ಪವನ್ನು ಉತ್ಪಾದಿಸಿರುತ್ತದೆ.

ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಉಡುಪಿಯಲ್ಲಿರುವ ವಿಶ್ವವಿದ್ಯಾಲಯದ 4 ಕೃಷಿ ವಿಜ್ಞಾನ ಕೇಂದ್ರಗಳು, ಕತ್ತಲಗೆರೆ ಮತ್ತು ಮಡಿಕೇರಿಯ ಎರಡು ವಿಸ್ತರಣಾ ಶಿಕ್ಷಣ ಘಟಕಗಳು, ತೀರ್ಥಹಳ್ಳಿ ಮತ್ತು ಶೃಂಗೇರಿಯಲ್ಲಿರುವ ಎರಡು ವಿಸ್ತರಣಾ ಘಟಕಗಳು ತಂತ್ರಜ್ಞಾನ ವರ್ಗಾವಣೆಯಲ್ಲಿ ಸಕ್ರಿಯವಾಗಿ ತೊಡಿಗಿಕೊಂಡಿರುತ್ತವೆ. ಅಲ್ಲದೆ ಈ ಕೇಂದ್ರಗಳು ರೈತರು ಎದುರಿಸುತ್ತಿರುವ ಕ್ಷೇತ್ರ ಸಮಸ್ಯೆಗಳು ಹಾಗೂ ಅವರ ಸಾಮಥ್ರ್ಯ ವೃದ್ಧಿಗೆ ಶ್ರಮಿಸುತ್ತಿವೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ವಿಭಾಗವು 689 ಮುಂಚೂಣಿ ಪ್ರಾತ್ಯಕ್ಷಿಕೆಗಳು, 183 ಕ್ಷೇತ್ರ ಪ್ರಯೋಗಗಳು, 763 ಒಳ ಆವರಣ ತರಬೇತಿಗಳು, 607 ಹೊರ ಆವರಣ ತರಬೇತಿಗಳು, 258 ವೃತ್ತಿಪರ ಮತ್ತು ಕೌಶಲ್ಯ ಆಧರಿತ ಕಾರ್ಯಕ್ರಮಗಳು, 15 ಕಾರ್ಯಾಗಾರಗಳು, 15915 ಮಣ್ಣು ಮಾದರಿ ಮತ್ತು 9058 ನೀರಿನ ಮಾದರಿಗಳ ಪರೀಕ್ಷೆಗಳನ್ನು ನಡೆಸಿರುತ್ತದೆ.
• 2019ನೇ ಸಾಲಿನಲ್ಲಿ ವಿಶ್ವವಿದ್ಯಾಲಯ ವತಿಯಿಂದ ಸಾವಯವ ಕೃಷಿಯ ಆಧಾರದ ಮೇಲೆ ಭತ್ತ, ರಾಗಿ, ಮೆಕ್ಕ ಜೋಳ, ಅವರೆ, ತೊಗರಿ, ಸೋಯಾಬೀನ್ ಮತ್ತು ನೆಲಗಡಲೆ ಮುಂತಾದ 7 ವಿವಿಧ ಬೆಳೆಗಳ ಕುರಿತಂತೆ ಬೇಸಾಯ ಕ್ರಮಗಳನ್ನು ಅಭಿವೃದ್ಧಿಪಡಿಸಿದ್ದು, ಇವುಗಳನ್ನು ಪ್ರಕಟಿಸಿರುತ್ತದೆ.
• ಸಂರಕ್ಷಿತ ಕೃಷಿಯಡಿಯಲ್ಲಿ ಸಂಶೋಧನೆ ಮತ್ತು ಬಿತ್ತನೆ ಸಾಮಾಗ್ರಿಗಳ ಉತ್ಪಾದನೆಯನ್ನು ಕೈಗೊಳ್ಳಲು ವಿಶ್ವವಿದ್ಯಾಲಯವು 138 ಪಾಲಿಹೌಸ್‍ಗಳು ಮತ್ತು ನೆರಳು ಮನೆಗಳನ್ನು ಸ್ಥಾಪಿಸಿರುತ್ತದೆ.
• ನಮ್ಮ ವಿಶ್ವವಿದ್ಯಾಲಯದ ಎಲ್ಲಾ ಸಂಶೋಧನಾ ಕೇಂದ್ರಗಳಲ್ಲಿ ವಿವಿಧ ತೋಟದ ಬೆಳೆಗಳು, ಹಣ್ಣುಗಳು ಮತ್ತು ಸಾಂಬಾರು ಬೆಳೆಗಳನ್ನು 22 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು, 90 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿಯಲ್ಲಿ ರಸಗೊಬ್ಬರ ಪೂರೈಕೆ ವ್ಯವಸ್ಥೆ ಹಾಗೂ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿರುತ್ತದೆ.
• ಬ್ರಹ್ಮಾವರದ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಸಸ್ಯ ಬೆಳವಣಿಗೆಗೆ ಪೂರಕವಾಗಿ ಸೂಕ್ಷ್ಮಜೀವಿಗಳನ್ನು ಉತ್ತೇಜಿಸುವ, ಸೂಕ್ಷ್ಮಜೀವಿಯ ಗುಂಪನ್ನು ಒಳಗೊಂಡ ಸಹ್ಯಾದ್ರಿ-ತ್ರಿಶೂಲ್ ಉತ್ಪನ್ನವನ್ನು ಬಿಡುಗಡೆ ಮಾಡಲಾಗಿರುತ್ತದೆ. ಇದು ಬೆಳೆಗಳ ಕೀಟ ಮತ್ತು ರೋಗಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಸಾಮಥ್ರ್ಯವನ್ನು ಹೊಂದಿರುತ್ತದೆ.
• ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಬಿದಿರು ಉಪಚಾರ ಘಟಕವನ್ನು ಸ್ಥಾಪಿಸಲಾಗಿರುತ್ತದೆ.
• ನೀರಾವರಿಯ ಉತ್ತಮ ಸ್ಥಿತಿಗಾಗಿ ಸಮಗ್ರ ಕೃಷಿ ಪದ್ಧತಿ (ಐಎಫ್‍ಎಸ್) ಅಭಿವೃದ್ಧಿ, ವಲಯ-7ರ ಸಣ್ಣ ಮತ್ತು ಅತಿಸಣ್ಣ ರೈತರಿಗಾಗಿ 6 ಕೃಷಿ ಉದ್ಯಮವಾಗಿ ಸ್ಥಾಪಿಸಲು ಸೂಕ್ತವಾಗುವ ರೀತಿಯಲ್ಲಿ, ಅಂದರೆ ಬೆಳೆ ಘಟಕ (ಭತ್ತ-ಭತ್ತ/ ರಾಗಿ/ ದ್ವಿದಳ ಧಾನ್ಯಗಳ ಬೆಳೆ ವ್ಯವಸ್ಥೆ), ತೊಟಗಾರಿಕೆ (ಅಡಿಕೆ, ಬಾಳೆ, ನುಗ್ಗೆ, ತೆಂಗು) ಹೈನುಗಾರಿಕೆ ಘಟಕ, ಕುರಿ ಘಟಕ, ಮೀನುಗಾರಿಕೆ, ಜೇನು ಮತ್ತು ಜೈವಿಕ ಅನಿಲ ಘಟಕ (3ಮೀ3), ಎರೆಗೊಬ್ಬರ ಕಾಂಪೋಸ್ಟ್ ಘಟಕ + ಕಾಂಪೋಸ್ಟ್ ಘಟಕ + ಅಜೋಲ್ಲಾ + ಕೈ ತೋಟ + ಮೇವಿನ ಘಟಕ ಹಾಗೂ ಬದುವಿನಲ್ಲಿ ತೇಗ, ಕರಿಬೇವು, ಮೇವಿನ ಬೆಳೆ ಮತ್ತು ಗ್ಲಿರಿಸಿಡಿಯಾ ಸಸಿಗಳನ್ನು ಬೆಳಸಲು ಅಳವಡಿಸಲಾಗಿರುತ್ತದೆ.
• ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳೊಂದಿಗೆ ಸಕ್ರಿಯಗೊಳಿಸಲಾಗಿತ್ತು. ಕೋವಿಡ್-19 ರ ಸಮಯದಲ್ಲಿ ರೈತರಿಗಾಗಿ ವಿಶ್ವವಿದ್ಯಾಲಯವು ‘ಅಗ್ರಿವಾರ್ ರೂಂ’ ಸ್ತಾಪಿಸಿರುತ್ತದೆ. ಅಲ್ಲದೆ ವಿಶ್ವವಿದ್ಯಾಲಯವು ಈ ಸಂದರ್ಭದಲ್ಲಿ 974 ಟನ್ ಮೌಲ್ಯದ 4.3 ಕೋಟಿ ಮೌಲ್ಯದ ತರಕಾರಿಗಳು ಮತ್ತು ಹಣ್ಣುಗಳಿಗೆ ವಿವಿಧ ಪಾಲುದಾರರೊಂದಿಗೆ ಮಾರುಕಟ್ಟೆ ಸಂಪರ್ಕವನ್ನು ಏರ್ಪಡಿಸುವ ಮೂಲಕ ವಿಶ್ವವಿದ್ಯಾಲವು ರೈತರಿಗೆ ಅನುಕುಲ ಮಾಡಿಕೊಟ್ಟಿರುತ್ತದೆ. ಇದರ ಜೊತೆಗೆ 3981 ದೂರವಾಣಿ ಮೂಲಕ ಕೃಷಿ ಸಲಹೆಗಳು, 4887 ಕೃಷಿ ಸಲಹೆಗಳು, 288 ಕ್ಷೇತ್ರ ಭೇಟಿಗಳು ಹಾಗೂ 81,520 ಆನ್‍ಲೈನ್ ಸಲಹಾ ಸೇವೆಗಳನ್ನು ಒದಗಿಸಿರುತ್ತದೆ.
• ನಮ್ಮ ಪದವೀದರರು, ರೈತರು ಮತ್ತು ನಿರುದ್ಯೋಗಿ ಯುವಕರು ತಮ್ಮ ಆಲೋಚನೆಗಲನ್ನು ಸಟಾಟ್ \ ಆಫ್‍ಗಳ ಮೂಲಕ ಕಾರ್ಯಗತಗೊಳಿಸಿಕೊಳ್ಳಲು, ತಮ್ಮ ಬದುಕಿನ ಮಾರ್ಗವನ್ನು ಕಂಡುಕೊಳ್ಳುವ ಉದ್ದೇಶದಿಂದ ಅಗ್ರಿ-ಸ್ಟಾರ್ಟ್-ಅಪ್ ಟೆಕ್ನಾಲಜಿ ಇನ್‍ಕ್ಯುಬೇಶನ್ ಸೆಂಟರ್ (ಎಎಸ್‍ಟಿಐಸಿ) ಸ್ಥಾಪಿಸಲಾಗಿದೆ.
• ವಿಶ್ವವಿದ್ಯಾಲಯವು ವಾರ್ಷಿಕವಾಗಿ ಕೃಷಿಮೇಳ / ಕಿಸಾನ್‍ಮೇಳದಂತಹ ಮೆಗಾ ಕಾರ್ಯಕ್ರಮಗಳನ್ನು ನಡೆಸಿರುತ್ತದೆ. 2015ರಲ್ಲಿ-1 ಲಕ್ಷ, 2016ರಲ್ಲಿ-3 ರಿಂದ 4 ಲಕ್ಷ, 2018 ರಲ್ಲಿ-4 ರಿಂದ 5 ಲಕ್ಷ ಕೃಷಿಕರು/ ಕೃಷಿ ಮಹಿಳೆಯರು ಮೇಳಗಳಲ್ಲಿ ಭಾಗವಹಿಸಿರುತ್ತಿದ್ದರು.
• ವಿಶ್ವವಿದ್ಯಾಲಯವು ರೈತರಿಗಾಗಿ ನಿಯಕಾಲಿಕವಾಗಿ ಕನ್ನಡದಲ್ಲಿ ಪ್ರಕಟಿಸುತ್ತಿರುವ ನೇಗಿಲಮಿಡಿತ ಪತ್ರಿಕೆ ಹಾಗೂ ನೇಗಿಲ ಮಿಡಿತ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ಗೂಗಲ್ ಪ್ಲೇಸ್ಟೋರ್‍ನಿಂದ ಸುಮಾರು 10,000 ಡೌನ್‍ಲೋಡ್‍ಗಳನ್ನು ಮಾಡಿಕೊಂಡಿರುತ್ತಾರೆ. ಇದು ಗ್ರಾಹಕರ ರೇಟಿಂಗ್ 4.3, ಪ್ಲೇ ಸ್ಟೋರ್ ರೇಟಿಂಗ್ 3.2 ಮತ್ತು 27 ವಿಮರ್ಶೆಗಳು / ಕಾಮೆಂಟ್‍ಗಳ ಈ ಅಪ್ಲೇಕೇಶನ್‍ಗೆ ಬಂದಿರುತ್ತದೆ.
• ಅಡಿಕೆ, ಗೋಡಂಬಿ, ಶುಂಠಿ, ಮೆಣಸು, ಭತ್ತು ಮೆಕ್ಕಜೋಳ, ಮೀನುಗಾರಿಕೆ, ಪಶಸಂಗೋಪನೆ, ಅರಣ್ಯ ಬೆಳೆಗಳಾದ ಬಿದಿರು ಗಂಧ ಮುಂತಾದ ಬೆಳೆಗಳಿಗೆ ರೈತನಾಡಿ ಆ್ಯಪ್‍ನ್ನು ಪ್ರಾದೇಶಿಕ ಬಾಷೆಯಾದ ಕನ್ನಡದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗೂಗಲ್ ಪ್ಲೇಸ್ಟೋರ್‍ನಿಂದ ಸುಮಾರು 1,000 ಡೌನ್‍ಲೋಡ್ ಮಾಡಿಕೊಂಡಿದ್ದು ಗ್ರಾಹಕರ ರೇಟಿಂಗ್ 3.7, ಪ್ಲೇಸ್ಟೋರ್ ರೇಟಿಂಗ್‍ನಿಂದ 3 ಮತ್ತು 21 ವಿಮರ್ಶೆಗಳು ಈ ಅಪ್ಲಿಕೇಶನ್‍ಗೆ ಬಂದಿರುತ್ತವೆ.
• ಇದುವರೆಗೆ 33, ಕೃಷಿ ವಿಸ್ತರಣಾ ಸಲಹಾ ಸೇವಾ ಪರಿಕರ ವಿತರಕರ ಡಿಪ್ಲೋಮಾ (ಡಿಎಇಎಸ್‍ಐ) ಕಾರ್ಯಕ್ರಮಗಳನ್ನು ನಡೆಸಲಾಗಿರುತ್ತದೆ. ಈ ಕಾರ್ಯಕ್ರಮದಿಂದ 1321 ವಿತರಕರಿಗೆ ತರಬೇತಿ ನೀಡುವ ಮೂಲಕ ತಮ್ಮ ಡಿಪ್ಲೋಮಾವನ್ನು ಪುರ್ಣಗೊಳಿಸಿಕೊಂಡಿದ್ದು, ಇವರುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
• ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ (ಎಟಿಐಸಿ)ವು ರೈತರ ಅಗತ್ಯಗಳಿಗೆ ಅನುಗುಣವಗಿ ಏಕ ಗವಾಕ್ಷಿ ಪರಿಕಲ್ಪನೆಯಡಿಯಲ್ಲಿ ಪರಿಕರಗಳ ಮತ್ತು ಕೃಷಿ ತಂತ್ರಜ್ಞಾನದ ಮಾಹಿತಿಯನ್ನು ನೀಡುತ್ತಿದೆ.

ವಿಶ್ವವಿದ್ಯಾಲಯವು ಕಳೆದ ಐದು ವರ್ಷಗಳಿಂದ 35,733 ಕ್ವಿಂಟಾಲ್ ಬೀಜೋತ್ಪಾದನೆ, 33,63,593 ಸಂಖ್ಯೆಯ ನರ್ಸರಿ ಗಿಡಗಳು, 4,133 ಕೆಜಿಯಷ್ಟು ಜೇನುತುಪ್ಪ ಮತ್ತು 92,333 ಕೆಜಿ ಜೈವಿಕಗೊಬ್ಬರ ಉತ್ಪಾದನೆ ಮಾಡುವುದರ ಮೂಲಕ ಪ್ರಗತಿ ಪಥದತ್ತ ಮುನ್ನುಗುತ್ತಿದೆ.

ಮುಂದುವರೆದು, ವಿಷಮುಕ್ತಮಣ್ಣು, ವಿಷಮುಕ್ತ ನೀರು, ವಿಷಮುಕ್ತ ಆಹಾರ ಎಂಬ ಧ್ಯೇಯದೊಂದಿಗೆ, ಅತ್ಯಾಧುನಿಕ ವೈಜ್ಞಾನಿಕ ಕೃಷಿ ತಂತ್ರಜ್ಞಾನಗಳನ್ನು ಪರಿಸರ ಸ್ನೇಹಿಯಾಗಿ, ಪರಿಸರಕ್ಕೆ ಪೂರಕವಾಗಿ ಬಳಸಿ, ಹೊಸ ಕೃಷಿ ಕ್ರಾಂತಿಗೆ ನಾಂದಿ ಹಾಡಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಜೊತೆಗೆ ದೇಶದಲ್ಲಿ ಈಗಿರುವ 128 ಕೋಟಿ ಜನಸಂಖ್ಯೆಯು 2050ರ ವೇಳೆಗೆ 170 ಕೋಟಿಗೆ ಏರಬಹುದು ಎಂಬ ಅಂದಾಜಿದೆ. ಆದ್ದರಿಂದ ಅಧಿಕ ಆಹಾರದ ಉತ್ಪಾದನೆಗೆ ನೆರವಾಗಲು ಅಗತ್ಯವಿರುವ ಎಲ್ಲ ತಂತ್ರಜ್ಞಾನಗಳನ್ನು ಅನ್ನದಾತನಿಗೆ ಒದಗಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನವು ನಮ್ಮೆದುರಿಗಿರುವ ಎಲ್ಲಾ ಸವಾಲುಗಳನ್ನು ಎದುರಿಸಲು ಸಮರ್ಥವಾಗಿದೆ ಕೂಡ. ಪ್ರಸ್ತುತ ಸ್ವಾವಲಂಬಿ ಆತ್ಮನಿರ್ಭರ ಭಾರತಕ್ಕೆ, ಆತ್ಮನಿರ್ಭರ ರೈತರನ್ನು ತಯಾರು ಮಾಡುವ ಸಂಕಲ್ಪವನ್ನು,ನಮ್ಮ ಪ್ರಧಾನಿಯವರು ಕೈಗೊಂಡಿದ್ದಾರೆ. ಇವರ ಕರೆಗೆ ಒಗೊಟ್ಟು ಈ ನಿಟ್ಟಿನಲ್ಲಿ ಸೂಕ್ತಮಾರ್ಗ ಅನುಸರಿಸದಿದ್ದರೆ, ಮುಂಬರುವ ದಿನಗಳಲ್ಲಿ ಅನ್ನ ನೀರಿಗಾಗಿ ಯುದ್ಧಗಳೇ ನಡೆದರೂ ಆಶ್ಚರ್ಯವಿಲ್ಲ.

“ ಜೈ ಜವಾನ್ ಜೈ ಕಿಸಾನ್”

error: Content is protected !!