ಪರೀಕ್ಷೆ ಮುಕ್ತಾಯಗೊಂಡ ದಿನ- ಸೆಪ್ಟೆಂಬರ್ 12, ಫಲಿತಾಂಶ ಇಂದು ( ಸೆಪ್ಟೆಂಬರ್ 14) ಪ್ರಕಟ.

48 ತಾಸಿನೊಳಗೆ ಫಲಿತಾಂಶ ಪ್ರಕಟಿಸಿದ ಕುವೆಂಪು ವಿವಿ

ಶಂಕರಘಟ್ಟ, ಸೆ. 14: ಕುವೆಂಪು ವಿಶ್ವವಿದ್ಯಾಲಯದ ಬಿ.ಸಿ.ಎ. (ಬ್ಯಾಚಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್) ಪದವಿಯ 5 ಮತ್ತು 6ನೇ ಸೆಮಿಸ್ಟರ್ಗಳ ಪರೀಕ್ಷೆ ಮುಗಿದು 48 ತಾಸಿನೊಳಗೆ ಫಲಿತಾಂಶ ಪ್ರಕಟಿಸಿ ವಿವಿಯು ಶೈಕ್ಷಣಿಕ ದಾಖಲೆ ಸೃಷ್ಟಿಸಿದೆ.

ಶೀಘ್ರ ಮೌಲ್ಯಮಾಪನಕ್ಕೆ ವಿವಿಯು ಈಗಾಗಲೇ ಹೆಸರಾಗಿದ್ದು ಹಿಂದೆಯೂ ಶೀಘ್ರವಾಗಿ ಫಲಿತಾಂಶ ನೀಡಿ ವಿದ್ಯಾರ್ಥಿಗಳಿಗೆ ನೆರವಾಗಿತ್ತು. ಪ್ರಸ್ತುತ ನಾನ್-ಎನ್.ಇ.ಪಿ. ಬ್ಯಾಚ್ ನ ಬಿ.ಸಿ.ಎ. ಪದವಿಯ 5 ಮತ್ತು 6ನೇ ಸೆಮಿಸ್ಟರ್ಗಳ ಫಲಿತಾಂಶವನ್ನು ಪರೀಕ್ಷೆ ಮುಕ್ತಾಯಗೊಂಡ ಕೇವಲ 2 ದಿನಗಳೊಳಗೆ ಪ್ರಕಟಿಸಲಾಗಿದೆ.

ಫಲಿತಾಂಶವು ವಿದ್ಯಾರ್ಥಿಗಳ ಪೋರ್ಟಲ್ ನಲ್ಲಿಯೂ ಸಹ ಲಭ್ಯವಿದೆ. ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಸಂದೇಶದ ಮೂಲಕವೂ ತಲುಪಿಸಲಾಗಿದೆ.

ತ್ವರಿತಗತಿ ಫಲಿತಾಂಶ ಪ್ರಕಟಣೆ ಕುರಿತು ಸಂತಸ ವ್ಯಕ್ತಪಡಿಸಿ ಮಾತನಾಡಿದ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್ ಎಂ ಗೋಪಿನಾಥ್, ವಿವಿ ವ್ಯಾಪ್ತಿಯ ಬಿ.ಸಿ.ಎ. ಪದವಿಯ ಅಂತಿಮ ವರ್ಷದ ಪರೀಕ್ಷಾ ಫಲಿತಾಂಶವನ್ನು ಶೀಘ್ರವಾಗಿ ಪ್ರಕಟಿಸಲು ವಿವಿಯ ಪರೀಕ್ಷಾಂಗ ಸಿಬ್ಬಂದಿ, ಬೋಧಕ ವರ್ಗ ಸಾಕಷ್ಟು ಶ್ರಮಿಸಿದೆ. ಅವರ ಸಹಕಾರದಿಂದ ತ್ವರಿತವಾಗಿ ಫಲಿತಾಂಶ ನೀಡಿ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗ, ಉದ್ಯೋಗಕ್ಕೆ ಅಗತ್ಯ ನೆರವು ನೀಡಲಾಗಿದೆ ಎಂದು ತಿಳಿಸಿದರು.

error: Content is protected !!