ಲಾಕ್ಡೌನ್ ಸಂಕಷ್ಠದಲ್ಲಿರುವ ರೈತರ ನೆರವಿಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದಿಂದ ಮತ್ತೊಂದು ಕಾರ್ಯಕ್ರಮ. ರೈತರ ಮನೆ ಬಾಗಿಲಿಗೆ ಸಸಿಗಳು ಹಾಗೂ ಬಿತ್ತನೆ ಬೀಜಗಳನ್ನು ಒದಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿಶ್ವವಿದ್ಯಾಲಯದ ವಿವಿಧ ಸಂಶೋಧನಾ ಕೇಂದ್ರಗಳಲ್ಲಿ ರೈತರಿಗೆ ಒದಗಿಸಲು ಈ ವರ್ಷ ವಿವಿಧ ಬೆಳೆ/ತಳಿಗಳ ಸುಮಾರು 8600 ಕ್ವಿಂಟಾಲ್ ಪ್ರಮಾಣಿತ ಬೀಜ ಮತ್ತು 5,32,000 ವಿವಿಧ ತೋಟಗಾರಿಕೆ ಬೆಳೆಗಳ ಗುಣಮಟ್ಟದ ಸಸಿಗಳನ್ನು ಉತ್ಪಾದಿಸಲಾಗಿದೆ. ಈ ಯೋಜನೆಯಡಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಮಡಿಕೇರಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ರೈತರಿಗೆ ಈ ಕೆಳಗೆ ಕೊಟ್ಟಿರುವ ಬೆಳೆಗಳ ಪ್ರಮಾಣಿತ ಬೀಜ ಮತ್ತು ಗುಣಮಟ್ಟದ ಸಸಿಗಳು ವಿಶ್ವವಿದ್ಯಾಲಯದಲ್ಲಿ ಲಭ್ಯವಿದ್ದು ಅವುಗಳನ್ನು ಬೇಡಿಕೆ ಆಧರಿಸಿ ರೈತರಿಗೆ ಹತ್ತಿರದ ನಮ್ಮ ಸಂಶೋಧನಾ ಕೇಂದ್ರಗಳಿಂದ ವಿಶ್ವವಿದ್ಯಾಲಯದ ವಾಹನಗಳಲ್ಲಿ ರೈತರ ಮನೆ ಬಾಗಿಲಿಗೆ ಒದಗಿಸಲಾಗುವುದು (ಸೀಮಿತ ಅವಧಿಯವರೆಗೆ ಮಾತ್ರ).
ಕ್ರ. ಸಂ. ಕೃಷಿ ಬೆಳೆಗಳು (ಬೀಜ) ಕ್ರ. ಸಂ. ತೋಟಗಾರಿಕೆ ಬೆಳೆಗಳು (ಸಸಿಗಳು)
ಬೆಳೆ ತಳಿ ಬೆಳೆ ತಳಿ
- ಭತ್ತ ತುಂಗಾ 1 ಪಪ್ಪಾಯ ತೈವಾನ್ ರೆಡ್ ಲೇಡಿ
ಎಂಟಿಯು-1001 2 ಸಪೋಟ ಗ್ರಾಫ್ಟ್ ಕ್ರಿಕೆಟ್ ಬಾಲ್/ತಾಲಿಪಟ್ಟಿ
ಎಮ್ಓ-4 3 ಮಾವು ಗ್ರಾಫ್ಟ್ ಆಲ್ಫನ್ಸೋ / ಇತರೆ
ಜ್ಯೋತಿ 4 ನಿಂಬೆ ಕಾಜಿ ನಿಂಬೆ /ಗಜ ನಿಂಬೆ
ಕೆಪಿಆರ್-1 5 ತೆಂಗು ಅರಸೀಕೆರೆ ಸ್ಥಳೀಯ / ಕೆಂದಾಳ
ಕೆಎಚ್ಪಿ-2 6 ಅಡಿಕೆ (ಸಸಿಗಳು) ತೀರ್ಥಹಳ್ಳಿ, ತರೀಕೆರೆ, ಚೆನ್ನಗಿರಿ ಲೋಕಲ್/ ಮಂಗಳ
ಕೆಎಚ್ಪಿ-10 7 ಗೇರು ಉಳ್ಳಾಲ್/ವಿ-4 /ವಿ-7 /ಉಳ್ಳಾಲ್-1, 3
ಕೆಎಚ್ಪಿ-11 8 ಕೋಕಂ ಪುನರ್ಪುಳಿ
ಕೆಎಚ್ಪಿ-13 9 ಕಾಳುಮೆಣಸು (ಗ್ರಾಫ್ಟ್) ಪನಿಯೂರ್ - ರಾಗಿ ಜಿಪಿಯು-28 10 ಕಾಳುಮೆಣಸು(ಕಟ್ಟಿಂಗ್) ಪನಿಯೂರ್-1, 5 & ಇತರೆ ತಳಿಗಳು
ಎಮ್ಎಲ್-365 11 ಕರಿಬೇವು ಸುಹಾಸಿನಿ/ ಲೋಕಲ್ - ಹೆಸರು ಕೆಕೆಎಂ-3 12 ನುಗ್ಗೆ ಭಾಗ್ಯ /ಪಿಕೆಎಂ-1
- ಸೋಯಾಬೀನ್ ಡಿಎಸ್ಬಿ-21 13 ಕಾಫಿ ರೋಬಸ್ಟ/ಇತರೆ ತಳಿಗಳು
ಅಗತ್ಯವಿರುವ ರೈತರು ತಮ್ಮ ಬೇಡಿಕೆಯನ್ನು ದೂರವಾಣಿ ಮೂಲಕ ಅಗ್ರಿ ವಾರ್ ರೂಂ ಸಂಪರ್ಕಿಸಬಹುದು (08182-267017) ಅಥವಾ ಈ ಕೆಳಕಂಡ ಬೀಜ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಬಹುದು.
1) ಡಾ|| ಹೆಚ್.ಡಿ. ಮೋಹನ್ ಕುಮಾರ್, ವಿಶೇಷ ಅಧಿಕಾರಿ
ಮೊಬೈಲ್ ಸಂಖ್ಯೆ: 9480838967 / 94808 38991
2) ಡಾ|| ಬಿ. ಮಂಜುನಾಥ್, ಸಹಾಯಕ ಬೀಜೋತ್ಪಾದನಾ ಅಧಿಕಾರಿ
ಮೊಬೈಲ್ ಸಂಖ್ಯೆ: 94808 38213
3) ಡಾ|| ಕೆ. ಸಿ. ಶಶಿಧರ್, ವಿಸ್ತರಣಾ ನಿರ್ದೇಶಕರು
4) ಮೊಬೈಲ್ ಸಂಖ್ಯೆ: 94808 38957
ವಿಶ್ವವಿದ್ಯಾಲಯವು ನೇರವಾಗಿ ಬೀಜವನ್ನು ಒದಗಿಸುವ ವ್ಯವಸ್ಥೆ ಇದಾಗಿರುವುದರಿಂದ ಇಲ್ಲಿ ಯಾವುದೇ ರಿಯಾಯಿತಿ ವ್ಯವಸ್ಥೆ ಇರುವುದಿಲ್ಲ. ಗ್ರಾಮದ ರೈತರು ಅಥವಾ ಅಕ್ಕ ಪಕ್ಕದ ಗ್ರಾಮಗಳಿಂದ ಒಟ್ಟಾಗಿ ಸೇರಿ ಕನಿಷ್ಠ 8 ರಿಂದ 10 ಕ್ವಿಂಟಾಲ್ ಬೀಜದ ಬೇಡಿಕೆ ಸಲ್ಲಿಸಿದಲ್ಲಿ ಮನೆ ಬಾಗಿಲಿಗೆ ತಲುಪಿಸಲಾಗುವುದು. ಕನಿಷ್ಠ ಒಂದು ಎಕರೆಗೆ ಬೇಕಾಗುವ ಸಸಿಗಳಿಗೆ ಬೇಡಿಕೆ ಒದಗಿಸಿದರೆ ಸಸಿಗಳನ್ನು ಸಹ ಮನೆÀ ಬಾಗಿಲಿಗೆ ತಲುಪಿಸಲಾಗುವುದು. ಈ ವ್ಯವಸ್ಥೆಯ ಸದುಪಯೋಗವನ್ನು ರೈತರು/ರೈತ ಉತ್ಪಾದಕ ಗುಂಪುಗಳು, ಸ್ವಸಹಾಯ ಸಂಘಗಳು ಇತರೆ ಯಾವುದೇ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಸಂಘ ಸಂಸ್ಥೆಗಳು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಂ. ಕೆ. ನಾಯಕ್ರವರು ತಿಳಿಸಿರುತ್ತಾರೆ.